ಹಾವೇರಿ

ನೈತಿಕ ಅಧಃಪತನದಿಂದ ಮಹಿಳಾ ದೌರ್ಜನ್ಯ: ಉದಾಸಿ

Published On :

ಹಾನಗಲ್ಲ: ನೈತಿಕ ಅಧಃಪತನದ ಕಾರಣದಿಂದ ಮಹಿಳಾ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಗೃತಿ ಮೂಲಕ ಮಹಿಳೆಗೆ ಸಮಾನ ಸ್ಥಾನಮಾನ ಒದಗಿಸುವ ಅಗತ್ಯವಿದ್ದು, ಇದಕ್ಕೆ ಉತ್ತಮ ಪುಸ್ತಕ ಸಂಸ್ಕೃತಿ ಬೆಳೆಸುವ ಅಗತ್ಯವಿದೆ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ಕರೆ ನೀಡಿದರು.
ಹಾನಗಲ್ಲಿನ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸರಸ್ವತಿ ಮಹಿಳಾ ಮಂಡಳ ಆಯೋಜಿಸಿದ್ದ ಪಾರ್ವತಿಬಾಯಿ ಕಾಶೀಕರ ಅವರ ಶ್ರೇಯಂಕರಿ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಾಹಿತ್ಯ ಕ್ಷೇತ್ರದಲ್ಲಿಯೂ ಮಹಿಳೆ ಅತ್ಯುತ್ತಮ ಸಾಧಕಳಾಗಿ ಜನಮನ ಗೆದ್ದಿದ್ದಾಳೆ. ನೈತಿಕ ಮಟ್ಟ ಕುಸಿಯುತ್ತಿರುವ ಈ ಸಮಾಜದಲ್ಲಿ ಮಹಿಳೆ ಸಾಹಿತ್ಯ ಹಾಗೂ ಜನಜಾಗೃತಿ ಮೂಲಕ ಮಹಿಳೆಯನ್ನು ಸಬಲೀಕರಣಗೊಳಿಸಬೇಕಾಗಿದೆ. ಎಲ್ಲವೂ ಕಾನೂನಿನಿಂದ ಸಾಧ್ಯವಿಲ್ಲ. ಸಾಮೂಹಿಕ ಜವಾಬ್ದಾರಿಯಿಂದ ಸಾಧ್ಯ ಎಂದರು. ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಮಾರುತಿ ಶಿಡ್ಲಾಪುರ ಪಾರ್ವತಿಬಾಯಿ ಕಾಶೀಕರ ಅವರ ಶ್ರೇಯಂಕರಿ ಕವನ ಸಂಕಲನ ಕುರಿತು ಮಾತನಾಡಿ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಕ್ರಿಯಾಶೀಲತೆಯಿಂದ ಮಾತ್ರ ಉಳಿಯಲು ಸಾಧ್ಯ. ಸಾಂಸ್ಕೃತಿಕ ಪರಿಪಕ್ವತೆ ಇಂದಿನ ಅಗತ್ಯವಾಗಿದೆ ಎಂದರು.
ಸಾಹಿತಿ ವಿಜಯಕಾಂತ ಪಾಟೀಲ ಮಾತನಾಡಿ, ಸುಧೀರ್ಘ ಚಿಂತನೆಯಿಂದ ಗಟ್ಟಿ ಸಾಹಿತ್ಯ ಹೊರಹೊಮ್ಮಲು ಸಾಧ್ಯ. ಬಹುಕಾಲದ ಹೋರಾಟದಿಂದಾಗಿ ಈಗ ಮಹಿಳೆಗೆ ಒಂದಷ್ಟು ಸ್ಥಾನಮಾನಗಳು ದೊರೆಯುತ್ತಿವೆ. ತಾಯಿ, ಪ್ರಕೃತಿ, ಅನ್ನ ಇವುಗಳನ್ನು ತೂಕ ಮಾಡಲು ಸಾಧ್ಯವಿಲ್ಲ. ಸರ್ಕಾರ ಅಕಾಡೆಮಿಗಳಲ್ಲಿ ಮಹಿಳಾ ಸಾಹಿತಿಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದರು. ಕವಯಿತ್ರಿ ಪಾರ್ವತಿಬಾಯಿ ಕಾಶೀಕರ, ಜಿಪಂ ಮಾಜಿ ಅಧ್ಯಕ್ಷೆ ಶಾರದಾ ಹಾದಿಮನಿ ಅವರನ್ನು ಸನ್ಮಾನಿಸಲಾಯಿತು. ಸರಸ್ವತಿ ಮಹಿಳಾ ಮಂಡಳದ ಅಧ್ಯಕ್ಷೆ ವಿಜಯಲಕ್ಷ್ಮೀ ಗುಡಗುಡಿ ಅಧ್ಯಕ್ಷತೆ ವಹಿಸಿದ್ದರು. ನೀಲಮ್ಮ ಉದಾಸಿ, ಸಂಸದ ಶಿವಕುಮಾರ ಉದಾಸಿ, ಪುಷ್ಪಾ ಶಲವಡಿಮಠ, ವಾಸಂತಿ ಪ್ರಭಾಕರ ನಾಯಕ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.