ಹಾವೇರಿ

ವಿಜ್ಞಾನ ಆವಿಷ್ಕಾರದ ಅರಿವು ಅಗತ್ಯ: ಪ್ರಕಾಶ

Published On :

ಹಾವೇರಿ: ಇಂದಿನ ಆಧುನಿಕ ಸಮಾಜಕ್ಕೆ ವಿಜ್ಞಾನದ ಆವಿಷ್ಕಾರಗಳ ಅಗತ್ಯತೆ ಇದ್ದು, ವಿದ್ಯಾರ್ಥಿಗಳು ವಿಜ್ಞಾನದಮಟ್ಟ ಮತ್ತು ಆಳ ಅರಿತು ತಮ್ಮ ಬುದ್ಧಿವಂತಿಕೆಯ ಮೇಲೆ ಮನೋಸಾಮರ್ಥ್ಯ ಮೆರೆಯಬೇಕೆಂದು ಹಾವೇರಿ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಕೆ.ಬಿ. ಪ್ರಕಾಶ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಕಾಲೇಜು ವಿಜ್ಞಾನ ವಿಭಾಗದ ಆಶ್ರಯದಲ್ಲಿ ಜರುಗಿದ ವಿಶ್ವ ವಿಜ್ಞಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು. ವೈಜ್ಞಾನಿಕತೆಯ ನೆರಳಿನಲ್ಲಿ ಬದುಕುತ್ತಿರುವ ನಾವುಗಳು ಮೂಲ ಆಶಯಗಳ ಮೇಲೆ ಮುಂದೆ ಸಾಗಬೇಕಿದೆ. ಥಾಮಸ್ ಆಳ್ವಾ ಎಡಿಸನ್ ಎಲೆಕ್ಟ್ರಿಕ್ ಬಲ್ಬುಗಳನ್ನು ಕಂಡು ಹಿಡಿಯುವಲ್ಲಿ ಪಟ್ಟ ಪರಿಶ್ರಮವನ್ನು ಒಮ್ಮೆ ಅವಲೋಕಿಸಿದರೆ ಬಲವಾದ ಸಾಫಲ್ಯವನ್ನು ನಾವುಗಳೆಲ್ಲರೂ ಪಡೆಯಲು ಸಾಧ್ಯ. ತಾಂತ್ರಿಕ ಬೆಳವಣಿಗೆಗಳು ಆದಂತೆ ಇಂದು ಹೊಸ ಹೊಸ ವಿನ್ಯಾಸಗಳು ಬರುತ್ತಲಿವೆ. ವಿದ್ಯಾರ್ಥಿಗಳು ಸತತ ಅಧ್ಯಯನದಿಂದ ವಿಜ್ಞಾನ ಕ್ಷೇತ್ರದಲ್ಲಿ ಉನ್ನತಮಟ್ಟದ ಸಾಧನೆ ಮಾಡಬೇಕಿದೆ. ಭಾರತೀಯರು ವಿಶ್ವಕ್ಕೆ ವೈಜ್ಞಾನಿಕ ಕ್ಷೇತ್ರಕ್ಕೆ ಅಪೂರ್ವ ಮತ್ತು ಅಮೋಘ ಕೊಡುಗೆಗಳನ್ನು ನೀಡಿರುವುದು ಹೆಮ್ಮೆಯ ವಿಚಾರವಾಗಿದ್ದಲ್ಲದೇ ಸ್ಫೂರ್ತಿಯ ಸೆಲೆಯಾಗಿ ನಿಲ್ಲುವಂತಹುದು. ಭವಿಷ್ಯತ್ತಿನ ವಿಜ್ಞಾನಿಗಳಾಗುವವರು ಯಾವುದನ್ನೂ ಕಡೆಗಣಿಸದೇ ಎಲ್ಲವನ್ನೂ ಉತ್ತಮವಾಗಿ ಉಪಯೋಗ ಮಾಡಿಕೊಂಡರೆ ಭವಿಷ್ಯ ಸುಂದರವಾಗಿ ನಿರ್ಮಾಣವಾಗುತ್ತದೆ ಎಂದರು.  ಪ್ರಾಚಾರ್ಯ ಡಾ. ಬಿ.ಸಿ. ಬನ್ನೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಪೂ ಕಾಲೇಜ್ ಪ್ರಾಚಾರ್ಯ ಡಾ. ಸಿ. ಮಲ್ಲಣ್ಣ, ಪ್ರೊ. ಸಿ. ಲಿಂಗಾರೆಡ್ಡಿ, ವಿಜ್ಞಾನ ಸಂಘದ ಕಾರ್ಯದರ್ಶಿ ಕುಮಾರ, ಅಭಿಷೇಕ ಜಾಧವ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾಲೇಜಿನ ವಿಜ್ಞಾನ ಸಂಘ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಸಮಾರಂಭದಲ್ಲಿ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಡಾ. ವಿ.ಡಿ. ಯಳಮಲಿ ಸ್ವಾಗತಿಸಿದರು. ಪ್ರೊ. ಕೃಷ್ಣಾ ನಿಂಬಾಳಕರ ನಿರೂಪಿಸಿದರು. ಪ್ರೊ. ಎಸ್.ಎನ್. ತಿಪ್ಪನಗೌಡ್ರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.