ಕೋಲಾರ

ಶಾಸಕ ರಮೇಶ್ಕುಮಾರ್ ವಿರುದ್ಧ ಆರೋಪಕ್ಕೆ ಖಂಡನೆ

Published On :

ಕೋಲಾರ: ಜಿಲ್ಲೆಯ ಹಿರಿಯ ರಾಜಕಾರಣಿ ಕೆ.ಆರ್. ರಮೇಶ್ಕುಮಾರ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಎಸ್.ಆರ್. ಹಿರೇಮಠ್ ಮಾಡಿರುವ ಆರೋಪಗಳು ಬಾಲಿಷ ಪ್ರವೃತ್ತಿಯಾಗಿದೆ ಎಂದು ಜಿಲ್ಲಾ ಅಹಿಂದ ಸಂಘಟನೆಯ ಸಂಚಾಲಕ ಅಶ್ವತ್ಥನಾರಾಯಣಗೌಡ ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯ ರಾಜಕೀಯ ವ್ಯವಸ್ಥೆ ಹಾಗೂ ರಾಜಕಾರಣದ ಗಂಧವೇ ಅರಿಯದ ಹಿರೇಮಠ್ ಅವರು ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತಾ ಹಿರಿಯ ರಾಜಕಾರಣಿ  ರಮೇಶ್ ಕುಮಾರ್ ಅವರ ಸಚಿವ ಸ್ಥಾನ ತಪ್ಪಿಸುವ ಹುನ್ನಾರವಾಗಿರುತ್ತದೆ ಎಂದು ತಿಳಿಸಿದ್ದಾರೆ. ರಾಜ್ಯ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು, ಆರ್. ಗುಂಡೂರಾವ್, ರಾಮಕೃಷ್ಣಹೆಗಡೆ, ಎಚ್.ಡಿ.ದೇವೇಗೌಡ, ಜೆ.ಎಚ್. ಪಟೇಲ್ ಅವರ ಅಧಿಕಾರವಧಿಯಲ್ಲಿ ಕೆ.ಆರ್. ರಮೇಶ್ಕುಮಾರ್ ಮನಸ್ಸು ಮಾಡಿದ್ದರೆ ಬೆಂಗಳೂರಿನ ಹೊರವಲಯದಲ್ಲಿ ಕೇವಲ 10 ಎಕರೆ ಜಮೀನು ಮಾಡಿಕೊಂಡು ನೂರಾರು ಕೋಟಿ ಸಂಪಾದಿಸಬಹುದಾಗಿತ್ತು. ಆದರೆ ಇದನ್ನು ಮಾಡದೇ ತಮ್ಮ ಸ್ವಚ್ಚಾರಿತ್ರ್ಯವನ್ನು ಪ್ರದರ್ಶಿಸಿದ್ದು ಹಿರೇಮಠ್ ಅವರಿಗೆ ಸ್ವಾಮಿಯ ವ್ಯಕ್ತಿತ್ವ ತಿಳಿಯದೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆಂದು ಟೀಕಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.