ಹಾವೇರಿ

ಜಾನಪದ ಜನಸಾಮಾನ್ಯರ ಬದುಕಿನ ಪ್ರತೀಕ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 19
ಜಾನಪದ ಸಾಹಿತ್ಯ ಜನಸಾಮಾನ್ಯರ ಬದುಕಿನ ಪ್ರತೀಕವಾಗಿದ್ದು, ಜನಸಾಮಾನ್ಯರು ತಮ್ಮ ಬದುಕಿನುದ್ದಕ್ಕೂ ಅನುಸರಿಸಿಕೊಂಡು ಬಂದ ಸಂಪ್ರದಾಯ ಆಚರಣೆಗಳ ಅನುಭವದ ಸಾರವಾಗಿದೆ. ಆದರೆ, ಅವುಗಳೆಲ್ಲ ಇಂದು ಯಾಂತ್ರಿಕತೆಯಿಂದಾಗಿ ಅವಸಾನಗೊಳ್ಳುತ್ತಿದ್ದು, ರಕ್ಷಣೆ ಜವಾಬ್ದಾರಿ ಯುವಕರ ಮೇಲಿದೆ ಎಂದು ಬ್ಯಾಡಗಿ ವರ್ತಕರ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪ್ರೊ. ಸಿ. ಶಿವಾನಂದಪ್ಪ ಅಭಿಪ್ರಾಯಪಟ್ಟರು.
ನಗರದ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಮೈಸೂರು ಹಾಗೂ ಮಹಾವಿದ್ಯಾಲಯದ ಜಿಲ್ಲಾ ಪರಂಪರೆ ಕೂಟ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಜಾನಪದ ಗೀತಗಾಯನ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಲಾವಣಿಯೊಂದನ್ನು ಹಾಡಿದ ಪ್ರೊ. ಶಿವಾನಂದಪ್ಪ ಅದರಲ್ಲಿ ಸಾಮಾನ್ಯ ಜನ ಜೀವನದ ಚಿತ್ರಣ ತೆರೆದಿಟ್ಟರು.
ಹಂಸಭಾವಿಯ ನಿವೃತ್ತ ಕನ್ನಡ ಪ್ರಾಧ್ಯಾಪಕ ಶಾಂತನಗೌಡ ಹಾದಿಮನಿ, ಮಗು ಹುಟ್ಟಿದಂದಿನಿಂದ ಆಡುವ ಮೊದಲ ಭಾಷೆಯೇ ಜಾನಪದವಾಗಿದೆ ಎಂಬುದಾಗಿ ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಬಿ.ಸಿ. ಬನ್ನೂರ ಜಾನಪದ ಕೇವಲ ಶಿಷ್ಟರಲ್ಲಿದವರಲ್ಲಿ ಉಳಿದಿದ್ದು, ಶಿಷ್ಟರು ಅದನ್ನು ಬಳಸಲಿ ಮಡಿವಂತಿಕೆ ಪ್ರದರ್ಶಿಸುತ್ತಿದ್ದಾರೆಂದು ಅಭಿಪ್ರಾಯಪಟ್ಟರು. ಶಿಷ್ಟರು ತಮ್ಮ ಮಡಿವಂತಿಕೆ ತೊರೆಯಬೇಕು ಎಂದು ತಿಳಿಸಿದರು.
ಜಿಲ್ಲಾ ಪರಂಪರೆ ಕೂಟದ ಸಂಚಾಲಕ ಪ್ರೊ. ಶಿವಯೋಗಿ ಕೋರಿಶೆಟ್ಟರ್ ಪರಂಪರೆ ಕೂಟದ ಧ್ಯೇಯೋಧ್ಯೇಶಗಳನ್ನು ವಿವರಿಸಿ, ಸ್ವಾಗತಿಸಿದರು. ನಾಗರತ್ನಾ ಹಾಗೂ ದೀಪಾ ಪ್ರಾರ್ಥಿಸಿದರು. ಚೇತನಾ ಎಸ್.ಪಿ. ನಿರ್ವಹಿಸಿದರು. ಪ್ರೊ. ನಾಗರಾಜ ಮುಚ್ಚಟ್ಟಿ ವಂದಿಸಿದರು. ಪ್ರೊ. ದೀಪಕ ಕೊಲ್ಲಾಪುರೆ, ಪ್ರೊ. ಲಕ್ಷ್ಮಣ ಪೂಜಾರ ಇದ್ದರು.
ವಿಜೇತರು
ಹಾವೇರಿ ಜಿಲ್ಲೆಯ ವಿವಿಧ ಮಹಾವಿದ್ಯಾಲಯಗಳ 25ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡು ಜಾನಪದ ಗೀತೆಗಳನ್ನು ಹಾಡಿದರು. ಮೆಹಬೂಬ್ ಬಾಷಾ ಹಣಗಿ ಪ್ರಥಮ, ವನಿತಾ ಗೊಂದಿ ದ್ವಿತೀಯ ಹಾಗೂ ಉಮಾ ವಾರೆಪ್ಪನವರ ತೃತೀಯ ಬಹುಮಾನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.