ಕೋಲಾರ

ಬೆಂವಿವಿ ಪಿಜಿ ಪ್ರವೇಶ ಅರ್ಜಿ ಸ್ವೀಕಾರ ಅವಧಿ ವಿಸ್ತರಣೆ

Published On :

ಬೆಂಗಳೂರು:  ಬೆಂಗಳೂರು ವಿಶ್ವವಿದ್ಯಾಲಯ ಮತ್ತೊಮ್ಮೆ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶ ಅರ್ಜಿ ಸ್ವೀಕಾರ ದಿನಾಂಕವನ್ನು ಮುಂದೂಡಿದೆ. ಪರಿಷ್ಕೃತ ವೇಳಾಪಟ್ಟಿ, ದಂಡ ರಹಿತ ಅರ್ಜಿ ಸಲ್ಲಿಸಲು ಕೊನೆಯ ದಿನ ಆ. 16, ಜ್ಯೇಷ್ಠತಾ ಪಟ್ಟಿ ಪ್ರಕಟಿಸುವ ದಿನಾಂಕ ಆ. 19, ಜ್ಯೇಷ್ಠತಾ ಪಟ್ಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನ ಆ. 20, ಅಂತಿಮ ಜ್ಯೇಷ್ಠತಾ ಪಟ್ಟಿ ಪ್ರಕಟಿಸುವ ದಿನ ಆ. 22, ವಿಜ್ಞಾನ ವಿಭಾಗಗಳ ಸಂದರ್ಶನ ಮತ್ತು ಪ್ರವೇಶ ದಿನಾಂಕ ಆ. 23 ಮತ್ತು 24, ಕಲೆ ವಾಣಿಜ್ಯ ಶಿಕ್ಷಣ ಮತ್ತು ಕಾನೂನು ಸ್ನಾತಕೋತ್ತರ ಪದವಿಗಳ ಸಂದರ್ಶನ ಮತ್ತು ಪ್ರವೇಶ ದಿನಾಂಕ ಆ. 26 ಮತ್ತು 27 ಎಂದು ಬೆಂಗಳೂರು ವಿವಿ ಪ್ರಕಟಣೆ ತಿಳಿಸಿದೆ. 2013-14ನೇ ಸಾಲಿನ ಪದವಿ ಕೋರ್ಸ್‌ಗಳ ಪ್ರವೇಶ ಮತ್ತು ಕಾಲೇಜುಗಳ ವರ್ಗಾವಣೆಗೆ ನಿಗಧಿ ಪಡಿಸಿದ್ದ ದಂಡ ಶುಲ್ಕ ದಿನಾಂಕವನ್ನು ಆ. 19ಕ್ಕೆ ಮುಂದೂಡಿದೆ.
ಸಂಸ್ಕೃತ ಅತಿಥಿ ಉಪನ್ಯಾಸಕರ
ಹುದ್ದೆಗೆ ಅರ್ಜಿ
ಬೆಂಗಳೂರು ವಿಶ್ವವಿದ್ಯಾಲಯ ಸಂಸ್ಕೃತ ವಿಭಾಗ ಪಿ.ಜಿ. ಕೋರ್ಸ್‌ಗಳಿಗೆ ಸಂಸ್ಕೃತ ಭಾಷೆ ಬೋಧನೆ ಮಾಡುವ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಪಿಎಚ್‌ಡಿ, ನೆಟ್ ಪರೀಕ್ಷೆಗಳು ಪಾಸಾದವರಿಗೆ ಹೆಚ್ಚಿನ ಆದ್ಯತೆ ನೀಡಲಿದೆ. ಮುಖ್ಯಸ್ಥರು, ಪಿ.ಜಿ.ಕೇಂದ್ರ, ಸಂಸ್ಕೃತ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು 560056. ಅರ್ಜಿ ಸಲ್ಲಿಸಲು ಕೊನೆಯ ದಿನ ಆ.17. ಹೆಚ್ಚಿನ ಮಾಹಿತಿಗೆ 22961751.
ಫ್ರೆಂಚ್ ಸ್ನಾತಕೋತ್ತರ ಪದವಿಗೆ ಅರ್ಜಿ
ಬೆಂಗಳೂರು ವಿಶ್ವವಿದ್ಯಾಲಯ ವಿದೇಶಿ ಭಾಷಾ ವಿಭಾಗ ಫ್ರೆಂಚ್‌ನಲ್ಲಿ ಸ್ನಾತಕೋತ್ತರ ಪದವಿಗೆ ಅರ್ಜಿ ಆಹ್ವಾನಿಸಿದೆ. ಬಿಎ, ಬಿಎಸ್ಸಿ, ಬಿಕಾಂ, ಬಿಎಚ್‌ಎಂ, ಬಿಸಿಎ ಪದವಿಯಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಕೋರ್ಸ್ 4 ಸೆಮಿಸ್ಟರ್ ಮತ್ತು ಎರಡು ವರ್ಷಗಳ ಅವಧಿ ಹೊಂದಿದೆ. ಮಾಹಿತಿಗೆ (98454 89267) ಸಂಪರ್ಕಿಸಿ.
