ವೆಂಕಟೇಶ್ ಗೆಲವಿನಿಂದ ಜೆಡಿಎಸ್ ಶಾಸಕ ರಾಜಣ್ಣಗೆ ಮುಖಭಂಗ: ಶ್ರೀರಾಮರೆಡ್ಡಿ
ಚಿಂತಾಮಣಿ: ಹಣ, ಹೆಂಡ ನೀಡಿ ಮತ ಪಡೆಯಲು ಮುಂದಾದ ಜೆಡಿಎಸ್ ಶಾಸಕ ರಾಜಣ್ಣ ಕುತಂತ್ರ ರಾಜಕಾರಣಕ್ಕೆ ಇಲ್ಲಿನ ಮತದಾರ ಪ್ರಭುಗಳು ತಿರಸ್ಕರಿಸಿದ ಕಾರಣ ಮುಖಭಂಗವಾಗಿದೆ ಎಂದು ಕೆಪಿಸಿಸಿ ಸದಸ್ಯ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯ ನಂದನವನ ಶ್ರೀರಾಮರೆಡ್ಡಿ ಹೇಳಿದರು.
ತಾಲೂಕಿನ ಚಿಲಕಲನೇರ್ಪು ಹೋಬಳಿ ಮಿಟ್ಟಹಳ್ಳಿ ಗ್ರಾಮ ಪಂಚಾಯ್ತಿಯ ಉಪಚುನಾವಣೆಯಲ್ಲಿ ಬಿಸಿಎಂ(ಎ)ಗೆ ಮೀಸಲಿಟ್ಟ ಸ್ಥಾನಕ್ಕೆ ಗ್ರಾಮದ ಮಾಜಿ ಸಚಿವ ವಿ.ಮುನಿಯಪ್ಪ ಬೆಂಬಲಿತ ಅಭ್ಯರ್ಥಿ ವೆಂಕಟೇಶ್ 335 ಮತಗಳನ್ನು ಪಡೆದು 10 ಮತಗಳ ಅಂತರದಿಂದ ಜಯಶೀಲರಾದ ನೂತನ ಗ್ರಾಮ ಪಂಚಾಯ್ತಿ ಸದಸ್ಯನನ್ನು ಅಭಿನಂದಿಸಿ ಮಾತನಾಡಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಮಿಟ್ಟಹಳ್ಳಿ ಗ್ರಾಪಂ ಉಪಚುನಾವಣೆಗೆ ಶಾಸಕ ರಾಜಣ್ಣ ಹಾಗೂ ಬೆಂಬಲಿಗರು ಇಲ್ಲಿನ ಮತದಾರರಿಗೆ ಆಮಿಷಗಳನ್ನು ಒಡ್ಡಿದರೂ ಪ್ರಯೋಜನವಾಗಿಲ್ಲ. ಕಾರಣ ನ್ಯಾಯದ ಪರವಾಗಿ ಜಯ ಸಿಕ್ಕಿದೆ ಎಂದರು.
ಗ್ರಾಮ ಪಂಚಾಯ್ತಿ ನೂತನ ಸದಸ್ಯ ವೆಂಕಟೇಶ್ ಮತದಾರರು ಮತ್ತೆ ನಮ್ಮ ಜೊತೆ ಇದ್ದಾರೆ ಎಂದು ಸಾಬೀತು ಪಡಿಸಿ ಪುನಃ ಪಕ್ಷದ ಅಭ್ಯರ್ಥಿಯನ್ನೆ ಗೆಲ್ಲಿಸಿರುವುದು ಹರ್ಷ ತಂದಿದೆ ಎಂದು ನುಡಿದರು.
ರಂಗೇರಿದ ಉಪಚುನಾವಣೆ: 2 ದಿನಗಳಿಂದ ತೀವ್ರ ಕುತೂಹಲದಿಂದ ರಂಗೇರಿದ ಉಪಚುನಾವಣೆ ಫಲಿತಾಂಶಕ್ಕಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪರ-ವಿರೋಧ ಅಭ್ಯರ್ಥಿಗಳ ಸೋಲು -ಗೆಲುವಿನ ಲೆಕ್ಕಾಚಾರದಲ್ಲಿ ಬೆಟ್ಟಿಂಗ್ ಹಾಗೂ ಗುಂಡು- ತುಂಡು ಪಾರ್ಟಿಗಳು ಭರ್ಜರಿಯಾಗಿ ನಡೆಯುತ್ತಿತ್ತು ಎನ್ನಲಾಗಿದೆ.
