ವರದಕ್ಷಿಣೆ ಕಿರುಕುಳ ದೂರು
ಚಿಂತಾಮಣಿ: ವರದಕ್ಷಿಣೆ ತರಲಿಲ್ಲವೆಂದು ಗಂಡ ಹಾಗೂ ಅತ್ತೆ ಮಾವಂದಿರು ದೈಹಿಕ, ಮಾನಸಿಕವಾಗಿ ಹಿಂಸೆ ನೀಡುತ್ತಿರುವುದಾಗಿ ತನ್ನ ಗಂಡನ ಪೋಷಕರ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಘಟನೆ ಕಡದನಮರಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಡದನಮರಿ ಗ್ರಾಮದ ಮಂಜುನಾಥ ಎಂಬಾತನೊಂದಿಗೆ ಶ್ರೀನಿವಾಸಪುರ ಮೂಲತ- ಅಶ್ವಿನಿ ಎಂಬಾಕೆಯನ್ನು ವರೋಪಚಾರಗಳನ್ನು ಮದುವೆ ವೇಳೆ ನೀಡಲಾಗಿತ್ತು. ಕಳೆದ 5 ತಿಂಗಳಿಂದ ಹಣ ಹಾಗೂ ಒಡವೆಗಳನ್ನು ತರುವಂತೆ ಗಂಡ ಮಂಜುನಾಥ,ಮಾವ ಸೀತಬೈರೆಡ್ಡಿ, ಅತ್ತೆ,ನಾದಿನಿ ಸೇರಿ ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿಸಿ ವರದಕ್ಷಿಣೆಯ ಹಣದಾಹದಿಂದ ಕಿರುಕುಳ ನೀಡುತ್ತಿರುವುದಾಗಿ ಬಟ್ಲಹಳ್ಳಿ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಟ್ಲಹಳ್ಳಿ ಠಾಣೆಯ ಪೊಲೀಸರು ಆರೋಪಿಗಳನ್ನು ಠಾಣೆಗೆ ಕರೆತರಲು ಹೋದಾಗ ಗ್ರಾಮದಿಂದ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ವಿಚಾರಣೆ ವೇಳೆಯಲ್ಲಿ ತಿಳಿದು ಬಂದಿದೆ. ಮಂಜುನಾಥ ಕಳೆದ ಹಲವು ದಿನಗಳಿಂದ ಇರಗಂಪಲ್ಲಿ ಗ್ರಾಮದ ಯುವತಿಯೋರ್ವಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡು ಇರುವುದಾಗಿ ಪೊಲೀಸರ ವಿಚಾರಣೆಯಲ್ಲಿ ವಿಷಯ ಹೊರ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಟ್ಲಹಳ್ಳಿ ಠಾಣೆಯ ಸಬ್ಇನ್ಸೆಪೆಕ್ಟರ್ ಪ್ರವಿಣ್ಕುಮಾರ್ ವರದಕ್ಷಿಣೆ ಕಿರುಕುಳ ನೀಡುತ್ತಿರುವ ಪ್ರಕರಣವನ್ನು ದಾಖಲಿಸಿಕೊಂಡು ಪರಾರಿಯಾದ ಆರೋಪಿಗಳಿಗಾಗಿ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.
ಬೈಕ್ ಸವಾರನ ತಡೆದು ಹಣ ಕಸಿತ
ಮುಳಬಾಗಲು: ತಾಲೂಕಿನ ತಟ್ಟನಕುಂಟೆ ಗ್ರಾಮದ ಹೊರವಲಯದ ಬಳಿ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರ ಮೇಲೆ ದಾಳಿ ನಡೆಸಿದ ಮೂರು ಮಂದಿಯ ಗುಂಪು ಹಣ ಮತ್ತು ಎಟಿಎಂ ಕಾರ್ಡ್ ಅಪಹರಿಸಿರುವ ಪ್ರಕರಣ ವರದಿಯಾಗಿದೆ. ತಟ್ಟನ ಕುಂಟೆ ಬಳಿ ಪ್ಯಾಕ್ಟರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್ ಮತ್ತು ಸುರೇಶ್ ಮುಳಬಾಗಲು ಕಡೆ ಪ್ರಯಾಣ ಮಾಡುತ್ತಿದ್ದ ವೇಳೆ ಬೇರೊಂದು ವಾಹನದಲ್ಲಿ ಬಂದ ಮೂವರು ದುರ್ಷಕರ್ಮಿಗಳು ಅವರ ಮೇಲೆ ದಾಳಿ ನಡೆಸಿ ಅವರ ಬಳಿ ಇದ್ದ ನಗದು ಅಪಹರಿಸಿದ್ದಾರೆ ಎಂದು ಸಬ್ ಇನ್ಸ್ಪೆಕ್ಟರ್ ಮೇಲ್ವಿನ್ ಫ್ರಾನ್ಸಿಸ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

