ಜೂ. 20ರಿಂದ 14 ದಿನಗಳ ಕೈಲಾಸ ಮಾನಸ ಸರೋವರ ಯಾತ್ರೆ
ಹುಬ್ಬಳ್ಳಿ: ಬೆಂಗಳೂರಿನ ನಾರಾಯಣಿ ಹಾಲಿಡೇಸ್ ವತಿಯಿಂದ ಜೂನ್ 20ರಿಂದ ಪವಿತ್ರ ಕೈಲಾಸ ಮಾನಸ ಸರೋವರ ಯಾತ್ರೆ ಆಯೋಜಿಸಲಾಗಿದೆ. ಈ ವಿಶೇಷ ಯಾತ್ರೆ 14 ದಿನಗಳದ್ದಾಗಿದ್ದು, ಬೆಂಗಳೂರಿನಿಂದ ನೇಪಾಳದ ಕಠ್ಮಂಡುವಿಗೆ, ಕಠ್ಮಂಡುವಿನಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಲಾಗುವುದು. ಶಾಶ್ವತಿ ಧಾರ್ಮಿಕ ಮಹಾಸಂಸ್ಥಾನ ಸ್ಥಾಪಕರಾದ ವೇದಬ್ರಹ್ಮ ಡಾ. ಭಾನುಪ್ರಕಾಶ ಶರ್ಮಾ ನೇತೃತ್ವದಲ್ಲಿ ಮಾನಸ ಸರೋವರದ ತಟದಲ್ಲಿ ಜೂ. 26ರಂದು ಶಕ್ತಿ ಸಹಿತ ಮಹಾರುದ್ರಯಾಗ ಹಾಗೂ ಮಹಾಲಕ್ಷ್ಮೀ ಸಮೇತ ಸತ್ಯನಾರಾಯಣ ಪೂಜೆ ನೆರವೇರಿಸಲಾಗುವುದು.
ಯಾತ್ರೆಯಲ್ಲಿ ನುರಿತ ಮಾರ್ಗದರ್ಶಕರೊಂದಿಗೆ ವಸತಿ ಹಾಗೂ ಸಸ್ಯಾಹಾರಿ ದಕ್ಷಿಣ ಭಾರತದ ಭೋಜನ ವ್ಯವಸ್ಥೆ ಮಾಡಲಾಗುವುದು. ಪವಿತ್ರ ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗುವ ಯಾತ್ರಾರ್ಥಿಗಳಿಗೆ ಕರ್ನಾಟಕ ಸರ್ಕಾರ ಯಾತ್ರೆಯ ನಂತರ ರು. 30 ಸಾವಿರ ಧನಸಹಾಯ ನೀಡುತ್ತದೆ. ಬೆಂಗಳೂರಿನ ನಾರಾಯಣಿ ಹಾಲಿಡೇಸ್ ಕಳೆದ ಹಲವು ವರ್ಷಗಳಿಂದ ಕೈಲಾಸ ಮಾನಸ ಸರೋವರ ಯಾತ್ರೆ ಹಮ್ಮಿಕೊಳ್ಳುತ್ತಿದೆ. ನೇಪಾಳದ ಪ್ರವಾಸೋದ್ಯಮ ಮಂಡಳಿಯ ಅಧಿಕೃತ ಸಾರ್ವಜನಿಕ ಸಂಪರ್ಕ ಕೇಂದ್ರವಾಗಿಯೂ ನೇಪಾಳವನ್ನು ಪ್ರತಿನಿಧಿಸುವ ಸಂಸ್ಥೆಯಾಗಿ ನಾರಾಯಣಿ ಹಾಲಿಡೇಸ್ ಕಾರ್ಯನಿರ್ವಹಿಸುತ್ತಿದೆ.
ಯಾತ್ರೆಯಲ್ಲಿ ಭಾಗವಹಿಸಲಿಚ್ಛಿಸುವವರು ಮೆ. ನಾರಾಯಣಿ ಹಾಲಿಡೇಸ್, ನಂ. 24, 'ಬಾಲಾಜಿ ಪ್ಲಾಜಾ', 2ನೇ ಮಹಡಿ, 2ನೇ ಅಡ್ಡ ರಸ್ತೆ, ಕಿರ್ಲೋಸ್ಕರ್ ಕಾಲೋನಿ, 2ನೇ ಹಂತ, ಶಂಕರ ಮಠದ ವೃತ್ತದ ಹತ್ತಿರ, ಬಸವೇಶ್ವರ ನಗರ, ಬೆಂಗಳೂರು-560079 (ದೂಸಂ-080 42151225/226 ಅಥವಾ ಮೊಸಂ-98456 08096) ವಿಳಾಸ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದೆಂದು ನಾರಾಯಣಿ ಹಾಲಿಡೇಸ್ನ ವ್ಯವಸ್ಥಾಪಕ ನಿರ್ದೇಶಕ ಎ.ವಿ. ಮೂರ್ತಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

