ಇಂದು ಪ್ರಸಿದ್ಧ ಅಂತರಗಂಗೆ ಜಾತ್ರೆ
ಕ.ಪ್ರ.ವಾರ್ತ್ಣೆ ಕೋಲಾರ್ಣ ಡಿ.1
ನಗರಕ್ಕೆ ಕೇವಲ 3 ಕಿಮೀ ದೂರದ ಪುರಾಣ ಪ್ರಸಿದ್ಧ ಶತಶೃಂಗ ಪರ್ವತಗಳ ಸಾಲಿನ ಅಂತರಗಂಗೆ ಬೆಟ್ಟದಲ್ಲಿ ಕಡೆ ಕಾರ್ತಿಕ ಸೋಮವಾರ ಪ್ರಯುಕ್ತ ವಿಶೇಷ ಪೂಜೆ ಮತ್ತು ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ದಕ್ಷಿಣ ಕಾಶೀ ಎಂದೇ ಪ್ರಸಿದ್ಧಿ ಪಡೆದಿರುವ ಅಂತರಗಂಗೆ ಬೆಟ್ಟದಲ್ಲಿರುವ ಎಂದಿಗೂ ಬತ್ತದ ಗಂಗೆಯಲ್ಲಿ ಸಾವಿರಾರು ಜನರು ಪುಣ್ಯ ಸ್ನಾನ ಮಾಡುವುದರಿಂದ ತಾಲೂಕು ಆಡಳಿತ ಮತ್ತು ಜಾತ್ರೆ ಮಹೋತ್ಸವ ಸಮಿತಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಜಾತ್ರೆಗೆ ವಿವಿಧ ಕಡೆಗಳಿಂದ ಸುಮಾರು 20 ಸಾವಿರಕ್ಕೂ ಹೆಚ್ಚು ಭಕ್ತರು ಬರುವ ನಿರೀಕ್ಷೆಯಿದ್ದು ಕೋಲಾರದ ಪಲ್ಲವಿ ಟಾಕೀಸ್ ಬಳಿಯಿಂದ ಅಂತರಗಂಗೆ ಬೆಟ್ಟದ ತಪ್ಪಲಿಗೆ ತೆರಳಲು 20ಕ್ಕೂ ಹೆಚ್ಚು ಟೆಂಪೋ, 6 ಖಾಸಗಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
ಸೋಮವಾರ ಬೆಳಿಗ್ಗೆ 6 ಗಂಟೆಯಿಂದಲೇ ಅಂತರಗಂಗೆ ಬೆಟ್ಟದಲ್ಲಿನ ಶ್ರೀ ಕಾಶೀ ವಿಶ್ವನಾಥನಿಗೆ ವಿಶೇಷ ಪೂಜೆಗಳು ನಡೆಯಲಿದೆ. ದಾನಿಗಳಾದ ವೆಂಕಟೇಶ್ ಅವರು ಜಲ ಕಂಠೇಶ್ವರ ಸನ್ನಿದಿಯ ಬಳಿ ಜಾತ್ರೆಗೆ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಿದ್ದಾರೆ.
ಜಾತ್ರೆಯ ಪ್ರಯುಕ್ತ ಜನತೆಯನ್ನು ಆಕರ್ಷಿಸಲು ಬಜರಂಗ ದಳದ ಜಿಲ್ಲಾ ಸಂಚಾಲಕ ಬಾಬು ನೇತೃತ್ವದಲ್ಲಿ ಸರ್ಕಾರಿ ಬಸ್ ನಿಲ್ದಾಣ ವೃತ್ತದಿಂದ ಅಂತರಗಂಗೆ ರಸ್ತೆಯವರೆಗೂ ಕೇಸರಿ ಬಣ್ಣದ ಬಂಟಿಂಗ್ಗ್ಳನ್ನು, ಕೇಸರಿ ಧ್ವಜ, ವಿವಿಧ ದೇವರುಗಳು ಭಾವಚಿತ್ರಗಳನ್ನು ಅಳವಡಿಸಲಾಗುತ್ತಿದೆ.
ಜಾತ್ರೆಗೆ ಬರುವ ಭಕ್ತರಿಗೆ ಸಹಾಯ ಮಾಡಲು ಮತ್ತು ಭದ್ರತಾ ವ್ಯವಸ್ಥೆಗಾಗಿ ಜಿಲ್ಲೆಯ ವಿವಿಧ ಕಡೆಗಳಿಂದ ಸುಮಾರು 500 ಕ್ಕೂ ಹೆಚ್ಚು ಬಜರಂಗ ದಳ, ಶ್ರೀರಾಮ ಸೇನೆ ಕಾರ್ಯಕರ್ತರು ಕೆಲಸ ಮಾಡಲಿದ್ದು ಸುಮಾರು 25ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್ಗಾಗಿ ನಿಯೋಜಿಸಲಾಗಿದೆ.
