ಸಚ್ಚಿದಾನಂದ ವಾಲುಕೇಶ್ವರ ಭಾರತಿ ಹಾನಗಲ್ಗೆ ಇಂದು
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಜು. 9
ಕೂಡಲ ಶೃಂಗೇರಿ ಮಠದ ಹಿರಿಯ ಶ್ರೀಗಳಾದ ಶ್ರೀಮಜ್ಜಗದ್ಗುರು ಸಚ್ಚಿದಾನಂದ ವಾಲುಕೇಶ್ವರ ಭಾರತಿ ಸ್ವಾಮೀಜಿ ಹಾನಗಲ್ಲಿನ ಶಂಕರ ಮಠಕ್ಕೆ ಜು. 10ರಂದು ಆಗಮಿಸಲಿದ್ದು, ತಾಲೂಕಿನ ಸದ್ಭಕ್ತರು ಪಾಲ್ಗೊಳ್ಳಬೇಕೆಂದು ಬ್ರಾಹ್ಮಣ ಸಮಾಜದ ಮುಖಂಡ ಘನಶ್ಯಾಮ್ ದೇಶಪಾಂಡೆ ಮನವಿ ಮಾಡಿದರು.
ಪಟ್ಟಣದ ಶ್ರೀಶಂಕರ ಮಠದಲ್ಲಿ ನಡೆದ ಭಕ್ತರ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ಗುರುವಾರ ಬೆಳಗ್ಗೆ 9ಕ್ಕೆ ಋತ್ವಿಜರಿಂದ ಗಣಹೋಮ ನಡೆಯಲಿದೆ. 11ಕ್ಕೆ ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀಗಳು ಪುರಪ್ರವೇಶ ಮಾಡಲಿದ್ದಾರೆ. ನಂತರ ಸ್ವಾಮೀಜಿಯವರಿಂದ ಶಂಕರ ಮಠದ ನೂತನ ಕಟ್ಟಡದ ಭೂಮಿಪೂಜೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಭಕ್ತ ಸಮುದಾಯದಿಂದ ಪಾದಪೂಜೆ ನಡೆಯಲಿದೆ. ನಂತರ ಶ್ರೀಗಳಿಂದ ಆಶೀರ್ವಚನ ನೆರವೇರಲಿದೆ ಎಂದರು. ಶಂಕರ ಸೇವಾ ಸಮಿತಿ ಅಧ್ಯಕ್ಷ ರವಿ ದೇಶಪಾಂಡೆ, ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಾಜದ ಪ್ರಮುಖರಾದ ವೇ.ಮೂ. ಶಂಕರಭಟ್ ಜೋಶಿ, ಪ್ರಕಾಶ ಬಂದಿಷ್ಟಿ, ಮಾಲತೇಶ ಕಾಮನಹಳ್ಳಿ, ಪಿ.ಕೆ.ಪಾರಗಾಂವಕರ, ಕೆ.ಎಲ್. ದೇಶಪಾಂಡೆ, ಜಿ.ಆರ್.ಪೋತದಾರ, ಎಂ.ಕೆ. ಪಾರಗಾಂವಕರ, ವಿದ್ಯಾಶಂಕರ ದೇಶಪಾಂಡೆ, ಎನ್.ಎಸ್. ಚಿನ್ನಮುಳಗುಂದ, ದಿನೇಶ ಕುಲಕರ್ಣಿ, ಕೃಷ್ಣಾ ಪೂಜಾರ, ರವಿಚಂದ್ರ ಪುರೋಹಿತ, ರಾಘವೇಂದ್ರ ಭಟ್, ನಾಗೇಶ ಜೋಗಳೇಕರ, ಶ್ರೀನಿವಾಸಮೂರ್ತಿ ಕುಲಕರ್ಣಿ, ದೀಪಕ ದೇಶಪಾಂಡೆ, ಭಾಸ್ಕರ ಸೋಹನೆ, ಶ್ರೀಕಾಂತ ನಾಡಿಗೇರ, ರವಿ ಪೋತದಾರ, ಮುರಳೀಧರ ಕಾಮನಹಳ್ಳಿ ಮುಂತಾದವರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

