ದೇಹದ ಅಂಗಾಂಗಗಳ ದಾನ ಮಾಡಿ: ಸಲಹೆ
ಮಾಲೂರು: ದೇಹದ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮನುಷ್ಯ ಸತ್ತ ಮೇಲೂ ಸಮಾಜಕ್ಕೆ ಸಹಕಾರನೀಡಿ ಸಾರ್ಥಕತೆ ಪಡೆದುಕೊಳ್ಳಬೇಕು ಎಂದು ಪುರಸಭೆ ಮಾಜಿ ಸದಸ್ಯ ಟಿ. ರಾಮಚಂದ್ರ ಹೇಳಿದರು.
ಪಟ್ಟಣದ ಮಾರುತಿ ಬಡಾವಣೆಯಲ್ಲಿ ಸಂಗೊಳ್ಳಿ ರಾಯಣ್ಣ ಕನ್ನಡ ಗೆಳೆಯರ ಬಳಗ 58 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಮನುಷ್ಯ ಸತ್ತ ಮೇಲೆ ಇನ್ನೂಬ್ಬರಿಗೆ ಪ್ರಾಣ ಉಳಿಸಬಹುದಾದ ಅಗಾಂಗಳು ಮಣ್ಣನ್ನು ಸೇರಿ ವ್ಯರ್ಥವಾಗುವ ಬದಲು ಬದುಕಿರುವವರನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದರು.
ವಾರ್ಡ್ ಸದಸ್ಯೆ ವಿಜಯಲಕ್ಷ್ಮಿ ಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು. ಮಾರುತಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘಧ ಅಧ್ಯಕ್ಷ ಎಂ.ಪಿ. ಶ್ರೀನಿವಾಸ್, ಸಹಕಾರಿ ಎಸ್.ಎ. ಶ್ರೀನಿವಾಸ್, ನಂಜುಂಡಪ್ಪ ಮಾತನಾಡಿದರು. ಸಾಹಿತಿ ವೇಣಗೋಪಾಲ್ ವಹ್ನಿ, ವಿಮರ್ಶಕ ಮಾ.ವೆಂ. ತಮ್ಮಯ್ಯ, ಮಾ.ಚೆ. ರವಿ, ಸುರೇಶ್ಕುಮಾರ್, ಅನಿಲ್ಕುಮಾರ್,ಪ್ರಶಾಂತ್ಕುಮಾರ್, ಮಂಜುನಾಥ್, ಕೃಷ್ಣಸಿಂಗ್, ಮೋಹನ್, ವೆಂಕಟೇಶ್, ಸುನೀಲ್, ಅರುಣ್, ಅಮರ್ನಾರಾಯಣ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

