ಕೋಲಾರ

ಶಾಲಾ ಮಕ್ಕಳಿಗೆ ಸಾಮಗ್ರಿ ವಿತರಣೆ

Published On :

ಚಿಂತಾಮಣಿ: ಬೆಂಗಳೂರಿನಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಚಿಂತಾಮಣಿ ತಾಲೂಕಿನ ಅಂಕಾಲಮಡುಗು ಗ್ರಾಮದ ಡಾ.ಮಂಜುಳ ಕೇಶವರೆಡ್ಡಿ ಅವರು ತಾಲೂಕಿನ ಬಿಲ್ಲಾಂಡಹಳ್ಳಿ,ಪುಟ್ಟಗುಂಡ್ಲಹಳ್ಳಿ, ಅಂಕಾಲಮಡುಗು ಗ್ರಾಮಗಳ ಶಾಲೆಗಳಿಗೆ ಸಮವಸ್ತ್ರ,ನೋಟ್ ಪುಸ್ತಕಗಳು, ಲೇಖನಿ ಸಾಮಗ್ರಿಗಳನ್ನು ಪ್ರತೀ ವರ್ಷವೂ ವಿತರಿಸುವ ಸೇವಾ ಮನೋಭಾವ ಹೊಂದಿರುವ ಮಂಜುಳ ಕೇಶವರೆಡ್ಡಿ ಅವರಿಗೆ ಬಿಲ್ಲಾಂಡ್ಲಹಳ್ಳಿ ಶಾಲೆಯ ಮುಖ್ಯ ಶಿಕ್ಷಕರಾದ ಜಿ.ರಾಮಿರೆಡ್ಡಿ ಮತ್ತು ಸಹ ಶಿಕ್ಷಕರಾದ ಬಿ.ಎಸ್.ಬೈರರೆಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ.
ಪತ್ನಿ ಕೊಲೆ: ಪತಿ ಬಂಧನ
ಗೌರಿಬಿದನೂರು: ಪತ್ನಿ ಕೊಲೆ ಮಾಡಿದ ಆರೋಪದ ಮೇಲೆ ಪುರಠಾಣೆಯ ಪೊಲೀಸರು ಕಲ್ಲೂಡಿ ಗ್ರಾಮದ ಗಜೇಂದ್ರ(25)ಅಲಿಯಾಸ್ ಗಜನನ್ನು ಬಂಧಿಸಿದ್ದಾರೆ. ಜುಲೈ 27ರಂದು ಕಲ್ಲಂತರಾಯನಗುಟ್ಟೆ ಸಮೀಪ ಅಪರಿಚಿತ ಮಹಿಳೆ ಶವ ಕಾಣಿಸಿಕೊಂಡಿದ್ದು ಪುರಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದರು. ಆಗಸ್ಟ್ 8ರಂದು ಮಧುಗಿರಿ ತಾಲೂಕು ರೆಂಟವಾಳ ಗ್ರಾಮದ ತುಕಾರಾಂ ಎಂಬುವರು ನನ್ನ ಮಗಳು ವನಜಾಕ್ಷಿ(22) ಕಲ್ಲೂಡಿಯಿಂದ ಕಾಣೆಯಾಗಿದ್ದಾಳೆ ಎಂದು ಪುರಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರಿಂದ  ಅಪರಿಚಿತ ಮಹಿಳೆ ಶವದ ಭಾವಚಿತ್ರಗಳನ್ನು ಕಂಡ ತುಕಾರಾಂ ಗುರುತು ಹಿಡಿದಿದ್ದನು. ತುಕಾರಾಂ ದೂರಿನನ್ವಯ ಪೊಲೀಸರು ತನಿಖೆ ಪ್ರಾರಂಭಿಸಿದಾಗ ಗಂಡನಾದ ಗಜೇಂದ್ರ ಪತ್ನಿ ಕಾಣೆ ದೂರು ನೀಡದೇ ಇದ್ದು, ಗಜೇಂದ್ರನನ್ನು ಠಾಣೆಗೆ ಕರದೊಯ್ದು ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯ ಬಯಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.