ಬಂಕಾಪುರ ಕ್ರಾಸ್ ಬಳಿ ಬಸ್ ನಿಲುಗಡೆ: ಪೂಜೆ
ಶಿಗ್ಗಾಂವಿ: ತಾಲೂಕಿನ ಬಂಕಾಪುರ ಕ್ರಾಸ್ ಬಳಿ ಬಸ್ ನಿಲುಗಡೆ ಬೋರ್ಡ್ ನಿಲ್ಲಿಸಿ, ಪೂಜೆ ಮಾಡುವುದರೊಂದಿಗೆ ಪುರಸಭೆಯ ಸದಸ್ಯರಾದ ಸಂಗಪ್ಪ ಹರವಿ ಬಸ್ ನಿಲುಗಡೆಗೆ ಚಾಲನೆ ನೀಡಿದರು.
ಪಟ್ಟಣದ ಮತ್ತು ಸುತ್ತಮುತ್ತಲಿನ ಹಳ್ಳಿಗರ ಬಹುದಿನಗಳ ಬೇಡಿಕೆಯಾಗಿದ್ದ ಬಂಕಾಪುರ ಕ್ರಾಸ್ ಬಳಿ ನಿಲುಗಡೆಯಾಗಬೇಕೆಂಬ ಬಹುದಿನಗಳ ಹೋರಾಟದ ಪ್ರತಿ ಫಲವಾಗಿ ಹಾವೇರಿಯ ನಿಯಂತ್ರಣಾಧಿಕಾರಿಯವರ ಪ್ರಸ್ತಾವನೆಯನ್ನು ಪರಿಗಣಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕಚೇರಿ ಮುಖ್ಯಸಂಚಾರ ವ್ಯವಸ್ಥಾಪಕರು ಬಂಕಾಪುರ. ವ. ಸುತ್ತಮುತ್ತಲಿನ ಗ್ರಾಮಗಳ ಪ್ರಯಾಣಿಕರ ಅನುಕೂಲಕ್ಕಾಗಿ ಡಿ. 14ರಿಂದ ಎಲ್ಲ ಡಿಪೋಗಳ ವೇಗದೂತ ಸುಪರ್ಪಾಸ್ಟ್ ಬಸ್ಗಳ ನಿಲುಗಡೆಗೆ ಆದೇಶ ಹೊರಡಿಸಿದ್ದಾರೆ. ಇದರ ಸದುಪಯೋಗವನ್ನು ಇಂದಿನಿಂದಲೇ ಪಟ್ಟಣದ ಹಾಗೂ ಸುತ್ತಮುತ್ತಲಿನ ಪ್ರಯಾಣಿಕರು ಪಡೆಯಬೇಕೆಂದು ಮಾಜಿ ಪುರಸಭೆ ಅಧ್ಯಕ್ಷ ರಾಮಣ್ಣ ರಾಣೋಜಿ ಹೇಳಿದರು.
ಈ ಸಂದರ್ಭದಲ್ಲಿ ವಾಕರಸಾಸ ಕಂಟ್ರೋಲರ್ ಎಸ್.ಬಿ. ಹೊಂಬರಡಿ, ಬಾಪುಗೌಡ್ರು ಪಾಟೀಲ್, ರವಿ ನೆರೆಗಲ್, ಗುರುನಾಥ ರಾಣೋಜಿ, ನಿಲಪ್ಪ ಕುರಿ, ಯಲ್ಲಪ್ಪ ಸುಂಕದ, ಗದಿಗೆಪ್ಪ ಕಳಸೂರ, ಬಸವರಾಜ ಹುರಳಿ, ಮಲ್ಲಿಕಾರ್ಜುನ್ ನೆರೆಗಲ್, ಬಸವರಾಜ ಸುಂಕದ, ವೆಂಕಟೇಶ್ ನಿರೊಳ್ಳಿ, ಸುರೇಶ ರಾಣೋಜಿ, ಮುರಿಗೆಪ್ಪ ದಳವಾಯಿ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

