ಸಂವಹನ ಕಲೆಯಿಂದ ಬದುಕಿಗೆ ದಾರಿ
ಹಾವೇರಿ: ವೈಚಾರಿಕ ಯುಗದಲ್ಲಿ ಸ್ವತಂತ್ರರಾಗಿ ಬದಕಲು, ಪ್ರಜ್ಞಾವಂತ ಯುವಜನತೆ ಸಲಬವಾಗಿ ಬೆಳೆಯಲು, ಸೌಹಾರ್ದಯುತ ಸಂಪರ್ಕ ಸಾಧಿಸಲು ಸಂವಹನ ಕಲೆಯ ಅಗತ್ಯವಿದ್ದು, ಎಲ್ಲರೂ ಇದರ ಕುರಿತಾಗಿ ಅವಲೋಕನ ಮಾಡುವ ಅವಶ್ಯಕತೆ ಇದೆ ಎಂದು ಜಾಖಂರ್ಡ್ ರಾಜ್ಯದ ರಾಂಚಿ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ. ಶ್ರೇಯಾ ಭಟ್ಟಾಚಾರ್ಯಜಿ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಇಂಗ್ಲೀಷ ಹಾಗೂ ವಿದ್ಯಾರ್ಥಿ ಕಲ್ಯಾಣ ವಿಭಾಗಗಳ ಆಶ್ರಯದಲ್ಲಿ ಶನಿವಾರ ನಡೆದ ಸಂವಹನ ಕಲೆ ಮತ್ತು ಕೌಶಲ್ಯ ಎಂಬ ವಿಷಯದ ಕುರಿತಾದ ಕಾರ್ಯಾಗಾರದಲ್ಲಿ ಮಾತನಾಡಿದರು.
ಸಮರ್ಥ ಗುರಿ ಬೆನ್ನತ್ತಿ ಹೊರಟ ವ್ಯಕ್ತಿಗಳು ಸಂವಹನ ಕಲೆಯ ಮಹತ್ವ ಅರಿಯುವತ್ತ ಹೆಜ್ಜೆ ಇಡಬೇಕಾಗಿದೆ. ನಮ್ಮ ಬಾಳಿಗೆ ಉನ್ನತ ಗುರಿ ಮತ್ತು ಧ್ಯೇಯ ವ್ಯಕ್ತಿತ್ವ ವಿಕಾಸಕ್ಕೆ ದಾರಿದೀಪ. ಯಾವುದೇ ವಿಶ್ವವಿದ್ಯಾಲಯ ಕಲಿಸದೇ ಇರುವ ಜ್ಞಾನವನ್ನು ಜೀವನಾನುಭವ ನಮಗೆ ಕಲಿಸಿ ಕೊಡುತ್ತದೆ. ಓದು ನಮ್ಮನ್ನು ವಿದ್ವಾಂಸರನ್ನಾಗಿ ಮಾಡಬಹುದು, ಪಂಡಿತರನ್ನಾಗಿ ಮಾಡಬಹುದು. ಆದರೆ, ಅನುಭವ ನಮ್ಮನ್ನು ಅತ್ಯಂತ ಜಾಣರನ್ನಾಗಿ ಮಾಡುತ್ತದೆ. ಆದ್ದರಿಂದ ಮಾತನಾಡುವ ಶೈಲಿಯನ್ನು ಪಕ್ವವಾಗಿರಿಸಿಕೊಂಡು ಬೆಳೆಯಲು ಸನ್ನದ್ಧರಾಗಬೇಕೆಂದು ಕರೆ ನೀಡಿದರು. ಕಾರ್ಯಾಗಾರದಲ್ಲಿ ಪ್ರೊ. ಸಂದೀಪಕುಮಾರ ಯಾದವ, ಕಿರಣ ನಿಟ್ಟಾಲಿ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ. ಈ. ಬಿ. ಸೇಡಂಕರ, ಬಿಸಿಎ ಪ್ರಾಚಾರ್ಯರಾದ ಶ್ವೇತಾ ಮರಿಗೌಡರ, ಪ್ರೊ. ಎಸ್.ಎಂ. ಅಂಗಡಿ, ಪ್ರೊ. ಕೃಷ್ಣಾ ನಿಂಬಾಳಕರ, ಪ್ರೊ. ಶಿವಕುಮಾರ ಬನ್ನಿಹಟ್ಟಿ ಉಪಸ್ಥಿತರಿದ್ದರು. ಪ್ರೊ. ಎನ್.ವಿ. ಕಂಬಾಳಿಮಠ ಸ್ವಾಗತಿಸಿದರು. ಡಾ. ಎಂ.ವೈ. ಮೋಳೆಕರ ವಂದಿಸಿದರು. ಪ್ರೊ. ರೇಷ್ಮಾ ಇನಾಮದಾರ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

