ಹಾವೇರಿ

ಮಳೆಗಾಗಿ ಮಲ್ಲಿಗ್ಗಾರ ಗ್ರಾಮಸ್ಥರಿಂದ ಪೂಜೆ

Published On :

ಹಾನಗಲ್ಲ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕಂಗೆಟ್ಟ ರೈತ ಸಮುದಾಯ ಹಾಗೂ ಸಾರ್ವಜನಿಕರು ದೈವಿಶಕ್ತಿಗೆ ಮೊರೆ ಹೋಗುತ್ತಿದ್ದು, ವರುಣನ ಕೃಪೆ ಹಾಗೂ ಸಮೃದ್ಧ ಫಸಲು ಪಡೆಯಲು ತಾಲೂಕಿನ ಮಲ್ಲಿಗ್ಗಾರ ಗುಡ್ಡದ ಮೇಲಿರುವ ಪುರಾತನ ಗುರುಸಿದ್ಧರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆದವು.
ದೇವಸ್ಥಾನದ ಪ್ರಧಾನ ಅರ್ಚಕ ಎಸ್.ವಿ. ಹಿರೇಮಠ ನೇತೃತ್ವದಲ್ಲಿ ಬೆಳಗಿನಿಂದಲೇ ಪೂಜಾ ವಿಧಿ-ವಿಧಾನಗಳು ನಡೆದವು. ಮಹಾರುದ್ರಾಭಿಷೇಕ, ಹೂವಿನ ಅಲಂಕಾರ ಸೇರಿದಂತೆ ಗುರುಸಿದ್ಧರಾಮೇಶ್ವರ ದೇವರಿಗೆ ವಿವಿಧ ಪೂಜೆಗಳನ್ನು ಸಲ್ಲಿಸಲಾಯಿತು. ಬೆಳಗಿನಿಂದ ಮಧ್ಯಾಹ್ನವರೆಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಿ, ಮಳೆಗಾಗಿ ಪ್ರಾರ್ಥಿಸಿದರು. ನಂತರ ಅನ್ನಸಂತರ್ಪಣೆ ನಡೆಸಲಾಯಿತು. ಸಿದ್ಧರಾಮೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ನಾಗಪ್ಪ ಸವದತ್ತಿ, ಉಪಾಧ್ಯಕ್ಷ ಮಹದೇವಪ್ಪ ಹಾವೇರಿ, ಕಾರ್ಯದರ್ಶಿ ಶೇಖಯ್ಯ ಅಡಿವೇರ, ಸದಸ್ಯರಾದ ಕಾಶೀನಾಥ ನ್ಯಾಮತಿ, ಗುರುಶಾಂತಪ್ಪ ಕಂಟೆಪ್ಪನವರ, ಗಣೇಶ ಕಪ್ಪಣ್ಣನವರ, ಶೈಲಜಾ ಹಾವೇರಿ, ಫಕ್ಕೀರಗೌಡ್ರು ಪಾಟೀಲ, ಬಸವರಾಜ ಕತ್ಲಿ, ಗ್ರಾಮಸ್ಥರಾದ ಬಸವರಾಜ ಪಾಟೀಲ, ಶಿವರಾಯಪ್ಪ ಅಡಿವೇರ, ವೀರೇಶ ಕತ್ಲಿ, ಬಸವರಾಜ ಸಿದ್ದನಗೌಡ್ರ, ಕಲಾಂಸಾಬ ಮಾಸನಕಟ್ಟಿ, ಮಹದೇವಪ್ಪ ಪಾಟೀಲ ಇತರರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.