ಪರೀಕ್ಷಾ ಶುಲ್ಕ ಹೆಚ್ಚಳ: ಎಬಿವಿಪಿ ಪ್ರತಿಭಟನೆ
ರಾಣಿಬೆನ್ನೂರು: ಪರೀಕ್ಷಾ ಶುಲ್ಕ ಹೆಚ್ಚಿಸಿರುವ ಸರ್ಕಾರದ ವಿರುದ್ಧ ನಗರದಲ್ಲಿಂದು ಪ್ರತಿಭಟನೆ ನಡೆಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಖಂಡರು ಹಾಗೂ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ, ವಿನಾಯತಿ ನೀಡಬೇಕೆಂದು ಆಗ್ರಹಿಸಿ, ಮುಖ್ಯಮಂತ್ರಿಗೆ ಮತ್ತು ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ವಿವಿಧ ಕಾಲೇಜ್ಗಳಿಂದ ವಿದ್ಯಾರ್ಥಿಗಳು ಆಗಮಿಸಿ, ತಹಸೀಲ್ದಾರ್ ಕಚೇರಿ ಎದುರು ಸೇರಿ, ತಮಗಾಗುತ್ತಿರುವ ತೊಂದರೆಗಳ ಮತ್ತು ಈ ಹಿಂದಿನ ವಿದ್ಯಾರ್ಥಿಗಳು ಅನುಭವಿಸಿರುವ ತೊಂದರೆಗಳ ಕುರಿತು ಮತ್ತು ಸರ್ಕಾರದ ದಿವ್ಯ ನಿರ್ಲಕ್ಷದ ಕುರಿತು ಮಾತನಾಡಿದರು. ತಾಲೂಕು ಕಾರ್ಯದರ್ಶಿ ದೆವೇಂದ್ರ ಮಾಕನೂರು ಮಾತನಾಡಿ, ಕರ್ನಾಟಕ ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಹಿಂದೆ ವಾರ್ಷಿಕ ಪರೀಕ್ಷೆಗಾಗಿ ತುಂಬಿದ ಹಣಕ್ಕೂ, 2014ನೇ ವರ್ಷದಲ್ಲಿ ವಾರ್ಷಿಕ ಪರೀಕ್ಷೆಗೆ ಕುಳಿತುಕೊಳ್ಳಲಿರುವ ವಿದ್ಯಾರ್ಥಿಗಳು ತುಂಬುವ ಪರೀಕ್ಷಾ ಶುಲ್ಕಕ್ಕೂ ತುಂಬಾ ವ್ಯತ್ಯಾಸವಿದ್ದು, ಇದರ ವಿರುದ್ಧ ನಾವು ಪ್ರತಿಭಟಿಸುತ್ತಿದ್ದೇವೆ. ಹೆಚ್ಚಿಸಿರುವ ಹಣ ವಾಪಸ್ ನೀಡುತ್ತೇವೆಂದು ಆಡಳಿತ ಮಂಡಳಿ ತಿಳಿಸುತ್ತಿದ್ದು, ಹೆಚ್ಚಿಸಿರುವ ಹಣವನ್ನು ರದ್ದು ಪಡಿಸುವವರೆಗೂ ನಾವು ಹೋರಾಟ ಮುಂದುವರಿಸುತ್ತೇವೆಂದು ದೇವೆಂದ್ರ ಮಾಕನೂರು, ಸಹಕಾರ್ಯದರ್ಶಿ ಗಣೇಶ ಬಡಿಗೇರ, ಮಮತಾ ಜಾಧವ, ಶಿಲ್ಪಾ ಗೌಡನಾಯಕರ, ಉಷಾ ಶಿಡಗನಾಳ, ಸಂಗೀತಾ ಎನ್, ಶ್ವೇತಾ ಮುದಿಗೌಡ್ರ ಮಾತನಾಡಿದರು.ನಾಗವೇಣಿ ಅರವಂಟಗಿ, ಹನುಮಂತ ಆರ್.ಆರ್. ಗಿರೀಶ ಜಾಧವ, ಲತಾ ತಾರಿಕೊಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

