ಕೋಲಾರ

ಮನೆ ಬೀಗ ಮುರಿದು ಲಕ್ಷಾಂತರ ರು. ಬೆಲೆಬಾಳುವ ಚಿನ್ನಾಭರಣ ದರೋಡೆ

Published On :

ಚಿಂತಾಮಣಿ: ಮನೆ ಬೀಗ ಹೊಡೆದು ಲಕ್ಷಾಂತರ ರು. ಬೆಲೆಬಾಳುವ ಬಂಗಾರದ ಒಡವೆ ಹಾಗೂ ನಗದು ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಪಟ್ಟಣದಲ್ಲಿನ ಸೊಣ್ಣಶೆಟ್ಟಹಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಪಟ್ಟಣದ ಸೊಣ್ಣಶೆಟ್ಟಹಳ್ಳಿ 14ನೇ ವಾರ್ಡ್ 5ನೇ ಕ್ರಾಸ್ ಬಳಿ ಇರುವ ಡಾ. ಶಬೀರ್ ಎಂಬುವರ ಮನೆಯಲ್ಲಿ ಅಪರಿಚಿತ ಕಳ್ಳರು ಮಂಗಳವಾರ ರಾತ್ರಿ ಮನೆ ಮುಂಭಾಗದ ಬೀಗವನ್ನು ಹೊಡೆದು ಒಳ ನುಗ್ಗಿ ಬೀರುವಿನಲ್ಲಿದ್ದ ಸುಮಾರು 6 ಲಕ್ಷ ರು. ಬೆಲೆಬಾಳುವ ಬಂಗಾರ ನೆಕ್ಲೆಸ್, ಕುತ್ತಿಗೆ ಚೈನ್, ಓಲೆ, ಉಂಗುರ, ಬ್ರಾಸ್ಲೆಲೈಟ್ ಸೇರಿದಂತೆ 10 ಸಾವಿರ ನಗದು ಹಣ ಕಳ್ಳತನ ಮಾಡಿ ಪರಾರಿಯಾಗಿರುವುದಾಗಿ ಮನೆ ಮಾಲೀಕ ಶಬೀರ್ ಪಟ್ಟಣದ ಪೊಲೀಸರಿಗೆ ದೂರು ನೀಡಿದ್ದಾನೆ.
ಕಳೆದ ಸೋಮವಾರ ಷಾಬೆಖಾದರ್ ಹಬ್ಬವಾಗಿ ತನ್ನ ಸ್ವಗ್ರಾಮವಾದ ತಾಲೂಕಿನ ಕೈವಾರಕ್ಕೆ ಕುಟುಂಬ ಸಮೇತರಾಗಿ ಹೋಗಿದ್ದ ಹಿನ್ನೆಲೆಯಲ್ಲಿ ಯಾರೋ ನೆರೆಹೊರೆಯ ಅಪರಿಚಿತರು ಈ ಕೃತ್ಯಕ್ಕೆ ಮುಂದಾಗಿರಬಹುದೆಂದು ಮನೆ ಮಾಲೀಕ ಶಬೀರ್‌ಪಾಷ ಪೊಲೀಸರ ಸಮಕ್ಷಮದಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ. ಸುದ್ದಿ ತಿಳಿದ ಘಟನಾಸ್ಥಳಕ್ಕೆ ವೃತ್ತ ನಿರೀಕ್ಷಕ ನಂಜಪ್ಪ ಸಬ್ ಇನ್ಸೆಪೆಕ್ಟರ್ ಮುರಳಿ ಸ್ಥಳ ಪರಿಶೀಲಿಸಿದರು. ಚಿಕ್ಕಬಳ್ಳಾಪರ ಹಾಗೂ ಕೋಲಾರದಿಂದ ಬೆರಳಚ್ಚು ತಜ್ಞರು ಹಾಗೂ ಶ್ವಾನದಳವನ್ನು ಕರೆಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೇಸ್ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.