ಹಾವೇರಿ

ಗೌರವಯುತ ಬದುಕು ಸಾಗಿಸಿ: ಶ್ರೀ

Published On :

ಹಾನಗಲ್ಲ: ಮನಸ್ಸನ್ನು ಗಟ್ಟಿಗೊಳಿಸಿ, ಮದ್ಯಪಾನ ತ್ಯಜಿಸಿ, ನೆಮ್ಮದಿಯ, ಗೌರವಯುತ ಜೀವನಕ್ಕೆ ನಾಂದಿ ಹಾಡಬೇಕೆಂದು ಅಕ್ಕಿಆಲೂರು ವಿರಕ್ತಮಠದ ಶಿವಬಸವ ಸ್ವಾಮೀಜಿ ಕರೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ, ಮದ್ಯಪಾನ ಸಂಯಮ ಮಂಡಳಿ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ನಡೆದ 658ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಅವರು, ಧರ್ಮಸ್ಥಳದ ಮಹಿಮೆ, ಶಿಬಿರಾಧಿಕಾರಿಗಳ ಸತತ ಪ್ರಯತ್ನ ಹಾಗೂ ಸಂಘಟಕರ ಸಹಕಾರದಿಂದ ಹಲವು ಮದ್ಯಮುಕ್ತರು ನವಜೀವನಕ್ಕೆ ಕಾಲಿಡುವಂತಾಗಿದೆ. ಕುಟುಂಬದ ಸದಸ್ಯರು ಅವರೊಂದಿಗೆ ಪ್ರೀತಿ-ವಿಶ್ವಾಸದಿಂದ ನಡೆದುಕೊಳ್ಳಬೇಕು. ಪಾನಮುಕ್ತರಾದ ಶಿಬಿರಾರ್ಥಿಗಳು ತಮ್ಮ ನಡೆ-ನುಡಿ ತಿದ್ದಿಕೊಂಡು, ಸಮಾಜದಲ್ಲಿ ಆದರ್ಶ ಜೀವನ ನಡೆಸಬೇಕು. ಪ್ರಯೋದನೆಗೆ ಬಲಿಯಾಗದಂತೆ ಮನಸ್ಸನ್ನು ಗಟ್ಟಿ ಮಾಡಿಕೊಂಡು, ಚಿತ್ತಶುದ್ಧಿ ಹೊಂದಬೇಕು. ಮಧ್ಯವಷ್ಟೇ ಅಲ್ಲ, ತಂಬಾಕು ಸೇವನೆ, ಧೂಮಪಾನ ತ್ಯಜಿಸಿ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಜಿಪಂ ಸದಸ್ಯ ಪದ್ಮನಾಭ ಕುಂದಾಪುರ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಮಾತನಾಡಿ, ಶಿಬಿರಾರ್ಥಿಗಳ ಬದಲಾವಣೆಯೇ ಶಿಬಿರದ ಸಾರ್ಥಕತೆ ಎಂದರು.
ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ, ಬ್ಯಾಡಗಿ ಪುರಸಭೆ ಸದಸ್ಯ ಮುರಿಗೆಪ್ಪ ಶೆಟ್ಟರ, ಸಮಿತಿ ಕೋಶಾಧ್ಯಕ್ಷ ಕೆ.ಎಲ್. ದೇಶಪಾಂಡೆ, ಯೋಜನಾಧಿಕಾರಿ ಕೆ. ಸದಾನಂದ, ಸದಸ್ಯ ಅಶೋಕ ಕಲಾಲ, ರಾಜೂ ನಂದಿ, ಶಿಬಿರಾಧಿಕಾರಿ ನಾಗೇಶ, ಯೋಗ ಶಿಕ್ಷಕ ಗುರುರಾಜ ಜೋಷಿ, ಜಯಕರ್ನಾಟಕ ಸಂಘಟನೆ ಅಧ್ಯಕ್ಷ ರಾಮು ಯಳ್ಳೂರ, ಜಿಲ್ಲಾ ಸಂಚಾಲಕ ಶ್ರೀಕಾಂತ ಕೊಂಚಿಗೇರಿ, ಮಾಲತೇಶ ಕೊಲ್ಲಾಪುರ, ದಶರಥ ಮಾನೆ ಇದ್ದರು. ಮೇಲ್ವಿಚಾರಕ ಧನಂಜಯ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.