ಕೋಲಾರ

ಅಕ್ರಮ ಮದ್ಯಕೊಳೆ ನಾಶ

Published On :

ಮಾಲೂರು: ತಾಲೂಕಿನಾದ್ಯಂತ ಅಬಕಾರಿ ಇಲಾಖೆ ವಶ ಪಡಿಸಿಕೊಂಡಿದ್ದ ಅಕ್ರಮ ಮದ್ಯಕೊಳೆಯನ್ನು ಇಲ್ಲಿನ ಪ್ರವಾಸಿ ಮಂದಿರದ ಬಳಿ ಗುರುವಾರ ನಾಶ ಪಡಿಸಿದರು. ಕೋಲಾರ ಅಬಕಾರಿ ಉಪಅಯುಕ್ತ ಮಹದೇವಸ್ವಾಮಿ ಹಾಗೂ ತಹಸೀಲ್ದಾರ್ ನಾಗರಾಜ್ ಸಮ್ಮುಖದಲ್ಲಿ ತಾಲೂಕಿನ ವಿವಿಧ  264 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 485 ಲೀ ಮದ್ಯ,77.3 ಲೀ ಬೀರ್, 2 ಲೀ ಕಳ್ಳಭಟ್ಟಿ ಹಾಗೂ 51 ಕೆ.ಜಿ. ಚೆಕ್ಕೆಯನ್ನು ಬೆಂಕಿ ಹಾಕಿ ನಾಶ ಪಡಿಸಲಾಯಿತು. ಅಬಕಾರಿ ಡಿವೈಎಸ್ಪಿ ಮಹೇಂದ್ರ, ಇನ್ಸೆಪೆಕ್ಟರ್ ರಂಗಪ್ಪ, ಕೆ.ಎಸ್.ಬಿ.ಸಿ.ಎಲ್.ನ ವ್ಯವಸ್ಥಾಪಕ ಶ್ರೀನಿವಾಸ್ ಶೆಟ್ಟಿ, ಎಸ್ಐ ಮಂಜುನಾಥ್, ಚೆನ್ನಬಸಪ್ಪ ಭಾಗವಹಿಸಿದ್ದರು.
ಅಪಘಾತ: ಬೈಕ್ ಸವಾರನಿಗೆ ಗಾಯ
ಗುಡಿಬಂಡೆ: ಆಟೋ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ವಾಹನ ಸವಾರನೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಲಕ್ಕೇನಹಳ್ಳಿ ಕ್ರಾಸ್ ಬಳಿ ಗುರುವಾರ ನಡೆದಿದೆ. ಮೂಲಗಳ ಪ್ರಕಾರ ದ್ವಿಚಕ್ರ ವಾಹನ ಸವಾರ, ಲಕ್ಕೇನಹಳ್ಳಿ ಗ್ರಾಮದ ರಸ್ತೆಯಿಂದ ಮುಖ್ಯರಸ್ತೆಗೆ ತಿರುವು ತೆಗೆದುಕೊಳ್ಳುವ ವೇಳೆ ಹಂಪಸಂದ್ರ ಕಡೆಯಿಂದ ಗುಡಿಬಂಡೆಗೆ ತೆರಳುತ್ತಿದ್ದ ಆಟೋ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಗಾಯಗೊಂಡ ವ್ಯಕ್ತಿಯನ್ನು ಗರುಡಾಚಾರ್ಲಹಳ್ಳಿ ಗ್ರಾಮದ ಕೃಷ್ಣಮೂರ್ತಿ (50) ಎಂದು ಗುರುತಿಸಲಾಗಿದೆ. ಈ ಸಂದರ್ಭದಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.