ಕುಡಿಯುವ ನೀರಿನ ಪೈಪ್ಲೈನ್ಗೆ ಹಾನಿ
ಶಿಗ್ಗಾಂವಿ: ಪಟ್ಟಣದ ನಾಗನೂರು ಕೆರೆಗೆ ವರದಾ ನದಿಯಿಂದ ಹರಿದು ಬರುವ ನೀರಿನ ಪ್ರಮುಖ ಅನ್ನು ಒಡೆದು ಖುರ್ಸಾಪುರ ಗ್ರಾಮಸ್ಥರು ಗ್ರಾಮದ ಕೆರೆಗೆ ನೀರು ಹರಿಬಿಟ್ಟ ಘಟನೆ ಜರುಗಿದೆ.
ಶಿಗ್ಗಾಂವಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ನಾಗನೂರು ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಕಲುಷಿತ ನೀರು ಶುದ್ಧೀಕರಣ ಘಟಕಕ್ಕೆ ಸರಬರಾಜು ಆಗುವ ಮೂಲಕ ಜನತೆಗೆ ಪರಿಶುದ್ಧ ನೀರು ದೊರೆಯದಂತಾಗಿತ್ತು. ಇದನ್ನು ಮನಗಂಡ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಸ್ಥಳೀಯ ಪುರಸಭೆಯ ಆಡಳಿತ ಮಂಡಳಿ ವರದಾ ನದಿಯಿಂದ ಇಲ್ಲಿಯ ನಾಗನೂರು ಕೆರೆಗೆ ನೀರು ಹರಿಸಲು ಮುಂದಾಗಿ ಸೋಮವಾರ ಕೆರೆಗೆ ನೀರು ಬಿಡಲಾಗಿತ್ತು.
ಈ ವಿಷಯವನ್ನರಿತ ಖುರ್ಸಾಪುರ ಗ್ರಾಮಸ್ಥರು ತಮ್ಮ ಊರಿನಲ್ಲಿ ಹಾಯ್ದುಹೋದ ಪೈಪ್ಲೈನ್ ಪ್ರಮುಖ ವಾಲ್ವ್ ಅನ್ನು ಒಡೆಯುವ ಮೂಲಕ ಬರಿದಾಗಿದ್ದ ತಮ್ಮೂರಿನ ಕೆರೆಗೆ ನೀರು ಹರಿಯುವಂತೆ ಮಾಡಿದ್ದರು. ನಾಗನೂರು ಕೆರೆಗೆ ನೀರು ಬರುವುದು ಸ್ಥಗಿತಗೊಂಡಿದ್ದರಿಂದ ಪುರಸಭಾ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ನೇತೃತ್ವದಲ್ಲಿ ಸದಸ್ಯರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರು.
ಇದು ಕುಡಿಯುವ ನೀರಿನ ಯೋಜನೆಗಾಗಿ ಅಳವಡಿಸಿರುವ ಪೈಪ್ಲೈನ್ ಆಗಿದ್ದು, ಗ್ರಾಮದ ಕೆರೆಗೆ ನೀರು ಬಿಡಿಸಲು ಶಾಸಕರೊಂದಿಗೆ ಚರ್ಚಿಸಿ ಕೆರೆ ತುಂಬಿಸುವ ಯೋಜನೆಯಡಿ ಪೈಪ್ಲೈನ್ ಅಳವಡಿಸುವ ಭರವಸೆ ನೀಡಿ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗರೂಕರಾಗಿ ನಾಗನೂರು ಕೆರೆಗೆ ನೀರು ಹರಿಸಲಾಗುತ್ತಿದೆ. ಇದಕ್ಕೆ ಗ್ರಾಮಸ್ಥರು ಸಹಕರಿಸುವಂತೆ ವಿನಂತಿಸಿದರು.
ನಂತರ ಹಾಳಾಗಿದ್ದ ವಾಲನ್ನು ದುರಸ್ತಿಗೊಳಿಸಿ ನದಿ ನೀರನ್ನು ನಾಗನೂರು ಕೆರೆಗೆ ಸರಬರಾಜು ಮಾಡಲು ಚಾಲನೆ ನೀಡಲಾಯಿತು. ಪುರಸಭಾ ಸದಸ್ಯರಾದ ಪರಶುರಾಮ ಸೊನ್ನದ, ಶಿವಪ್ರಸಾದ ಸುರಗಿಮಠ, ಗ್ರಾಮದ ಮುಖಂಡ ಪುಟ್ಟಪ್ಪ ಜಲಧಿ ಸೇರಿದಂತೆ ಅನೇಕರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

