ಇಂದಿನಿಂದ ಶ್ರೀ ವೀರಭದ್ರೇಶ್ವರ ಜಾತ್ರೆ
ಹಾನಗಲ್ಲ: ಹಾನಗಲ್ಲ ತಾಲೂಕಿನ ಸಾಂವಸಗಿಯಲ್ಲಿ ಮಾ. 8ರಿಂದ 13ರ ವರೆಗೆ ಶ್ರೀ ವೀರಭದ್ರೇಶ್ವರ ರಥೋತ್ಸವ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಾಷ್ಟ್ರಮಟ್ಟದ ಭಾರಿ ಖಾಲಿ ಎತ್ತಿನ ಗಾಡಾ ಓಡಿಸುವ ಸ್ಪರ್ಧೆಗಳು ಹುಬ್ಬಳ್ಳಿ ಮೂರುಸಾವಿರಮಠದ ಜ. ಗುರುಸಿದ್ಧರಾಜಯೋಗೀಂದ್ರ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯಲಿವೆ.
ಸಾಂವಸಗಿಯಲ್ಲಿ ನಡೆಯುವ ಈ ಧಾರ್ಮಿಕ ಕಾರ್ಯಕ್ರಮಗಳ ಸಮ್ಮುಖವನ್ನು ಹೋತನಹಳ್ಳಿ ಸಿಂದಗಿಮಠದ ಶಂಭುಲಿಂಗ ಶಿವಾಚಾರ್ಯರು ವಹಿಸಲಿದ್ದು, ಮಾ. 8ರಂದು ವೀರಭದ್ರೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ, ಮಾರುತಿ ದೇವರ ಕುಂಕುಮಾರ್ಚನೆ ಹಾಗೂ ಗ್ರಾಮದ ಎಲ್ಲ ದೇವರಿಗೂ ಮಹಾಪೂಜೆಯನ್ನು ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಸಂಗಯ್ಯ ಹಿರೇಮಠ ನೆರವೇರಿಸುವರು. ರಾತ್ರಿ 8ಕ್ಕೆ ಹಾಸ್ಯ ಕಲಾವಿದ ಅಶೋಕ ಕೊಂಡ್ಲಿ ಅವರಿಂದ ಹಾಸ್ಯ ಸಂಜೆ ನಡೆಯುವುದು.
9ರಂದು ಲಿಂ. ಶಾಂತವೀರ ಪಟ್ಟಾಧ್ಯಕ್ಷರು ಹಾಗೂ ಲಿಂ. ಪುಟ್ಟರಾಜ ಕವಿ ಗವಾಯಿಗಳವರ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ರಾತ್ರಿ 9ಕ್ಕೆ ಶ್ರೀ ವೀರಭದ್ರ ದೇವರ ಗುಗ್ಗುಳಪೂಜೆ ನಡೆಯುವುದು. ನಂತರ ಕಲಾವಿದರಾದ ಸಾವಿತ್ರಿ ಲಮಾಣಿ ಗದಗ ಅವರಿಂದ ಸಂಗೀತ ಕಾರ್ಯಕ್ರಮ ನಡೆಯುವವು. 10ರಂದು ಶ್ರೀ ವೀರಭದ್ರ ದೇವರ ಗುಗ್ಗುಳ ಹಾಗೂ ಸಾಮೂಹಿಕ ವಿವಾಹಗಳು ಜರುಗುವವು. ಸಂಜೆ 7.30ಕ್ಕೆ ನಡೆಯುವ ಧರ್ಮಸಭೆಯ ಅಧ್ಯಕ್ಷತೆಯನ್ನು ಹುಬ್ಬಳ್ಳಿ ಮೂರುಸಾವಿರಮಠದ ಜ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಮ್ಮುಖವನ್ನು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಸಿದ್ದಲಿಂಗ ಸ್ವಾಮಿಗಳು ಹಾಗೂ ಹೋತನಹಳ್ಳಿ ಸಿಂದಗಿಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳು ವಹಿಸುವರು. ಪ್ರಧಾನ ಅರ್ಚಕ ವೇ.ಮೂ. ಸಂಗಯ್ಯ ಹಿರೇಮಠ ಆಶಯ ನುಡಿ ನುಡಿಯುವರು.
ಶಾಸಕ ಮನೋಹರ ತಹಶೀಲ್ದಾರ್, ಸಂಸದ ಶಿವಕುಮಾರ ಉದಾಸಿ, ಮಾಜಿ ಸಚಿವ ಸಿ.ಎಂ. ಉದಾಸಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಭಾರತ ಸರ್ಕಾರದ ನೆಹರು ಯುವಕೇಂದ್ರದ ಮಹಾನಿರ್ದೇಶಕ ಸಲೀಂ ಅಹ್ಮದ್, ವಿಪ ಸದಸ್ಯರಾದ ಶ್ರೀನಿವಾಸ ಮಾನೆ, ಸೋಮಣ್ಣ ಬೇವಿನಮರದ, ನಾಗರಾಜ ಛಬ್ಬಿ, ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ, ಜಿಪಂ ಸದಸ್ಯ ಪದ್ಮನಾಭ ಕುಂದಾಪುರ, ತಾಪಂ ಸದಸ್ಯ ಸುಮಂಗಲಾ ದೊಡ್ಡಮನಿ, ಎ.ಎಸ್. ಬಳ್ಳಾರಿ, ಬಿ.ಎಸ್. ಅಕ್ಕಿವಳ್ಳಿ, ಅಶೋಕ ಪಾಟೀಲ, ರೇಣುಕವ್ವ ಲಕಮಾಪುರ, ಗೂಳಪ್ಪ ಅಜಗುಂಡಿ, ಜಿ.ಕೆ. ಪಾಟೀಲ, ಮಾರುತಿ ಶಿಡ್ಲಾಪುರ ಅತಿಥಿಗಳಾಗಿ ಪಾಲ್ಗೊಳ್ಳುವರು.
11ರಂದು ಬೆಳಗ್ಗೆ ವೀರಭದ್ರ ದೇವರಿಗೆ ಸಹಸ್ರ ಬಿಲ್ವಾರ್ಚನೆ ಹಾಗೂ ಹರಕೆ ತುಲಾಭಾರ ನಡೆಯಲಿದೆ. ರಾತ್ರಿ 8ಕ್ಕೆ ಶ್ರೀ ವೀರಭದ್ರ ದೇವರ ಮಹಾರಥೋತ್ಸವ ನೆರವೇರಲಿದೆ. 12ರಂದು ಅಕ್ಕಮಹಾದೇವಿ ರಥೋತ್ಸವ ನಡೆಯುವುದು.
ಗಾಡಾ ಓಡಿಸುವ ಸ್ಪರ್ಧೆ: ಮಾ. 13ರಂದು ಬೆಳಗ್ಗೆ ರಾಷ್ಟ್ರಮಟ್ಟದ ಭಾರಿ ಖಾಲಿ ಎತ್ತಿನ ಗಾಡಾ ಓಡಿಸುವ ಸ್ಪರ್ಧೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

