ಹುಲ್ಲತ್ತಿ ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆ
ಹಿರೇಕೆರೂರು: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹುಲ್ಲತ್ತಿ ಗ್ರಾಪಂಗೆ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಹನುಮಂತಪ್ಪ ದೀವಿಗಿಹಳ್ಳಿ ಮಾತನಾಡಿ, 2ನೇ ವಾರ್ಡಿನಲ್ಲಿ ಕುಡಿಯುವ ನೀರಿನ ತತ್ವಾರವಾಗಿದೆ. ಬೀದಿ ದೀಪಗಳಿಲ್ಲದೆ ಕತ್ತಲಲ್ಲೇ ಭಯದಿಂದ ಓಡಾಡಬೇಕಾಗಿದೆ. ವರ್ಷದ ಹಿಂದೆ ನಿರ್ಮಿಸಿದ್ದ ಓವರ್ ಹೆಡ್ ಟ್ಯಾಂಕ್ ಕಳಪೆಯಾಗಿದೆ. ಗೌಡನಕಟ್ಟಿ ಕೆರೆಗೆ ನೀರು ಹರಿಸದೆ, ದನ-ಕರುಗಳಿಗೆ ತೊಂದರೆಯಾಗಿದೆ. ಗ್ರಾಮದಲ್ಲಿ ನಿರ್ಮಿಸಿರುವ ಇಂದಿರಾ ವಸತಿ ಯೋಜನೆ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಈ ಕುರಿತು ಮನವಿ ಮಾಡಿದ್ದರೂ ಗ್ರಾಪಂ ಆಡಳಿತ ಸ್ಪಂದಿಸಿಲ್ಲ ಎಂದು ದೂರಿದರು. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ತಾಪಂ ಇಒ ಮನವೊಲಿಸಲು ಮುಂದಾದರೂ ಗ್ರಾಮಸ್ಥರು ಜಗ್ಗಲಿಲ್ಲ. ಆಶ್ವಾಸನೆ ಬೇಡ. ಲಿಖಿತ ರೂಪದಲ್ಲಿ ಹೇಳಿಕೆ ಕೊಡಿ. ಜಿಪಂ ಸಿಇಒ ಸ್ಥಳಕ್ಕೆ ಬರಲಿ ಎಂದರು.
ಶಾಸಕರ ಭರವಸೆ: ಶಾಸಕ ಯು.ಬಿ. ಬಣಕಾರ ಹುಲ್ಲತ್ತಿ ಗ್ರಾಮಕ್ಕೆ ಆಗಮಿಸಿ, ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದರು. ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚಿಸಿದರು. ಖಾತ್ರಿ ಯೋಜನೆಯಡಿ ಗ್ರಾಮದ ಎಲ್ಲ ಅಗತ್ಯ ಕಾಮಗಾರಿ ನಿರ್ವಹಿಸುವಂತೆ ತಿಳಿಸಿದರು.
ರಾಘವೇಂದ್ರ ಹಾದ್ರಿಹಳ್ಳಿ, ನಾಗನಗೌಡ ಪಾಟೀಲ, ನಾಗಪ್ಪ ದೀವಿಗಿಹಳ್ಳಿ, ಬಲವಂತಪ್ಪ ಉಪ್ಪಾರ, ಶೇಖಪ್ಪ ಕಜ್ಜರಿ, ಶಿವು ದೀವಿಗಿಹಳ್ಳಿ, ಪರಮೇಶಪ್ಪ ಮಡಿವಾಳರ, ಜಯಪ್ಪ ಕಟ್ಟಿಗೇರಿ, ಹನುಮಂತಪ್ಪ ಬೆನ್ನೂರ, ನಾಗಪ್ಪ ಜಾಡರ, ನಾಗರಾಜ ಎಲಿಗಾರ, ರಾಜು ಕನ್ನೇರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

