ಕೆರೆ ಅತಿಕ್ರಮಣ ತೆರವಾಗದಿದ್ರೆ ಹೋರಾಟ
ಬ್ಯಾಡಗಿ: ತಾಲೂಕಿನ ಧುಮ್ಮಿಹಾಳ ಹೊರವಲಯ ಸರ್ಕಾರಿ ಸ್ವಾಮ್ಯದ ಜೀನವಡ್ಡು ಕೆರೆ ಅತಿಕ್ರಮಣವಾಗಿದ್ದು, ಕೆರೆ ಕೋಡಿ ಒಡೆದು ಹಾಕಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಕುರಿತು ತಹಸೀಲ್ದಾರ್ಗೆ ಮನವಿ ನೀಡಿದ ಗ್ರಾಮಸ್ಥರು ಧುಮ್ಮಿಹಾಳ ರಿ.ಸ.ನಂ. 168ರಲ್ಲಿ ಈ ಕೆರೆಗೆ ಹೊಂದಿಕೊಂಡ ಅತ್ತಿಕಟ್ಟಿ ಗ್ರಾಮದ ರಿ.ಸ.ನಂ. 179ರ ಭೂಮಿಯನ್ನು ಹಿರೇಕೆರೂರು ತಾಲೂಕಿನ ಕೋಡ ಗ್ರಾಮದ ಸಣ್ಣಗೌಡ ಪಾಟೀಲ ಅವರು ಖರೀದಿಸಿದ್ದಾರೆ. ತನ್ನ ಜಮೀನಿನ ಹದ್ದು ಕೆರೆ ವರೆಗೂ ಇದೆ ಎಂದು ನಿರ್ಮಿಸಿದ್ದ ಕೆರೆಯ ಕೋಡಿ ಒಡೆದು ಹಾಕಿದ್ದಲ್ಲದೆ ಕೆರೆಯ ಅಂಗಳದಲ್ಲಿ ಸಾಗುವಳಿ ಮಾಡಲು ಅನುಕೂಲವಾಗಲೆಂದು ಕಾಲುವೆಯನ್ನೂ ಮುಚ್ಚಿಸಿದ್ದಾರೆ. ಇದರಿಂದ ಅಕ್ಕಪಕ್ಕದ ಹೊಲಗಳಲ್ಲಿ ಮಳೆಗಾಲದಲ್ಲಿ ಮಳೆ ನೀರು ನುಗ್ಗುವ ಸಂಭವವಿದೆ. ಸುಮಾರು ಣಣ ಎಕರೆ ಪ್ರದೇಶದಲ್ಲಿ ಬೆಳೆಹಾನಿಯಾಗಲಿದೆ ಎಂದು ಗ್ರಾಮಸ್ಥರು ಆತಂಕವ್ಯಕ್ತಪಡಿಸಿದ್ದಾರೆ. ಕೆರೆ ಬಹುಭಾಗ ನನ್ನ ಜಮೀನಿಗೆ ಸಂಬಂಧಪಟ್ಟಂತೆ ಹದ್ದುಬಸ್ತು ದಾಖಲೆ ಇದೆ. ಅಲ್ಲಿವರೆಗೂ ಕೆರೆ ಮುಚ್ಚುವುದಾಗಿ ಮಾಲೀಕರು ಹೇಳುತ್ತಿದ್ದಾರೆ.
ಹೋರಾಟಕ್ಕೆ ಸಜ್ಜು: ಸರ್ಕಾರಿ ಸ್ವಾಮ್ಯದ ಜೀನವಡ್ಡು ಕೆರೆ ಅತಿಕ್ರಮಣ ತೆರವುಗೊಳಿಸಿ ಅಕ್ಕಪಕ್ಕದ ರೈತರ ಹಿತ ಕಾಪಾಡುವಂತೆ ತಾಲೂಕಾಡಳಿತ ಮುಂದಾಗಬೇಕು. ಇಲ್ಲದಿದ್ದಲ್ಲಿ ತಾಲೂಕು ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡುವುದಾಗಿ ಗ್ರಾಪಂ ಉಪಾಧ್ಯಕ್ಷೆ ಸುಮಿತ್ರಾ ನವಲೆ, ಸದಸ್ಯ ಸದಾಶಿವ ಹತ್ತಿಕಾಳ, ರೈತರಾದ ಬಿ.ಎಂ. ಕೋಗೂರ, ಈರಪ್ಪ ಮೂಡಿ, ಗುರುಬಸಪ್ಪ ಕರೇಗೌಡ್ರ, ರುದ್ರಪ್ಪ ಮೂಡಿ, ಸುರೇಶ ಬಾಸೂರ, ಗುರುಲಿಂಗಪ್ಪ ಸವದತ್ತಿ, ಚಂದ್ರಶೇಖರ ಸವದತ್ತಿ, ಶಿವಪ್ಪ ಮೂಡಿ, ನಾಗಪ್ಪ, ಲಕ್ಷ್ಮಪ್ಪ, ಅಶೋಕ, ಇನ್ನಿತರರು ತಾಲೂಕಾಡಳಿತಕ್ಕೆ ಎಚ್ಚರಿಸಿದ್ದಾರೆ.
ಕ್ರಮ ಜರುಗಿಸುವ ಭರವಸೆ: ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ತಹಸೀಲ್ದಾರ್ ಶಿವಶಂಕರ ನಾಯಕ್, ಯಾವುದೇ ಕಾರಣಕ್ಕೂ ಸರ್ಕಾರಿ ಸ್ವಾಮ್ಯದ ಆಸ್ತಿ ಕಬಳಿಸಲು ಬಿಡುವುದಿಲ್ಲ. ಸೂಕ್ತ ತನಿಖೆ ನಡೆಸಿ ತಪ್ಪಿತ ಸ್ಥರ ವಿರುದ್ಧ ಕರ್ಠಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

