ಚಿಂತಾಮಣಿ: ಕವಿ ಕಾವ್ಯ ಕಾರ್ಯಕ್ರಮ
ಕ.ಪ್ರ.ವಾರ್ತೆ ಟಿ ಚಿಂತಾಮಣಿ ಟಿ ಆ.8
ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ತಾಲೂಕಿನ ಮುರುಗಮಲ್ಲ ಬೊಗ್ಗರಂ ನಾರಾಯಣಯ್ಯ ಶೆಟ್ಟಿ ಆದಿಲಕ್ಷ್ಮಮ್ಮ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಶಾಲೆಯ ಅಂಗಳದಲ್ಲಿ ಕವಿ ಕಾವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಕನ್ನಡ ಕಾವ್ಯಲೋಕದ ದಿಗ್ಗಜರ ಬದುಕು, ಬರಹಗಳ ಕುರಿತು ಮಾತನಾಡುವ ಮೂಲಕ ಕನ್ನಡದ ಕಹಳೆಯನ್ನು ಮೊಳಗಿಸಿದರಲ್ಲದೆ ಕವಿ ಪುಂಗವರಿಗೆ ನುಡಿ ನಮನ ಸಲ್ಲಿಸಿದರು.
ಹಲವು ವಿದ್ಯಾರ್ಥಿಗಳು ಸ್ವರಚಿತ ಚುಟುಕುಗಳನ್ನು ವಾಚಿಸಿದರು. ಭ್ರಷ್ಟಾಚಾರ ಹಾಗೂ ಪರಿಸರದ ಕುರಿತು ಅಚ್ಚ ಹಾಗೂ ಸ್ವಚ್ಛ ಕನ್ನಡದಲ್ಲಿ ಮಂಡಿಸಿ ಕನ್ನಡ ಭಾಷೆಯ ಪಾವಿತ್ರ್ಯ ಬಿಂಬಿಸಿದರು. ನವೀದ್, ಸುಧಾರಾಣಿ ಮತ್ತು ರಘುವರುಣ ಪವಿತ್ರ ಗ್ರಂಥಗಳಾದ ಭಗವದ್ಗೀತೆ, ಕುರಾನ್, ಬೈಬಲ್ನಲ್ಲಿರುವ ಹಲವು ಶ್ಲೋಕಗಳನ್ನು ಪಠಿಸಿ ಧರ್ಮ ಸಹಿಷ್ಣುತೆಯ ಸಂದೇಶ ಸಾರಿದರು.
ಜಾನಪದ ಕಲಾವಿದರಾದ ಸೀಕಲ್ ನರಸಿಂಹಪ್ಪ, ಡಿ.ಎಂ. ಮಹೇಶ್ಕುಮಾರ್, ಸಾರ್ವಪ್ಪಲ್ಲಿ ಚಂದ್ರಶೇಖರ್ ಜಾನಪದ ಗೀತೆ ಹಾಡಿದರು. ಕಲಾವಿದರಾದ ಮೈಲಾಂಡ್ಲಹಳ್ಳಿ ಅಶ್ವತ್ಥಪ್ಪ ಹಾಗೂ ಕೆ.ಎನ್.ಅಕ್ರಂಪಾಷಾ ಹಾಸ್ಯ ಚಟಾಕಿ ಹಾರಿಸಿ, ಸಭಿಕರನ್ನು ನಗೆಗಡಲಲಿ ತೇಲಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಶಿಕ್ಷಕ ಕಡದನಮರಿಯ ಎಂ.ರೆಡ್ಡೆಪ್ಪಾಚಾರಿ ಮಾತನಾಡಿ, 'ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು' ಎಂಬಂತೆ ಉದಯೋನ್ಮುಖ ಕವಿಗಳ ಹಳೆಗನ್ನಡದ ಸಾಹಿತ್ಯದ ಬಗ್ಗೆ ಹಾಗೂ ಕುಮಾರವ್ಯಾಸ, ಕುವೆಂಪು ಅವರ ಸಾಹಿತ್ಯಗಳ ವಿಶೇಷತೆ ವಿವರಿಸಿದರು.
ವೇದಿಕೆ ಅಧ್ಯಕ್ಷ ಕಾಗತಿ ವಿ.ವೆಂಕಟರತ್ನಂ ಪ್ರಾಸ್ತಾವಿಕವಾಗಿ ಮಾತನಾಡಿ, ವೇದಿಕೆಯ ಕಾರ್ಯಚಟುವಟಿಕೆಗಳ ಹಾಗೂ ಈ ಕಾರ್ಯಕ್ರಮದ ಧ್ಯೇಯೋದ್ದೇಶಗಳ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಯಿತು.
ಉಪಾಧ್ಯಕ್ಷ ಆರ್.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ರಾಯಲ್ ಶಿ.ಮ.ಮಂಜುನಾಥ್, ಸಂಚಾಲಕರಾದ ಎಸ್.ಸಿ. ಶ್ರೀನಿವಾಸರೆಡ್ಡಿ, ಶಾಲೆ ಮುಖ್ಯ ಶಿಕ್ಷಕಿ ಸತ್ಯಭಾಮ, ಉಪನ್ಯಾಸಕಿ ಎನ್.ಅರುಣ, ಉಪನ್ಯಾಸಕರಾದ ವೆಂಕಟರವಣಪ್ಪ, ನೆಲವಾಗಿಲು ಧನಪಾಲ, ರಮೇಶ್ ಚನ್ನಪ್ಪ, ಕಾರ್ಯದರ್ಶಿ ಕೆ.ಎಸ್.ನೂರುಲ್ಲಾ ಮುಂತಾದವರು ಉಪಸ್ತೀತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

