ಹಾವೇರಿ

ಮೂಲಭೂತ ಹಕ್ಕುಗಳಿಗೆ ಜನತೆ ನಿರಂತರ ಹೋರಾಟ

Published On :

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜ. 26
ವಿವಿಧ ಧರ್ಮ, ಜಾತಿ, ಜನಾಂಗದ ಜನರಿರುವ ದೇಶದಲ್ಲಿ ಶಾಸನಬದ್ಧ ಗಣತಂತ್ರ ವ್ಯವಸ್ಥೆ ಒಪ್ಪಿಕೊಂಡಿರುವ ನಾವು ಮೂಲಭೂತ ಹಕ್ಕುಗಳಿಗಾಗಿ ಇಂದಿಗೂ ಹೋರಾಟ ನಡೆಸಬೇಕಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ವಿಷಾದಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಶ್ರಯದಲ್ಲಿ ಸ್ಥಳೀಯ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ 65ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನಸಂಖ್ಯೆ ಹೆಚ್ಚಳ, ಪ್ರಾಮಾಣಿಕರ ಕೊರತೆ, ನಿರುದ್ಯೋಗ, ಬಡತನ ಮುಂತಾದ ಸಮಸ್ಯೆಗಳು ದೇಶ ಪ್ರಗತಿಗೆ ತೊಡಕಾಗುತ್ತಿವೆ ಎಂದರು.
ಇದಕ್ಕೂ ಮುನ್ನ ಗೌರವರಕ್ಷೆ ಸ್ವೀಕರಿಸಿ ಸಂದೇಶ ನೀಡಿದ ತಹಸೀಲ್ದಾರ್ ಶಿವಶಂಕರ ನಾಯಕ್, ರಾಷ್ಟ್ರೀಯತೆ ಎಂಬುದು ಪ್ರತಿಯೊಬ್ಬರ ಅಭಿಮಾನದ ವಿಷಯವಾಗಬೇಕು. ಏಕತೆ ಸಾಧಿಸುವ ಮೂಲಕ ದೇಶದ ಭದ್ರತೆಗೆ ಪಣ ತೊಡಬೇಕಾದ ದಿನಗಳು ಸಮೀಪಿಸುತ್ತಿವೆ. ಭಯೋತ್ಪಾದನೆ, ಭ್ರಷ್ಟಾಚಾರ, ನಿರುದ್ಯೋಗ ಇನ್ನಿತರ ಜ್ವಲಂತ ಸಮಸ್ಯೆಗಳ ನಿರ್ಮೂಲನೆಗೆ ಕೈಜೋಡಿಸಿ, ಸಂದಿಗ್ಧ ಪರಿಸ್ಥಿತಿಯಲ್ಲಿರುವ ದೇಶವನ್ನು ವಿಶ್ವದ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲುವಂತೆ ಮಾಡಬೇಕಾಗಿದೆ ಎಂದರು.
ತಾಪಂ ಅಧ್ಯಕ್ಷೆ ಚಿನ್ನಮ್ಮ ಪಾಸಿ, ಉಪಾಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ, ಜಿಪಂ ಸದಸ್ಯರಾದ ವಿರೂಪಾಕ್ಷಪ್ಪ ಬಳ್ಳಾರಿ, ಶಂಕ್ರಣ್ಣ ಮಾತನವರ, ಎಪಿಂಎಂಸಿ ಅಧ್ಯಕ್ಷ ಜಗದೀಶ ಕಣಗಲಭಾವಿ, ಸದಸ್ಯರಾದ ರವೀಂದ್ರ ಪಟ್ಟಣಶೆಟ್ಟಿ, ರಮೇಶ ಸುತ್ತಕೋಟಿ, ಸುರೇಶ ಹುಳಬುತ್ತಿ, ಪುರಸಭೆ ಸದಸ್ಯರಾದ ಮುರಿಗೆಪ್ಪ ಶೆಟ್ಟರ, ರಾಮಣ್ಣ ಕೋಡಿಹಳ್ಳಿ, ಮುನ್ನಾಫ್ ಎರೇಶೀಮಿ, ಪ್ರಶಾಂತ ಯಾದವಾಡ, ಯಮನೂರಪ್ಪ ಉಜನಿ ಇದ್ದರು. ಶಿಕ್ಷಣಾಧಿಕಾರಿ ಸಿ. ಪ್ರಸನ್ನಕುಮಾರ್ ಸ್ವಾಗತಿಸಿದರು. ಬಿ.ಎಫ್. ದೊಡ್ಮನಿ ನಿರೂಪಿಸಿದರು. ಜಿ. ಸುಮಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.