ಹಾವೇರಿ

ಇಸ್ರೇಲ್- ಪ್ಯಾಲೆಸ್ತೀನ್ ಯುದ್ಧ: ಪ್ರತಿಭಟನೆ

Published On :

ಹಾವೇರಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ದೇಶಗಳು ನಡೆಸುತ್ತಿರುವ ಯುದ್ಧವನ್ನು ನಿಲ್ಲಿಸಿ ಶಾಂತಿಯ ಮಾತುಕತೆಗೆ ಮುಂದಾಗಬೇಕು ಎಂದು ಆಗ್ರಹಿಸಿ ಗುರುವಾರ ಎಸ್‌ಎಫ್‌ಐ ನಗರದಲ್ಲಿ ಪ್ರತಿಭಟನೆ ನಡೆಸಿತು.
ಎಸ್‌ಎಫ್‌ಐ ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸೇರಿ ಪ್ರತಿಭಟನೆ ನಡೆಸಿದರು. ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಸುಭಾಸ ಎಂ. ಮಾತನಾಡಿ, ಇಸ್ರೇಲ್ ಮೇಲೆ ಪ್ಯಾಲೇಸ್ತೇನಿಯಾ ದಾಳಿ ಮಾಡುತ್ತಿದೆ ಎಂಬ ಕಾರಣಕ್ಕೆ ಇಸ್ರೇಲ್‌ನ ಸೇನೆ 7 ದಿನಗಳಿಂದ ನಿರಂತರವಾಗಿ ಪ್ಯಾಲೇಸ್ತೇನಿಯಾದ ಗಾಝಿಯಾಪಟ್ಟಿ ಮೇಲೆ ದಾಳಿ ಮಾಡುತ್ತಿದು,್ದ ಈಗಾಗಲೇ 213ಕ್ಕೂ ಅಧಿಕ ಜನ ಬಲಿಯಾಗಿದ್ದಾರೆ. ಸಾವಿರಾರು ಜನ ಗಾಯಗೊಂಡಿದ್ದಾರೆ. ಇಸ್ರೇಲ್ ಮತ್ತು ಪ್ಯಾಲೇಸ್ತೇನಿಯಾ ದಾಳಿಗಳಿಂದ ಅಮಾಯಕ ಜನರು ಬಲಿಯಾಗುತ್ತಿರುವುದನ್ನು ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಎಂದರು.
ಕೋಮುದ್ವೇಷದಿಂದ ಯುದ್ಧಗಳು ನಡೆಯುತ್ತಿದ್ದು, ಇಂಥ ಯುದ್ಧಗಳನ್ನು ನಿಲ್ಲಿಸಬೇಕಿದೆ. ಶಾಂತಿ ಸೌಹಾರ್ದತೆ ಕಾಪಾಡಬೇಕಾದ ರಾಷ್ಟ್ರಗಳು ಯುದ್ಧಕ್ಕೆ ನಿಂತಿರುವುದು ಇಡೀ ಜಗತ್ತಿನ ಮೇಲೆ ಇದು ತೀವ್ರತೆರನಾದ ಪರಿಣಾಮ ಬಿರುತ್ತಿದೆ. ಇಸ್ರೇಲ್ ಮತ್ತು ಪ್ಯಾಲೇಸ್ತೇನಿಯಾಗಳು ಯುದ್ಧ ರಹಿತ ಜಗತ್ತು ನಿರ್ಮಾಣ ಮಾಡುವತ್ತ ಸಾಗಬೇಕಿದೆ. ಇಸ್ರೇಲ್ ದಾಳಿಯಿಂದಾಗಿ ಪ್ಯಾಲೇಸ್ತೆನಿಯಾದಲ್ಲಿ ಚಿಕ್ಕ ಮಕ್ಕಳು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರನ್ನು ಹತ್ಯೆಗೈಯಲಾಗುತ್ತಿದೆ. ರಾಕೆಟ್ ಮತ್ತು ಫಿರಂಗಿ ದಾಳಿ ಮುಂದುವರೆಸಿರುವುದನ್ನು ಕೂಡಲೇ ನಿಲ್ಲಿಸಿ ಎರಡೂ ರಾಷ್ಟ್ರಗಳು ಶಾಂತಿ ಮಾತುಕತೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಶಶಿಧರ ನಾಯಕ್, ಶಿವಶಂಕರ ಶಿರಬಡಗಿ, ಕಿರಣ ಹಡಪದ, ಮಲ್ಲಿಕಾರ್ಜುನ ಚಿಂಚಲಿ, ಚನ್ನಬಸವ ದುರ್ಗದ, ಸಿದ್ದು, ವಿಶ್ವನಾಥ ಎಸ್.ಕೆ., ವಿನಾಯಕ ಎಸ್.ಜಿ., ಪ್ರಶಾಂತ ಅರ್ಚಕ, ಸಂತೋಷ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.