ವರದಕ್ಷಿಣೆ: ಸೀಮೆಎಣ್ಣೆ ಸುರಿದು ಕೊಲೆ ಯತ್ನ
ಕೋಲಾರ: ಹೆಚ್ಚಿನ ವರದಕ್ಷಿಣೆಗಾಗಿ ತಮ್ಮ ಪತಿ ಹಾಗೂ ಗಂಡನ ಮನೆಯ ಕಡೆಯವರು ಮಾನಸಿಕ ಕಿರುಕುಳ ನೀಡುತ್ತಿರುವುದಲ್ಲದೆ, ಸೀಮೆ ಎಣ್ಣೆಯನ್ನು ತಮ್ಮ ಮೈ ಮೇಲೆ ಸುರಿದು ಕೊಲೆಗೆ ಯತ್ನಿಸಿದ್ದಾರೆಂದು ನಗರದ ಶಾಂತಿನಗರದ ನಿವಾಸಿ ಅಮರಾವತಿ ಎಂಬುವರು ಗಲಲ್‌ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ 6 ವರ್ಷಗಳ ಹಿಂದೆ ತಾವು ಪ್ರಸನ್ನ ಎಂಬುವರೊಂದಿಗೆ ಮದುವೆಯಾಗಿದ್ದು ಒಂದು ಮಗುವಿನ ತಾಯಿ ಆಗಿರುವ ತಮಗೆ ಪತಿ ಹಾಗೂ ಅವರ ಮನೆಯವರು ಮದುವೆ ಸಮಯದಲ್ಲಿ ನೀಡಿರುವ ಹಣ,ಒಡವೆ ಸಾಲದು, ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ತರಬೇಕೆಂದು ಪೀಡಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಮನೆಯಲ್ಲಿ ಕಳ್ಳತನ
ಕೋಲಾರ: ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜಯನಗರದ 8ನೇ ಕ್ರಾಸ್‌ನಲ್ಲಿ ಕಳ್ಳರು ಬಿ. ಆಂಜನೇಯ ಎಂಬುವರ ಮನೆಯ ಬೀಗ ಮುರಿದು ಲಾರ ನಗರ ಠಾಣೆಯಲ್ಲಿ ಮನೆಕಳ್ಳತನ ಪ್ರಕರಣಕ್ಕೆ ಸಂಭಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಆ.10 ರಂದು ಆಂಜನೇಯ ಅವರು ಆಂಧ್ರ ಪ್ರದೇಶದ ವಿಜಯವಾಡಕ್ಕೆ ಹೋಗಿದ್ದರು. ಕಳ್ಳರು ಈ ಸಂದರ್ಭವನ್ನು ಬಳಸಿಕೊಂಡು 71 ಸಾವಿರ ನಗದು ಹಾಗೂ 7 ಗ್ರಾಂ ತೂಕದ ಚಿನ್ನಾಭರಣವನ್ನು ದೋಚಿದ್ದಾರೆಂದು ದೂರವಾಗಿದೆ.
ಜೋಗ್ ಪ್ರವಾಸ
ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ತುಮಕೂರು ವಿಭಾಗದ ವತಿಯಿಂದ ಆ.17 ರ ಶನಿವಾರ ತುಮಕೂರಿನಿಂದ ಭೋರ್ಗರೆಯುವ ಜೋಗ್ ಜಲಪಾತದ ವೀಕ್ಷಣೆಗಾಗಿ ಪ್ರತ್ಯೇಕವಾಗಿ ಒಂದು ದಿನದ ಪ್ರವಾಸವನ್ನು ಕಲ್ಪಿಸಲಾಗಿದೆ. ಅಂದು ಬೆಳಿಗ್ಗೆ 5 ಗಂಟೆಗೆ ಪ್ರವಾಸ ಹೊರಡಲಿದ್ದು, ಅವತಾರ್‌ನಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು  ಸಹ ಕಲ್ಪಿಸಲಾಗಿದ್ದು, ಪ್ರವಾಸ ದರ  ವಯಸ್ಕರಿಗೆ 600 ರು. ಮಕ್ಕಳಿಗೆ 400 ರು. ನಿಗದಿಪಡಿಸಲಾಗಿದೆ. ಮಾಹಿತಿಗೆ 77609 90913, 7760990935 ಸಂಪರ್ಕಿಸುವಂತೆ ವಿಭಾಗೀಯ  ನಿಯಂತ್ರಣಾಧಿಕಾರಿಗಳು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.