ನಗರದಲ್ಲಿ ಇತ್ತೀಚೆಗೆ ಸರಗಳ್ಳತನ ಹೆಚ್ಚಾಗಿರುವುದರಿಂದ ಪೊಲೀಸರು ಮಾಪ್ತಿಯಲ್ಲಿ ಗಸ್ತು ತಿರುಗುವ ಮೂಲಕ ಕಳ್ಳರನ್ನು ಮಟ್ಟ ಹಾಕಲು ಕಾರ್ಯತಂತ್ರ ರೂಪಿಸಿದ್ದಾರೆ. ಜಾತ್ರೆಗೆ ಬರುವ ಹೆಣ್ಣು ಮಕ್ಕಳು ಚಿನ್ನಾಭರಣಗಳನ್ನು ಧರಿಸದಂತೆ ಸೂಚಿಸಿದ್ದಾರೆ. ಒಂದು ವೇಳೆ ಜಾತ್ರೆಯಲ್ಲಿ ಯಾರಾದರೂ ಅನುಮಾನಸ್ಪ ವ್ಯಕ್ತಿಗಳು ಕಂಡು ಬಂದಲ್ಲಿ ಇಲ್ಲವೇ ಕಳ್ಳತನ ಮಾಡಲು ಯತ್ನಿಸಿದಲ್ಲಿ ತಕ್ಷಣ ಪೊಲೀಸರಿಗೆ ಇಲ್ಲವೆ ಸ್ವಯಂ ಸೇವಕರಿಗೆ ಮಾಹಿತಿ ನೀಡುವಂತೆ ಕೋರಿದ್ದಾರೆ. ಮುಜರಾಯಿ ಇಲಾಖೆಯಿಂದಲೂ ಅಂತರಗಂಗೆ ಬೆಟ್ಟದಲ್ಲಿ ಸಕಲ ಸಿದ್ಧತೆ ನಡೆಸಲಾಗುತ್ತಿದೆ.
ಚಿಲ್ಲಪನಹಳ್ಳಿಯಲ್ಲಿ ಲಕ್ಷದೀಪೋತ್ಸವ; ಕೋಲಾರ ತಾಲೂಕಿನ ಚಿಲ್ಲಪನಹಳ್ಳಿ ಶ್ರೀ ಶಿರಡಿಸಾಯಿಬಾಬಾ ಸೇವಾಶ್ರಮದಲ್ಲಿ ಕಡೇ ಕಾರ್ತೀಕ ಸೋಮವಾರದ ಪ್ರಯುಕ್ತ ಸಂಜೆ 6 ಗಂಟೆಗೆ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಿಂದ ದಶಾವತಾರ ನೃತ್ಯರೂಪಕ ಹಾಗೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಜಯನಾಟ್ಯ ಕಲಾ ಅಕಾಡೆಮಿಯ ವಿದ್ವಾನ್ ಕೋಲಾರ ರಮೇಶ್ ನಿರ್ದೇಶನದಲ್ಲಿ ನಡೆಯಲಿದೆ. ಶ್ರೀನಿವಾಸಪುರ ಅನ್ನಪೂರ್ಣೇಶ್ವರಿ ಭಜನೆ ಮಂಡಳಿಯಿಂದ ಭಜನೆ ಕಾರ್ಯಕ್ರಮ ಹಾಗೂ ಈ ನೆಲ ಈ ಜಲ ಕಲಾ ತಂಡದಿಂದ ಜಾನಪದ ಗಾಯನ ನಡೆಯಲಿದೆ.
ಬೆಳಿಗ್ಗೆ 5 ಗಂಟೆಗೆ ಗ್ರಾಮದ ಮಾರಿಕಾಂಬ ಗ್ರಾಮದೇವತೆಗಳಿಗೆ ಅಭಿಷೇಕ ಬೆಳಿಗ್ಗೆ 10 ಗಂಟೆಗೆ ಗಣಪತಿ ಪೂಜೆ, ಮಹಾಸಂಕಲ್ಪ, ನವಗ್ರಹಹೋಮ, ಸಾಯಿಬಾಬಾ ವಿಗ್ರಹಗಳಿಗೆ ಅಭಿಷೇಕ, ಗಣಪತಿ ಹೋಮ, ಸಾಯಿಬಾಬಾ ಹೋಮ, ಮಹಾಲಕ್ಷ್ಮಿ ಹೋಮ, ಪೂರ್ಣಾಹುತಿ ಇರಗಂಪಲ್ಲಿ ಆಗಮಿಕ ಅರ್ಚಕರಾದ ಆರ್. ರಾಮಶೇಷಾದ್ರಾಚಾರ್ ಅವರು ನೆರವೇರಿಸಲಿದ್ದಾರೆಂದು ದೇವಾಲಯದ ಟ್ರಸ್ಟಿ ಸಿ.ಎಂ. ರಂಗಾರೆಡ್ಡಿ ತಿಳಿಸಿದ್ದಾರೆ.
ಬಂಗಾರಪೇಟೆ ತಾಲೂಕಿನ ಹಂಚಾಳ ಗೇಟಟ್ಬಳಿಯ ಶ್ರೀ ನಂಜುಂಡೇಶ್ವರ ಸಹಿತ ಓಂಕಾರೇಶ್ವರ ದೇವಾಲಯದಲ್ಲೂ ಕಡೇ ಕಾರ್ತಿಕ ಸೋಮವಾರ ಪ್ರಯುಕ್ತ ದೇವರಿಗೆ ಪೂಜೆ-ಪುನಸ್ಕಾರಗಳನ್ನು ಹಮ್ಮಿಕೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

