ಅಮಾನತು ವಾಪಸ್ ಪಡೆಯದಿದ್ದರೆ ತಾಪಂಗೆ ಬೀಗ ಜಡಿದು ಪ್ರತಿಭಟನೆ!
ಚಿಂತಾಮಣಿ: ಕೈವಾರ ಗ್ರಾಪಂ ಪಿಡಿಒ ಶಂಕರಪ್ಪನನ್ನು ರಾಜಕೀಯ ಪಿತೂರಿ ನಡೆಸಿ ಅಮಾನತು ಮಾಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ತಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಕೈವಾರ ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರು ಆಗ್ರಹಿಸಿದ್ದಾರೆ.
ತಾಲೂಕಿನ ಕೈವಾರ ಗ್ರಾಪಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಡಿಒ ಶಂಕರಪ್ಪನನ್ನು ರಾಜಕೀಯ ದುರುದ್ದೇಶದಿಂದ ಅಮಾನತುಗೊಳಿಸಲಾಗಿದೆ. ಸ್ಥಳೀಯ ಶಾಸಕರ ಕಡೆಯವರು ಹಲವು ಅಧಿಕಾರಿಗಳನ್ನು ಕೈ ಗೊಂಬೆಗಳಾಗಿ ಮಾಡಿಕೊಂಡು ರಾಜಕೀಯ ಪಿತೂರಿ ನಡೆಸಿ ಈ ಅಮಾನತು ಮಾಡಿಸಿದ್ದಾರೆ. ಇದು ಸರಿಯಲ್ಲ ಎಂದು ತಾಪಂ ಸಿಇಒ ಗೈರು ಹಾಜರಿಯಲ್ಲಿ ವ್ಯವಸ್ಥಾಪಕ ಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಿದರು.
ಸತ್ಯಾಸತ್ಯತೆಯನ್ನು ಅರಿಯದೆ, ಕಡತಗಳನ್ನು ಪರಿಶೀಲಿಸದೆ ಪ್ರತಿಭಟನೆ ನಡೆಸಿರುವುದು ಸ್ವಾರ್ಥಕ್ಕಾಗಿಯೇ ಎಂದು ಕೈವಾರ ಗ್ರಾಮ ಪಂಚಾಯ್ತಿ ಹಾಲಿ ಅಧ್ಯಕ್ಷೆ ಮುಬೀನಾ ತಾಜ್, ಉಪಾಧ್ಯಕ್ಷ ಶ್ರೀನಿವಾಸ್, ಎನ್.ವೆಂಕಟೇಶ್, ರಾಧಮ್ಮ, ಕೆ.ಎನ್.ರವಿ, ಸವಿತಾ,ಅಪ್ಸರ್, ವೆಂಕಟರವಣಪ್ಪ ಇತರರು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

