ಹಾವೇರಿ

ರೈತ ಸಂಘದ ಸದಸ್ಯರಿಗೆ ಇಂದು ಅಭಿನಂದನಾ ಸಮಾರಂಭ

Published On :

ಹಿರೇಕೆರೂರು: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಹಿರೇಕೆರೂರು ಮಾ. 25ರಂದು ಪಟ್ಟಣದ ತರಳಬಾಳು ಸಾಂಸ್ಕೃತಿಕ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ತಾಲೂಕು ರೈತ ಸಂಘದ ನೂತನ ವಾಹನ ಪೂಜೆ ಹಾಗೂ ರೈತ ಸಂಘದ ಸದಸ್ಯರುಗಳಿಗೆ ರೈತರಿಗೆ ಅಭಿನಂದನಾ ಸಮರ್ಪಣಾ ಸಮಾರಂಭ ಆಯೋಜಿಸಿದ್ದಾರೆ. ತಾಲೂಕು ರೈತ ಸಂಘದ ಗೌರವಾಧ್ಯಕ್ಷ ಸೋಮಶೇಖರಪ್ಪ ಚಪ್ಪರದಳ್ಳಿ ಅಧ್ಯಕ್ಷತೆ ವಹಿಸುವರು. ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಸೋಮುಗುದ್ದು ರಂಗಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಆರ್.ವಿ. ಕೆಂಚೆಳ್ಳೇರ, ಕಾರ್ಯಾಧ್ಯಕ್ಷ ಶಿವಬಸಪ್ಪ ಗೋದಿ, ಸಂಚಾಲಕ ಮಹಮ್ಮದ ಗೌಸುಸಾಬ್ ಪಟೇಲ್, ವಿವಿಧ ತಾಲೂಕುಗಳ ಅಧ್ಯಕ್ಷರಾದ ಬಸವರಾಜ ಕಡೂರ, ರುದ್ರಗೌಡ ಕಾಡನಗೌಡ್ರ, ದಿಳ್ಳೆಪ್ಪ ಮಣ್ಣೂರ, ಮಹಾಲಿಂಗಪ್ಪ ಅಕ್ಕಿಹೋಳಿ, ಗಂಗಣ್ಣ ಎಲಿ, ಸುರೇಶ ಚಲವಾದಿ, ಚಿಕ್ಕಪ್ಪ ಛತ್ರದ, ಮಲ್ಲೇಶಪ್ಪ ಬಳ್ಳಾರಿ ಮೊದಲಾದವರು ಉಪಸ್ಥಿತರಿರುವರು. ತಾಲೂಕು ರೈತ ಸಂಘದ ಅಧ್ಯಕ್ಷ ಬಸನಗೌಡ ಗಂಗಪ್ಪನವರ, ಹಸಿರುಸೇನೆ ಅಧ್ಯಕ್ಷ ಮಹೇಶ ಕೊಟ್ಟೂರ, ಹನುಮಗೌಡ ನಾಗಪ್ಪನವರ, ಲೋಕಪ್ಪ ಹುಲ್ಲತ್ತಿ, ಒದನಗೌಡ ಸೊರಟೂರ, ಪ್ರಭುಗೌಡ ಪ್ಯಾಟಿ, ರುದ್ರಪ್ಪ ಆಣೂರ, ಗಂಗನಗೌಡ ಮುದಿಗೌಡ್ರ, ಶಂಕರಗೌಡ ಮಕ್ಕಳ್ಳಿ, ಶಾಂತನಗೌಡ ಪಾಟೀಲ, ಶಂಕರಗೌಡ ಶಿರಗಂಬಿ, ಹೂವನಗೌಡ ಮಳವಳ್ಳಿ, ವೆಂಕಟೇಶ ಮೇಲಗಿರಿ, ವೀರನಗೌಡ ಪಾಟೀಲ ಮೊದಲಾದವರು ಪಾಲ್ಗೊಳ್ಳುವರು ಕಾರಣ ತಾಲೂಕಿನ ಎಲ್ಲ ರೈತರು ತಪ್ಪದೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಚಾರ ಸಮಿತಿ ಅಧ್ಯಕ್ಷ ವೀರನಗೌಡ ಪಾಟೀಲ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.