ಬೇಡಿಕೆ ಈಡೇರಿಕೆಗಾಗಿ ರಾಜ್ಯಪಾಲರಿಗೆ ರೈತರ ಮನವಿ
ಹಾನಗಲ್ಲ: ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ತಾಲೂಕಿನ ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳು, ರೈತರು ಸೋಮವಾರ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿದರು. 2013-14ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಳಪೆ ಹತ್ತಿ ಬೀಜಗಳನ್ನು ಬಿತ್ತಿ ಹಾನಿಗೊಳಗಾದ ರೈತರಿಗೆ ಸರ್ಕಾರ ಘೋಷಿಸಿದ ಒಂದು ಹೆಕ್ಟೇರ್ಗೆ ರು. 6 ಸಾವಿರ ಪರಿಹಾರ ಇನ್ನೂ ನೀಡಿಲ್ಲ. ತಕ್ಷಣ ಹಣ ಬಿಡುಗಡೆ ಮಾಡಬೇಕು. ಈ ವರ್ಷ ಬೆಳೆವಿಮೆ ಕಂತು ತುಂಬುವ ಅವಧಿ ಮುಗಿಯುತ್ತ ಬಂದರೂ, ಕಳೆದ ಕೃಷಿ ವರ್ಷದ ಮುಂಗಾರು ಹಂಗಾಮಿನಲ್ಲಿ ತುಂಬಿದ ಬೆಳೆವಿಮೆ ಆಣೆವಾರಿ ನಿರ್ದಿಷ್ಟಗೊಳಿಸಿ ಪರಿಹಾರ ಘೋಷಿಸಿಲ್ಲ. ಕೂಡಲೇ ಪರಿಹಾರ ವಿತರಿಸಿ. ಪ್ರಸಕ್ತ ಸಾಲಿನ ಬೆಳೆವಿಮಾ ಕಂತನ್ನು ಸಾಲಗಾರ ಹಾಗೂ ಸಾಲಗಾರರಲ್ಲದ ರೈತರಿಗೆ ಜೂ. 30 ಕೊನೆ ದಿನ. ಇದು ಬಹಳ ರೈತರಿಗೆ ತಿಳಿದಿಲ್ಲ. ಅದರಿಂದ ಅವರೆಲ್ಲ ಯೋಜನೆಯಿಂದ ಹೊರಗುಳಿಯುವಂತಾಗಿದೆ. ಜುಲೈ 31ರ ವರೆಗೆ ಅವಧಿ ವಿಸ್ತರಿಸಿ. ಇಲ್ಲದಿದ್ದರೆ ರೈತ ಸಂಘ ರಸ್ತೆ ತಡೆ ಮತ್ತಿತರ ಪ್ರತಭಟನೆ ಮಾಡಲಿದೆ ಎಂದು ಸಂಘ ಮನವಿಯಲ್ಲಿ ತಿಳಿಸಿದೆ. ರೈತ ಸಂಘದ ತಾಲೂಕಾಧ್ಯಕ್ಷ ಮಾಲಿಂಗಪ್ಪ ಅಕ್ಕಿವಳ್ಳಿ, ಪ್ರಧಾನ ಕಾರ್ಯದರ್ಶಿ ಅಡಿವೆಪ್ಪ ಆಲದಕಟ್ಟಿ, ಸಂಘಟನೆ ಕಾರ್ಯದರ್ಶಿ ಗುಲಾಬ ಬಡಗಿ, ಸಂಚಾಲಕ ಚನ್ನಬಸಪ್ಪ ಅಕ್ಕಿವಳ್ಳಿ, ರೈತ ಮುಖಂಡರಾದ ಮಲ್ಲೇಶಪ್ಪ ಪರಪ್ಪನವರ, ಬಸವರಾಜ ಅಕ್ಕಿವಳ್ಳಿ, ಮಂಜುನಾಥ ಅವಲಗೇರಿ, ರುದ್ರಪ್ಪ ಹಣ್ಣಿ, ಷಣ್ಮುಕಪ್ಪ ಅಂದಲಗಿ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

