ಪೈಪ್‌ಲೈನ್ ಬದಲಿಸಲು ಆಗ್ರಹಿಸಿ ಪ್ರತಿಭಟನೆ
ರಾಣಿಬೆನ್ನೂರು: ತಾಲೂಕಿನ ಕಜ್ಜರಿ ಗ್ರಾಪಂ ಅಭಿವೃದ್ದಿ ಅಧಿಕಾರಿ ಹಾಗೂ ಸಿಬ್ಬಂದಿ ಗ್ರಾಪಂ ವ್ಯಾಪ್ತಿಯ ಕೂನಬೇವು ಗ್ರಾಮದ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸುವ ಪೈಪ್‌ಲೈನ್ ಬದಲಾಯಿಸದಿರುವ ಕಾರಣ, ಕೂನಬೇವು ಗ್ರಾಮದ ಬಣಕಾರ ಓಣಿಯ ಜನರು ಕಲುಷಿತ ನೀರನ್ನು ಸೇವಿಸುವಂತಾಗಿದ್ದು ಆದಷ್ಟು ಬೇಗ ಪೈಪ್‌ಲೈನ್ ಬದಲಾಯಿಸಿ ಶುದ್ದ ನೀರನ್ನು ಪೂರೈಸದಿದ್ದರೆ ಗ್ರಾಪಂ ಎದುರು ಪ್ರತಿಭಟಿಸುವುದಾಗಿ ಗ್ರಾಮದ ಸಾರ್ವಜನಿಕರು ಆಗ್ರಹಿಸಿದರು.
ಬುಧವಾರ ನಗರದ ತಾಪಂ ಸಭಾಭವನದಲ್ಲಿ ತಾಲೂಕಿನ 35 ಗ್ರಾಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಕುಡಿಯುವ ನೀರು ಪೂರೈಸುವ ಗ್ರಾಪಂ ವಾಟರ್ ಮ್ಯಾನ್‌ಗಳ ಸಭೆ ಕರೆದ ಸುದ್ದಿ ತಿಳಿದಿದ್ದ ಕೂನಬೇವು ಗ್ರಾಮದ ಸಣ್ಣಿಂಗಪ್ಪ ಬ್ಯಾಡಗಿ, ಸೋಮಪ್ಪ ತಂಡೂರು ಕೂನಬೇವು ಗ್ರಾಮದ ಸಾರ್ವಜನಿಕರಿಗೆ ಗ್ರಾಪಂನವರು ಪೂರೈಸುತ್ತಿರುವ ಕಲುಷಿತ ನೀರನ್ನು ಸಂಗ್ರಹಿಸಿ ತಂದಿದ್ದಲ್ಲದೆ, ಅಧಿಕಾರಿಗಳೆದುರು ಪ್ರದರ್ಶಿಸಿ ಕಲುಷಿತ ನೀರು ಪೂರೈಸುತ್ತಿರುವ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು. ತಾಪಂ ವ್ಯವಸ್ಥಾಪಕ ಬಸವರಾಜ ಶಿಡೆನೂರು ಮಾತನಾಡಿ, ಸದರಿ ವಿಷಯದ ಕುರಿತು ಸಂಬಂಧಿಸಿದ ಗ್ರಾಪಂ ಅಭಿವೃದ್ದಿ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ, ಅವಶ್ಯವಿದ್ದಲ್ಲಿ ಪೈಪ್‌ಲೈನ್ ರಿಪೇರಿ ಕಾರ್ಯ ನಡೆಸುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನಾಕಾರರು ಹಿಂದಕ್ಕೆ ಸರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

