ಇಂದು ಬ್ಯಾಡಗಿಯಲ್ಲಿ ಸಲೀಂ ಅಹ್ಮದ್ ಪ್ರಚಾರ
ಬ್ಯಾಡಗಿ: ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಂಅಹ್ಮದ ಮಾ. 29ರಂದು ಚುನಾವಣಾ ಪ್ರಚಾರಾರ್ಥವಾಗಿ ಬ್ಯಾಡಗಿ ಪಟ್ಟಣಕ್ಕೆ ಆಗಮಿಸಲಿದ್ದಾರೆ.
ರೋಡ್‌ಶೋ ಮೂಲಕ ಮತಯಾಚನೆ ಮಾಡಲಿರುವ ಅವರು, ಸಂಗಮೇಶ್ವರ ನಗರದಲ್ಲಿರುವ ಶಾಸಕ ಬಸವರಾಜ ಶಿವಣ್ಣನವರ ನಿವಾಸದಿಂದ ಆರಂಭವಾಗಲಿದ್ದು ಪುರಸಭೆ, ಬೀರೇಶ್ವರ ದೇವಸ್ಥಾನ, ಮುಖ್ಯರಸ್ತೆ, ಚಾವಡಿ ರೋಡ್, ಕುಂಬಾರಓಣಿ, ಕದರಮಂಡಲಗಿ ರಸ್ತೆ ನೆಹರು ನಗರ ಸಂಚರಿಸಿ ಬಳಿಕ ದಾನಮ್ಮದೇವಿ ದೇವಸ್ಥಾನದಲ್ಲಿ ಕೊನೆಗೊಳ್ಳಲಿದೆ.
31 ರಂದು ಪ್ರಚಾರ
ಮಾ. 31 ರಂದು ಬ್ಯಾಡಗಿ ಮತಕ್ಷೇತ್ರದಲ್ಲಿ ಮತಯಾಚನೆ ಮಾಡಲಿರುವ ಸಲೀಂಅಹ್ಮದ್ ಬೆಳಗ್ಗೆ 9ಗಂಟೆಗೆ ದೇವಗಿರಿ, 10 ಕ್ಕೆ ನಾಗನೂರ, 11 ಗಂಟೆಗೆ ದೇವಿಹೊಸೂರ, 12ಕ್ಕೆ ಕಬ್ಬೂರ ಮಧ್ಯಾಹ್ನ 2 ಗಂಟೆಗೆ ಚಿಕ್ಕಬಾಸೂರ, 3 ಗಂಟೆಗೆ ಕಾಗಿನೆಲೆ, ಸಂಜೆ 4 ಗಂಟೆಗೆ ಹೆಡಿಗ್ಗೊಂಡ, 5 ಗಂಟೆಗೆ ಕುರಬಗೊಂಡ, 5.30ಕ್ಕೆ ಚಿಕ್ಕಲಿಂಗದಳ್ಳಿ ಗ್ರಾಮಗಳಲ್ಲಿ ರೋಡ್‌ಶೋ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಬಸವರಾಜ ಶಿವಣ್ಣನವರ, ತಾಲೂಕಾಧ್ಯಕ್ಷ ಎಚ್.ಎಚ್. ದೊಡಮನಿ, ಕಾಗಿನೆಲೆ ಬ್ಲಾಕ್ ಅಧ್ಯಕ್ಷ ಸುರೇಶಗೌಡ ಪಾಟೀಲ, ಮುಖಂಡರಾದ ಎಸ್.ಆರ್. ಪಾಟೀಲ, ಎಸ್.ಸಿ. ಶಿಡೇನೂರ, ಬಸವರಾಜ ಸವಣೂರ, ದಾನಪ್ಪ ಚೂರಿ, ಲಿಂಗಪ್ಪ ಕೊಂಬಳಿ, ವಿರೇಶ ಮತ್ತಿಹಳ್ಳಿ ಉಪಸ್ಥಿತರಿರುವರು. ಚುನಾಯಿತ ಪ್ರತಿನಿಧಿಗಳು ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

