ಕೋಲಾರ

ಚಿನ್ನದ ಮಣ್ಣು ಕಳವು ಯತ್ನ: ಭದ್ರತಾ ಸಿಬ್ಬಂದಿ ಸೇರಿ 17 ಮಂದಿ ಬಂಧನ

Published On :

ಕೆಜಿಎಫ್: ಕೆಜಿಎಫ್‌ನ ಬಿಜಿಎಂಎಲ್ ಚಿನ್ನದ ಗಣಿ ಮೈಸೂರು ಮಿಲ್‌ನೊಳಗೆ ಕಳವು ಮಾಡಲು ಪ್ರಯತ್ನಿಸಿದ ಮೂವರು ಬಿಜಿಎಂಎಲ್ ಭದ್ರತಾ ಸಿಬ್ಬಂದಿ ಸೇರಿ ಒಟ್ಟು 17 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಮಾರಿಕುಪ್ಪಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪೊಲೀಸರನ್ನು ಕಂಡ ಪ್ರಮುಖ ಆರೋಪಿ ಆರ್.ಮುತ್ತುಕುಮಾರ್ ಪರಾರಿಯಾಗಿದ್ದಾನೆ. ನರೇಂದ್ರಕುಮಾರ್ ಅಲಿಯಾಸ್ ಬಬ್ಲು (29), ಎಂ.ಪ್ರದೀಪ್ (26), ಪಿ.ಮುನಿಸ್ವಾಮಿ (60), ವಿ.ಸೆಲ್ವಂ (58), ಎ.ಸುಂದರಮೂರ್ತಿ (32), ಆರ್.ಕುಮಾರ್ (30), ಲಕ್ಷ್ಮೀಸಾಗರ ಗ್ರಾಮದ ನಿವಾಸಿಗಳಾದ ಆರ್.ರಾಜನ್ (30), ಪಿ.ಎಂ.ಕುಟ್ಟಿ (35), ಆರ್.ಸಂಪಂತ್ (40), ವಿ.ಶಿವಕುಮಾರ್ (32), ಪಳ್ಳಿ ವೆಂಕಟೇಶ್ (40), ವಿರುಪಾಕ್ಷಿಪುರ ನಿವಾಸಿಗಳಾದ ವಿ.ಬ್ಯಾಟಪ್ಪ (36). ಎಂ.ಬ್ಯಾಟರಾಯ (45), ಲಕ್ಕನಾಯಕನಹಳ್ಳಿ ಗ್ರಾಮದ  ಎನ್.ಸತೀಶ್, ಬಿಜಿಎಂಎಲ್ ಭದ್ರತಾ ಸಿಬ್ಬಂದಿಗಳಾದ ಆರ್.ರಮೇಶ್‌ಕುಮಾರ್, ಸಂಪತ್, ಕೆ.ರಮೇಶ್‌ಕುಮಾರ್‌ರನ್ನು 2 ಚೀಲ ಚಿನ್ನ ಮಿಶ್ರಿತ ಮಣ್ಣು, ನಗದು ಸೇರಿದಂತೆ ಕಳ್ಳತನಕ್ಕೆ ಬಳಸಲಾದ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಭಾರತ ಚಿನ್ನದ ಗಣಿ ಸಂಸ್ಥೆಯ ಮಾರಿಕುಪ್ಪಂನಲ್ಲಿರುವ ಮೈಸೂರು ಮಿಲ್ಲಿನಲ್ಲಿ ಚಿನ್ನ ಮಿಶ್ರಿತ ಮಣ್ಣನ್ನು ಕಳವು ಮಾಡುವ ಉದ್ದೇಶದಿಂದ ಬಿಜಿಎಂಎಲ್ ಭದ್ರತಾ ಸಿಬ್ಬಂದಿಗಳೊಂದಿಗೆ ಶಾಮೀಲಾಗಿ ಶುಕ್ರವಾರ ಮಧ್ಯ ರಾತ್ರಿ 15 ಮಂದಿ ಆರೋಪಿಗಳು ಅಕ್ರಮವಾಗಿ ಪ್ರವೇಶಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.