ಚುನಾವಣೆ ಫಲಿತಾಂಶಕ್ಕಾಗಿ ಗ್ರಾಮಗಳಲ್ಲಿ ಜನರು ವಿಧಾನಸಭಾ ಚುನಾವಣೆ ಫಲಿತಾಂಶ ಮಾದರಿಯೇ ಗೆಲ್ಲುಬಹುದಾ ಎಂಬ ಊಹೆ ಶಾಸಕ ರಾಜಣ್ಣ ನಂಬಿಕೆ ಸುಳ್ಳಾಯಿತು. ಕಾಂಗ್ರೆಸ್ ಕಾರ್ಯಕರ್ತರು ಗ್ರಾಮದಲ್ಲಿ ಗೆಲುವಿನ ಹುಮ್ಮಸ್ಸಿನಿಂದ ವಿಜಯೋತ್ಸವ ಆಚರಿಸಿದರು.
ಕಾರಣಾಂತರಗಳಿಂದ ಮಿಟ್ಟಹಳ್ಳಿ ಗ್ರಾಮದ ಮುನಿಸ್ವಾಮಿ ಹಾಗೂ ಉಪ್ಪರಪೇಟೆ ಪಂಚಾಯ್ತಿಯ ಬಿಂಗಾನಹಳ್ಳಿ ಗ್ರಾಮದ ರಾಮಕ್ಕ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯಲು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಇದೇ 4ರಂದು ಮತದಾನ ನಡೆದಿತ್ತು. ಬುಧವಾರ ಫಲಿತಾಂಶವನ್ನು ಪಟ್ಟಣದ ತಾಲೂಕು ದಂಡಾಧಿಕಾರಿ ಕಚೇರಿಯಲ್ಲಿ ಬೆಳಿಗ್ಗೆ 9 ರಿಂದ ಪ್ರಾರಂಭವಾದ ಚುನಾವಣೆ ಪ್ರಕ್ರಿಯೆ ಅಂತಿಮವಾಗಿ ಕಾಂಗ್ರೆಸ್ಸಿನ ಮಾಜಿ ಸಚಿವ ವಿ.ಮುನಿಯಪ್ಪ ಬೆಂಬಲಿತ ಅಭ್ಯರ್ಥಿ ವೆಂಕಟೇಶ್ (335 ಮತ ಪಡೆದು) ಜಯಶೀಲರಾದರೆ ಪ್ರತಿಸ್ಪರ್ಧಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ದೇವರಾಜು (325 ಮತ) ಪಡೆದು ಸೋಲನ್ನಪ್ಪಿದ್ದಾರೆ. ಉಪ್ಪಾರಪೇಟೆ ಪಂಚಾಯ್ತಿ ಉಪಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ಮಹಿಳಾ ಸ್ಥಾನಕ್ಕೆ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸುಧಾಕರ್ ಬೆಂಬಲಿತ ಕದಿರಮ್ಮ 332 ಮತ ಪಡೆದು ಜಯಶೀಲರಾಗಿದ್ದಾರೆ. ಇವರ ಪ್ರತಿಸ್ಪರ್ಧಿ ಹಾಲಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಬೆಂಬಲಿತ ಅಭ್ಯರ್ಥಿ ನರಸಮ್ಮ 121 ಮತ ಪಡೆದು ಸೋಲನ್ನಪ್ಪಿದ್ದಾರೆ ಎಂದು ಚುನಾವಣಾಧಿಕಾರಿ ಮನುಕುಮಾರ್ ಹಾಗೂ ಮಂಜನ್ಕುಮಾರ್ ತಿಳಿಸಿದ್ದಾರೆ.
ಈ ಸಂದರ್ಭ ತಾಲೂಕು ಪಂಚಾಯ್ತಿ ಸದಸ್ಯ ವೆಂಕಟರೆಡ್ಡಿ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಕಮಲಮ್ಮ,ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ನರಸಿಂಹರೆಡ್ಡಿ,ಕೆಂಚಾರ್ಲಹಳ್ಳಿ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷ ಕೃಷ್ಣಾರೆಡ್ಡಿ, ಕಾಂಗ್ರೆಸ್ ಹಿರಿಯ ಮುಖಂಡ ಕದಿರೇಪಲ್ಲಿ ಕೃಷ್ಣಪ್ಪ ಹಾಗೂ ಭಾಸ್ಕರ್, ಮದ್ದಿರೆಡ್ಡಿ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಸಿಹಿ ಹಂಚಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

