ಕೋಲಾರ

ಕಮೀಷನ್ ಹೆಚ್ಚಿಸಲು ನ್ಯಾಯಬೆಲೆ ಅಂಗಡಿ ಮಾಲೀಕರ ಒತ್ತಾಯ

Published On :

ಕ.ಪ್ರ.ವಾರ್ತೆ ,  ಕೋಲಾರ ,  ಆ.18
ನ್ಯಾಯಬೆಲೆ ಅಂಗಡಿಗಳಿಗೆ ಕಮೀಷನ್ ಮತ್ತು ನಗರ ಪ್ರದೇಶದಲ್ಲಿ ಆಹಾರ ಪದಾರ್ಥಗಳಿಗೆ ಸಾಗಾಣಿಕೆ ವೆಚ್ಚ ನೀಡಬೇಕೆಂದು ಕೋಲಾರ ಜಿಲ್ಲಾ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಎನ್. ಶ್ರೀನಿವಾಸ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯ ವಿವಿಧ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಸಭೆ ಸೇರಿ ಸರ್ಕಾರವು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸುವ ಅಕ್ಕಿಗೆ ಪ್ರತಿ ಕ್ವಿಂಟಲ್‌ಗೆ 31 ಗೋದಿಗೆ  25, ಸಕ್ಕರೆಗೆ 13.50, ಸೀಮೆಎಣ್ಣೆ ಪ್ರತಿ ಲೀಟರ್‌ಗೆ 50 ಪೈಸೆಯಂತೆ ಕಮೀಷನ್ ನೀಡುತ್ತಿದ್ದು, ಈ ಕಮೀಷನ್‌ನಲ್ಲಿ ನ್ಯಾಯ ಬೆಲೆ ಅಂಗಡಿ ಮಾಲೀಕರು ಜೀವನ ನಡೆಸುವುದು ದುಸ್ತರವಾಗಿದೆ ಎಂದು ಸರ್ಕಾರಕ್ಕೆ ಮನವರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಮೀಷನ್ ಮತ್ತು ನಗರ ಪ್ರದೇಶದಲ್ಲಿ ಸಾಗಾಣಿಕೆ ವೆಚ್ಚ ನೀಡುವಂತೆ ಹಾಗೂ ಬಯೋವುಟ್ರಿಕ್ ನೀಡುವ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು, ಉಚ್ಚ ನ್ಯಾಯಾಲಯದ ರಿಟ್ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿದ್ದು, ಮನವಿಯ ಬಗ್ಗೆ ಚರ್ಚಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿರುತ್ತದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಸರ್ಕಾರವು ಈ ಕೂಡಲೇ ಅಕ್ಕಿ, ಗೋದಿಗೆ ಕ್ವಿಂಟಲ್‌ಗೆ 50 ಸೀಮೆಎಣ್ಣೆ ಪ್ರತಿ ಲೀಟರ್‌ಗೆ 1 ಹಾಗೂ ಸಕ್ಕರೆ ಕ್ವಿಂಟಲ್‌ಗೆ 100 ಕಮೀಷನ್ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಕಮೀಷನ್ ಮತ್ತು ಸಾಗಾಣಿಕೆ ವೆಚ್ಚ ಹೆಚ್ಚು ಮಾಡಬೇಕು ಮತ್ತು ಸಗಟು ಮಳಿಗೆಗಳಿಗೆ ಬಯೋವುಟ್ರಿಕ್ ಅಳವಡಿಸದಿದ್ದಲ್ಲಿ ರಾಜ್ಯ ಸರ್ಕಾರಿ ವಿತರಕರ ಸಂಘದಿಂದ ಸೆಪ್ಟೆಂಬರ್ ಮಾಹೆಯಲ್ಲಿ ಪ್ರತಿಭಟನೆ ಮಾಡುವುದಾಗಿ ಶ್ರೀನಿವಾಸ್ ಎಚ್ಚರಿಸಿದ್ದಾರೆ.
ಈ ಕೂಡಲೇ ಆಹಾರ ಸಚಿವರು ಹಾಗೂ ಅಧಿಕಾರಿಗಳು ವಿತರಕರ ಸಂಘದ ಪದಾಧಿಕಾರಿಗಳನ್ನು ಸಭೆ ಕರೆದು ಚರ್ಚಿಸದೇ ಹೋದರೆ ಮುಂದಿನ ತಿಂಗಳು ಆಹಾರ ಪದಾರ್ಥ ವಿತರಿಸುವುದಿಲ್ಲ ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ಕೋಲಾರ ತಾಲೂಕಿನ ಅಧ್ಯಕ್ಷ ನಾಗನಾಳ ಎಂ.ರಮೇಶ್ ಬಾಬು, ಬಂಗಾರಪೇಟೆಯ ವಿ.ದೇವರಾಜ್, ಮಾಲೂರಿನ ಎನ್.ಲಕ್ಷ್ಮಯ್ಯ, ಶ್ರೀನಿವಾಸಪುರದ ರಾಮಮೋಹನ ಹಾಗೂ ಮುಳಬಾಗಿಲು ತಾಲೂಕಿನ ರಾಮರೆಡ್ಡಿ, ಕೆಜಿಎಫ್ ಅಧ್ಯಕ್ಷ ಕೆ.ವಿ. ರಾಜಣ್ಣ ಇದ್ದರೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.