ಭಕ್ತಿಭಾವದ ಶ್ರೀನಿವಾಸ ಕಲ್ಯಾಣ ಮಹೋತ್ಸವ
ಹಾನಗಲ್ಲ: ಪ್ರತಿ ವರ್ಷದಂತೆ ಹಾನಗಲ್ಲ ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀನಿವಾಸ ಹಾಗೂ ಪದ್ಮಾವತಿಯ ವಿವಾಹ ಕಲ್ಯಾಣ ಮಹೋತ್ಸವವನ್ನು ವೈಶಾಖ ಶುದ್ಧ ದಶಮಿಯಂದು ಭಕ್ತಿ ಪೂರ್ವಕವಾಗಿ ಧಾರ್ಮಿಕ ವಿಧಿ ವಿಧಾನಗಳಿಂದ ಆಚರಿಸಲಾಯಿತು. ನಗರದ ವೆಂಕಟೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ, ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ತಾಲೂಕು ಘಟಕ ಹಾಗೂ ಭಕ್ತರ ಸಹಕಾರದಿಂದ ಶ್ರೀನಿವಾಸ ಹಾಗೂ ಪದ್ಮಾವತಿ ವಿವಾಹ ನೆರವೇರಿಸಲಾಯಿತು. ವಧು ಪದ್ಮಾವತಿಯವರ ಕಡೆಯವರಾಗಿ ಶ್ರೇಯಾ ಪ್ರಮೋದ ಕುಲಕರ್ಣಿ ಮತ್ತು ವರ ಶ್ರೀನಿವಾಸನ ಕಡೆಯವರಾಗಿ ಶಿಲ್ಪಾ ಅರವಿಂದ ಕರಗುದರಿ ಮದುವೆ ವಿಧಿ ವಿಧಾನ ನೆರವೇರಿಸಿದರು. ವಧು-ವರರಾದ ಶ್ರೀನಿವಾಸ ಹಾಗೂ ಪದ್ಮಾವತಿಯ ವಿಗ್ರಹಗಳಿಗೆ ಸುಗಂಧ ತೈಲದೊಂದಿಗೆ ಸುರಗಿಯ ನೀರು ಎರೆದು ವೇಷ ಭೂಷಣಗಳಿಂದ ಹಾಗೂ ಆಭರಣಗಳಿಂದ ಅಲಂಕರಿಸಲಾಯಿತು. ಸಾಂಪ್ರದಾಯಿಕ ವೇದ ಘೋಷಗಳಿಂದ, ವೈದಿಕ ಪರಂಪರೆಯ ಮಂತ್ರೋಚ್ಛಾರಣೆಯಿಂದ ಹಾಗೂ ಧಾರ್ಮಿಕ ವಿಧಿ ವಿಧಾನಗಳಿಂದ ಪದ್ಮಾವತಿಯನ್ನು ಶ್ರೀನಿವಾಸನಿಗೆ ಧಾರೆ ಎರೆದು ಕೊಡುವ ಕಾರ್ಯವನ್ನು ಶಾಂತೇಶ ಕರಗುದರಿ ಹಾಗೂ ಶ್ರೀಪಾದ ಅಕ್ಕಿವಳ್ಳಿ ಪುರೋಹಿತರು ನಿರ್ವಹಿಸಿದರು.
ಇದಕ್ಕೂ ಮುನ್ನ ಇಲ್ಲಿನ ದತ್ತ ಮಂದಿರದಿಂದ ವೆಂಕಟೇಶ್ವರ ದೇವಸ್ಥಾನದ ವರೆಗೆ ಕಲ್ಯಾಣ ಮಹೋತ್ಸವದ ಅದ್ಧೂರಿ ಮೆರವಣಿಗೆಯನ್ನು ಸಕಲ ಮಂಗಲ ವಾದ್ಯ ವೈಭವಗಳೊಂದಿಗೆ ನಡೆಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

