ಬಾಂಕ್ ಸಾಲ ಸೌಲಭ್ಯ ಸದುಪಯೋಗವಾಗಲಿ: ವಾಸು
ಗೌರಿಬಿದನೂರು: ಬ್ಯಾಂಕುಗಳು ರೈತರ ಕೃಷಿ ಚಟುವಟಿಕೆಗೆ ಸಹಾಯಹಸ್ತ ನೀಡುತ್ತಿದೆ. ಸಕಾಲಕ್ಕೆ ಸಾಲ ಸೌಲಭ್ಯ ಪಡೆದು ಅಭಿವೃದ್ಧಿ ಸಾಧಿಸಲು ಬೆಳೆಗಾರರು ಮುಂದಾಗಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪ್ರಧಾನ ವ್ಯವಸ್ಥಾಪಕರಾದ ವಾಸು ತಿಳಿಸಿದರು.
ಇಲ್ಲಿನ ಸುಮಂಗಲಿ ಕಲ್ಯಾಣ ಮಂಟಪದಲ್ಲಿ ಶನಿವಾರ ತಾಲೂಕಿನ ಮೈಸೂರ್ ಬಾಂಕ್ ಶಾಖೆಗಳ ಸಹ ಕಾರದಿಂದ ನಡೆದ ಬೃಹತ್ ಕೃಷಿ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಈ ಬಾರಿಯೂ ಮಳೆ ಅಭಾವ ಕಂಡುಬರುತ್ತಿದೆ. ಈ ಎರಡು ಜಿಲ್ಲೆಗಳಲ್ಲಿ ಶಾಶ್ವತ ನೀರಾವರಿ ಸೌಲಭ್ಯಗಳಿಲ್ಲ, ದೊಡ್ಡ ಕಾರ್ಖಾನೆಗಳು ಸಹಾ ಇಲ್ಲ. ಈ ಭಾಗದ ರೈತರು ಕೃಷಿಯನ್ನೇ ಅವಲಂಭಿಸಿದ್ದಾರೆ. 1200 ಅಡಿವರೆಗೆ ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಸಹಾ ಈ ಭಾಗದ ರೈತರಿಗೆ ಮೈಸೂರು ಬ್ಯಾಂಕ್ ಕೃಷಿ ಸಾಲ ನೀಡುತ್ತಿದೆ ಎಂದರು.
ಮೈಸೂರ್ ಬ್ಯಾಂಕ್ ಕೋಲಾರ ಜಿಲ್ಲೆಯ ಪ್ರಧಾನ ವ್ಯವಸ್ಥಾಪಕ ಆನಂದ ಸೆಲ್ವಂ ಮಾತನಾಡಿ, ಕೃಷಿಗೆ ಸಹಾಯವಾಗಿ ಈ ಭಾಗದ ರೈತರು, ಹೈನುಗಾರಿಕೆ, ಕೋಳಿ -ಕುರಿ ಸಾಕಣೆ ಮುಂತಾದ ಉಪ ಕಸುಬುಗಳನ್ನು ಮಾಡಬಹುದಾಗಿದೆ ಎಂದು ಸೂಚಿಸಿದರು.
ಸಕಾಲದಲ್ಲಿ ಬ್ಯಾಂಕಿನಿಂದ ಪಡೆದ ಕೃಷಿ ಸಾಲ ಪಾವತಿಸಿದ 20 ಮಂದಿ ರೈತರನ್ನು ಬ್ಯಾಂಕಿನ ಸಿಬ್ಬಂದಿ ಆತ್ಮೀಯವಾಗಿ ಸನ್ಮಾನಿಸಿದರು. 66 ಮಂದಿ ರೈತರಿಗೆ 3.21 ಕೋಟಿ ಸಾಲವನ್ನಾಗಿ ನೀಡಲಾಯಿತು. ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಸಾಲವನ್ನು ನೀಡಲಾಗುವುದು ಎಂದು ಸಹಾ ತಿಳಿಸಿದರು.
ಗೌರಿಬಿದನೂರು ಮೈಸೂರು ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾದ ರಂಗನಾಥ್, ಇಡಗೂರಿನ ವಾಣಿ, ತೊಂಡೇಬಾವಿ ಶಾಖೆಯ ಶಿವಕುಮಾರ್, ವಾಟದಹೊಸಹಳ್ಳಿ ಶಾಖೆಯ ಶಿವರಾಮಿರೆಡ್ಡಿ, ದಾರಿನಾಯಕನ ಪಾಳ್ಯದ ಶಾಖೆಯ ನಾಗರಾಜು, ತಾಲೂಕು ಕೃಷಿ ಸಹಾಯಕ ನಿರ್ದೇಶಕ ಡಾ.ಅನೂರೂಪ, ಸುಬ್ರಹ್ಮಣ್ಯಂ, ಮುಂತಾದವರು ಉಪಸ್ಥಿತರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

