1,516 ಸಾವಿರ ಹೆಕ್ಟೇರ್ ಹತ್ತಿ ಬೆಳೆ ನಿರೀಕ್ಷೆ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಜು. 17
2014-15ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 53,875 ಹೆಕ್ಟೇರ್ ಬಿತ್ತನೆ ಕ್ಷೇತ್ರದ ಪೈಕಿ 1,516 ಸಾವಿರ ಹೆಕ್ಟೇರ್ನಷ್ಟು ಹತ್ತಿ ಬೆಳೆ ಬೆಳೆಯುವ ಗುರಿ ಹೊಂದಲಾಗಿದೆ ಎಂದು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ. ನಾಗನಗೌಡ ರೆಡ್ಡಿ ತಿಳಿಸಿದರು.
ತಾಲೂಕಿನ ಕೋಣನತಂಬಿಗಿ, ಹಿರೇಬಿದರಿ, ಮೇಡ್ಲೆರಿ, ಹೀಲದಹಳ್ಳಿ, ಅರೆಮಲ್ಲಾಪುರ, ಕುಪ್ಪೆಲೂರು ಗ್ರಾಮಗಳಲ್ಲಿನ ರೈತರ ಜಮೀನುಗಳಲ್ಲಿ ಬೆಳೆಯಲಾದ ಹತ್ತಿ ಬೆಳೆಯನ್ನು ಇಲಾಖೆ ಅಧಿಕಾರಿಗಳೊಂದಿಗೆ ಹಾಗೂ ರೈತ ಮುಖಂಡರೊಂದಿಗೆ ವೀಕ್ಷಿಸಿ ಅವರು ಮಾತನಾಡಿದರು.
ಹತ್ತಿಗಿಡದ ಶೇ. 2ರಷ್ಟು ಎಲೆಗಳ ಭಾಗವು ಕೆಂಪಾಗಿದ್ದು ಕಂಡು ಬಂದಲ್ಲಿ ಬಿತ್ತಿದ 60ರಿಂದ 80 ಅಥವಾ 110 ದಿನಗಳಲ್ಲಿ ಶೇ. 12ರಷ್ಟು ಯೂರಿಯಾ ಅಥವಾ ಮೇಗ್ನೆಷಿಯಂ ಸಲ್ಫೇಟ್ ಸಿಂಪಡಿಸಬೇಕು. ಲಘು ಪೋಷಕಾಂಶಗಳಾದ ಜಿಂಕ್ ಸಿಪ್ಸಂ ಬಳಸಬಹುದು. ಸಸ್ಯಗಳಲ್ಲಿ ಸಸ್ಯ ಪ್ರಚೋದಕಗಳು (ಹಾರ್ಮೋನ್)ಗಳ ಕೊರತೆಯಿಂದ ಮಣ್ಣಿನಲ್ಲಿ ತೇವಾಂಶ ಪೋಷಕಾಂಶಗಳ ಕೊರತೆ, ಮೋಡ ಕವಿದ ವಾತಾವರಣ ಬಹಳ ದಿನ ಒಣಹವೆ ಇದ್ದು, ತಕ್ಷಣ ಮಳೆಯಾದಾಗ ಕಾಯಿಕೊರಕ ಕೀಟಗಳು ತತ್ತಿ ಇಡುವ ಅಥವಾ ಗರ್ಭಧರಿಸುವ ಸಂದರ್ಭವಿರುವ ಕಾರಣ ಕೀಟ ನಿಯಂತ್ರಣಕ್ಕಾಗಿ ಔಷಧಿ ಸಿಂಪಡಿಸಬೇಕು.
ಸಮಯಕ್ಕೆ ಸರಿಯಾಗಿ ಔಷಧಿ ಸಿಂಪಡಿಸದಿದ್ದಲ್ಲಿ ಹೂ, ಮೊಗ್ಗು, ಮರಿಕಾಯಿ ಉದುರುವ ಸಾಧ್ಯತೆ ಇದ್ದು ರೈತರು ಬೆಳೆ ಕಡೆಗೆ ಗಮನ ಹರಿಸಬೇಕು.
ಪ್ರತಿ 20 ಸಾಲು ಅಥವಾ ಹತ್ತಿ ಹೊಲದ ಬದುಗಳಲ್ಲಿ 23 ಸಾಲು ಬೆಂಡೆ, ಪುಂಡಿ, ಚೆಂಡು ಹೂ, ತೊಗರಿ, ಗೋವಿನಜೋಳ, ಅಲಸಂದಿ ಬೆಳೆ, ಕೀಟ ಆಕರ್ಷಕ ಟ್ರಾಪ್ ಬೆಳೆಗಳನ್ನು ಬೆಳೆಯುವುದರಿಂದ ಕೀಟಗಳನ್ನು ನಿಯಂತ್ರಿಸಬಹುದು.
ಹೆಚ್ಚಿನ ಮಾಹಿತಿಗಾಗಿ ರೈತರು ಸಮೀಪದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ತಜ್ಞರನ್ನಾಗಲಿ ಅಥವಾ ತಾವು ಬಿತ್ತನೆ ಮಾಡಿರುವ ಹತ್ತಿ ಬೀಜಗಳನ್ನು ವಿತರಿಸಿರುವ ಕಂಪನಿಯ ತಜ್ಞರನ್ನು ಸಂಪರ್ಕಿಸುವುದು ಉತ್ತಮವೆಂದು ಎಂದು ಡಾ. ನಾಗನಗೌಡ ರೆಡ್ಡಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

