ನಾಡಿನ ಜಾನಪದ ಕಲೆ, ಸಂಸ್ಕೃತಿ ಉಳಿಸಿ ಬೆಳೆಸಿರಿ: ಮುನಿಯಪ್ಪ
ಕ.ಪ್ರ.ವಾರ್ತೆ ಟಿ ಕೋಲಾರ ಟಿ ಆ.12
ಸಾವಿರಾರು ವರ್ಷಗಳ ಇತಿಹಾಸ ಇರುವ ಜಾನಪದ ಕಲೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.
ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಶನಿವಾರ ತಾಲೂಕಿನ ಜನ್ನಘಟ್ಟ ಕನ್ನಡ ಜಾನಪದ ಕಲಾ ಸಂಘ ಹಾಗೂ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಉತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಜಾನಪದ ಕಲೆ ಭಾವೈಕ್ಯತೆ, ಸಾಮರಸ್ಯತೆ ಪ್ರತಿಕಾವಾಗಿದೆ. ಇದನ್ನು ಪ್ರೋತ್ಸಾಹಿಸಬೇಕಾಗಿದೆ. ಜಾನಪದ ಕಲೆ ದೇಶದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದೆ, ಜಾನಪದ ಕಲಾವಿದರು ಈ ಸಂಸ್ಕೃಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಇವರ ಬದುಕು ಹಸನಾಗಲು ಸಾರ್ವಜನಿಕರು ಮತ್ತು ಸರ್ಕಾರಗಳು ಗಮನ ನೀಡಬೇಕೆಂದರು. ಜಾನಪದ ಕಲಾವಿದರಿಗೆ ಮಾಸಾಶನ ಏರಿಕೆ ಮಾಡುವುದರ ಜೊತೆಗೆ ಬದುಕಿಗೆ ದಾರಿ ತೋರುವ ಕುರಿತು ಸರ್ಕಾರದೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಆರ್.ವರ್ತೂರ್ ಪ್ರಕಾಶ್, ನಾಡಿನ ಜಾನಪದ ಸಂಸ್ಕೃತಿಯನ್ನು ಉಳಿಸಲು ಕಲಾವಿದರು ಹೆಚ್ಚು ಶ್ರಮಿಸುತ್ತಿದ್ದಾರೆ. ಇದನ್ನೇ ನಂಬಿ ಜೀವಿಸುತ್ತಿರುವ ಹಲವಾರು ಕುಟುಂಬಗಳಿದ್ದು, ಅವರಿಗೆ ಸಹಕಾರ ನೀಡಬೇಕಾಗಿರುವುದು ನಮ್ಮಗಳ ಕರ್ತವ್ಯವಾಗಿದೆ ಎಂದರು.
ಹಲವು ಮಂದಿ ಕಲಾವಿದರಿಗೆ ಮಾಸಾಶನವೇ ಸಿಗುತ್ತಿಲ್ಲ. ಅಂಥವರನ್ನು ಗುರುತಿಸಿ ಸರ್ಕಾರಕ್ಕೆ ಶಿಫಾರ್ಸು ಮಾಡುತ್ತಿರುವುದಾಗಿ ತಿಳಿಸಿದ ಅವರು ಕಲಾವಿದರಿಗೆ ಮಾಸಾಶನ ಜೊತೆಗೆ ಕನಿಷ್ಠ ಸೌಲಭ್ಯಗಳನ್ನು ನೀಡಲು ಸರ್ಕಾರ ಗಮನ ಹರಿಸಬೇಕಾಗಿದೆ ಎಂದರು.
ಇದೇ ಸಂದರ್ಭ ಕಲಾವಿದರಾದ ಎನ್.ಆರ್. ಜ್ಞಾನಮೂರ್ತಿ, ಜಾನಪದ ಗಾಯಕ ಡಿ.ಆರ್. ರಾಜಪ್ಪ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮದ್ದೇರಿ ಮುನಿರೆಡ್ಡಿ, ವಿದ್ವಾನ್ ರಮಣ, ವಿದ್ವಾನ್ ರವಿಕುಮಾರ್, ವಿದ್ವಾನ್ ವೆಂಕಟಪ್ಪ, ಮಾರ್ಜೇನಹಳ್ಳಿ ವಿಜಿಕುಮಾರ್, ಸಂಚಾರಿ ಪೊಲೀಸ್ ಠಾಣೆ ಮೆಹಬೂಬ್ ಪಾಷ, ಅರಾಭಿಕೊತ್ತನೂರು ನಂಜುಂಡಪ್ಪ, ಮಂಚಂಡಹಳ್ಳಿ ಆನಂದ್, ಅವಗಾನಹಳ್ಳಿ ವೆಂಕಟೇಶ್, ಹುತ್ತೂರು ಆರ್.ಶ್ರೀನಿವಾಸ್, ವೇಮಗಲ್ ಡಿ.ನಾರಾಯಣಸ್ವಾಮಿ, ಡಾ.ಚನ್ನಪ್ಪ, ಎ.ಎನ್. ರುದ್ರೇಶ್, ಮೂರಂಡಹಳ್ಳಿ ಮಾರಪ್ಪ ಮತ್ತಿತರರನ್ನು ಸನ್ಮಾನಿಸಲಾಯಿತು.
ಇದಕ್ಕೂ ಮುನ್ನ ವೇದಿಕೆಯಲ್ಲಿ ವಿವಿಧ ಕಲಾ ತಂಡಗಳಿಂದ ಭರತನಾಟ್ಯ, ಭಜನೆ, ಜಾನಪದ ಗೀತಗಾಯನ, ಕೋಲಾಟ, ತತ್ವಪದ, ತಮಟೆವಾದನ, ಗಾರುಡಿಗೊಂಬೆ, ಕೀಲುಕುದುರೆ, ಬಸವ ಕುಣಿತ, ಕಾವಡಿ, ಕಂಸಾಳೇ, ಸೋಬಾನ ಪದಗಳ ಪ್ರದರ್ಶನವನ್ನು ಕಲಾವಿದರು ನೀಡಿ ರಂಜಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್.ಅನಿಲಕುಮಾರ್, ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟಮುನಿಯಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಸಾದಬಾಬು, ವಕ್ಕಲೇರಿ ಗ್ರಾ.ಪಂ. ಅಧ್ಯಕ್ಷ ರಾಜಪ್ಪ, ಕಾಂಗ್ರೆಸ್ ಮುಖಂಡರಾದ ಎಚ್.ವಿ. ಕುಮಾರ್, ಜಯದೇವ, ಅಶ್ವತ್ಥ್ನಾರಾಯಣ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಎಪಿಎಂಸಿ ಸದಸ್ಯ ಟಿ.ವಿ. ಕೃಷ್ಣಪ್ಪ, ಜನ್ನಗಟ್ಟ ಗ್ರಾ.ಪಂ. ಅಧ್ಯಕ್ಷ ಟಿ.ವಿ. ತಿಮ್ಮರಾಯಪ್ಪ, ಜಯಕರ್ನಾಟಕ ಜಿಲ್ಲಾಧ್ಯಕ್ಷ ತ್ಯಾಗರಾಜು ಮತ್ತಿತರರಿದ್ದರು.
ಎನ್.ಆರ್. ಜ್ಞಾನಮೂರ್ತಿ ನಿರೂಪಿಸಿ, ಜನ್ನಘಟ್ಟ ಕೃಷ್ಣಮೂರ್ತಿ ಸ್ವಾಗತಿಸಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

