ಹಾವೇರಿ

ಬಸ್ ಸಂಚಾರಕ್ಕೆ ಚಾಲನೆ: ಹರ್ಷ

Published On :

ರಾಣಿಬೆನ್ನೂರು: ಬಸ್ ಕಾಣದ ಕುಗ್ರಾಮವೆಂಬ ಖ್ಯಾತಿಗೆ ಪಾತ್ರವಾಗಿದ್ದ ತಾಲೂಕಿನ ಕಜ್ಜರಿ ಗ್ರಾಮಕ್ಕೆ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜಪ್ಪ ಸವಣೂರು ಸೋಮವಾರ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ನಗರದ ಬಸ್ ನಿಲ್ದಾಣದ ಎದುರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿ, ಹಲವಾರು ವರ್ಷಗಳಿಂದ ಕಜ್ಜರಿ, ಕೂನಬೇವು, ಬುಡಪನಹಳ್ಳಿ ಗ್ರಾಮದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ತಮ್ಮ ಗ್ರಾಮಕ್ಕೆ ರಾಣಿಬೆನ್ನೂರು ಹಾಗೂ ಬ್ಯಾಡಗಿ ನಗರದಿಂದ ಬಸ್ ಸಂಚಾರವನ್ನು ಆರಂಭಿಸುವಂತೆ ಒತ್ತಾಯಿಸಿ ಶಾಸಕರಿಗೆ ಹಾಗೂ ಬಸ್ ಡಿಪೋ ವ್ಯವಸ್ಧಾಪಕರಿಗೆ ಹಲವಾರು ಪತ್ರಗಳನ್ನು ಬರೆದು ಒತ್ತಾಯಿಸಿದ್ದರು. ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬ್ಯಾಡಗಿ-ರಾಣಿಬೆನ್ನೂರು ಮಧ್ಯದಲ್ಲಿ ಕಾಕೋಳ ಮಾರ್ಗವಾಗಿ ಸಂಚರಿಸುವ ಬಸ್ಗಳಲ್ಲಿ 2 ಬಸ್ಗಳನ್ನು ರಾಣಿಬೆನ್ನೂರಿನಿಂದ ಹೂಲಿಹಳ್ಳಿ, ಕೂನಬೇವು, ಕಜ್ಜರಿ, ಬುಡಪನಹಳ್ಳಿ ಮಾರ್ಗವಾಗಿ ಬ್ಯಾಡಗಿ ಪಟ್ಟಣವನ್ನು ಸೇರುವಂತೆ, 1 ಬಸ್ನ್ನು ಇದೆ ಮಾರ್ಗವಾಗಿ ಮರಳಿ ರಾಣಿಬೆನ್ನೂರು ನಗರವನ್ನು ತಲುಪುವಂತೆ 2 ಬಸ್ ಸಂಚಾರವನ್ನು ಆರಂಭಿಸಬೇಕೆಂದು ಬ್ಯಾಡಗಿ ಶಾಸಕರು ರಾಣಿಬೆನ್ನೂರು ಹಾಗೂ ಬ್ಯಾಡಗಿ ಬಸ್ ಡಿಪೋ ವ್ಯವಸ್ಧಾಪಕರಿಗೆ ಆದೇಶಿಸಿರುವ ಕಾರಣ ಸೋಮವಾರದಿಂದ 2 ಬಸ್ ಸಂಚಾರವನ್ನು ಆರಂಭಿಸಲಾಗಿದ್ದು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಬಸ್ನ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಗ್ರಾಮದ ಮುಖಂಡರಾದ ಮಾರ್ತಾಂಡಪ್ಪ ಮೋಟೆಬೆನ್ನೂರು, ಗುತ್ತೆಪ್ಪ ನಿಂಬಣ್ಣನವರ, ಸೋಮಪ್ಪ ಲಮಾಣಿ, ಕರಿಯಪ್ಪ ಬೇಲೂರು, ಮೈಲಾರೆಪ್ಪ ಯಲ್ಲಾಪುರ, ಸುರೇಶ ಮೋಟೆಬೆನ್ನೂರು, ಮಾಲತೇಶ ಹೂಲಿಹಳ್ಳಿ, ಸುರೇಶ ಪಾಟೀಲ, ಧರ್ಮಪ್ಪ ನಿಂಬಮ್ಣನವರ, ಶಂಕರೆಪ್ಪ ನಿಂಗಮ್ಮನವರ, ನಾಗಪ್ಪ ಬಿದರಕಟ್ಟಿ, ಮಾಲತೇಶ ಕದರಮುಂಡಲಗಿ, ನಿಂಗಪ್ಪ ಕುರುಬಶ್ಯಾನಬೋಗರ ಇದ್ದರು.

ದರ ಏರಿಕೆಗೆ ಖಂಡನೆ


ರಾಣಿಬೆನ್ನೂರು: ಬಸ್ ಪ್ರಯಾಣ ದರ ಏರಿಕೆ ಆದೇಶ ರದ್ದುಪಡಿಸಿ ಹಳೇ ದರವನ್ನೇ ಮುಂದುವರಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾ ಹಾಗೂ ತಾಲೂಕು ಬಿಜೆಪಿ ಘಟಕದ ಆಶ್ರಯದಲ್ಲಿ ನಗರದ ಬಸ್ ನಿಲ್ದಾಣದ ಎದುರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ, ಪ್ರತಿಭಟಿಸಿ ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಓಲೇಕಾರ ಮಾತನಾಡಿ, ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾಗ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ನೆಪದಲ್ಲಿ ಬಸ್ ದರವನ್ನು ಹೆಚ್ಚಿಸುವುದರೊಂದಿಗೆ ಬರಗಾಲದಿಂದ ತತ್ತರಿಸುತ್ತಿರುವ ಜನರ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ. ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳು ಈ ಕೂಡಲೇ ಹೆಚ್ಚಿಸಿರುವ ಬಸ್ ಪ್ರಯಾಣ ದರ ರದ್ದುಪಡಿಸಿ ಮೊದಲಿನ ದರ ಮುಂದುವರಿಸಲು ಆಗ್ರಹಿಸಿದರು. ಭಾರತಿ ಜಂಬಗಿ, ಬಸವರಾಜ ಲಕ್ಷ್ಮೇಶ್ವರ, ಡಾ. ಬಸವರಾಜ ಕೇಲಗಾರ, ಪ್ರಧಾನ ಕಾರ್ಯದರ್ಶಿ ಸಂಕಪ್ಪ ಮಾರನಾಳ, ಮೈಲಪ್ಪ ಗುಡಗೂರು, ಕೆ. ಶಿವಲಿಂಗಪ್ಪ, ಶಿವಪ್ಪ ಕಂಬಳಿ, ರೂಪಾ ಬಾಕಳೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.