ಕೋಲಾರ

ಅತ್ಯಾಚಾರ ಆರೋಪಿ ವೈದ್ಯನನ್ನು ಬಂಧಿಸಲು ಎಸ್ಎಫ್ಐ ಆಗ್ರಹ

Published On :

ಶಿಡ್ಲಘಟ್ಟ: ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಖಾಸಗಿ ಆಸ್ಪತ್ರೆ ವೈದ್ಯನ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ ವತಿಯಿಂದ ತಾಲೂಕಿನ ಎಲ್ಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ತಾಲೂಕಿನ ದ್ಯಾಮಪ್ಪನ ಗುಡಿಯಲ್ಲಿ ಖಾಸಗಿ ಕ್ಲಿನಿಕ್ನ ಆರ್ಎಂಪಿ ವೈದ್ಯ ವೆಂಕಟೇಶ್ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದು ವಿದ್ಯಾರ್ಥಿನಿಯ ಕಿರುಚಾಟ ಕೇಳಿ ಬಂದ ಜನರು ವೈದ್ಯನನ್ನು ಥಳಿಸಿದ್ದು ವೈದ್ಯ ವೆಂಕಟೇಶ್ ಪರಾರಿಯಾಗಿದ್ದಾನೆ. ಕೂಡಲೇ ಬಂಧಿಸಿ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಸ್ಎಫ್ಐ ಒತ್ತಾಯಿಸಿದೆ. ಪಟ್ಟಣದ ಎಲ್ಲ ಶಾಲಾ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತಾ ಸಾಗಿ ತಾಲೂಕು ಕಚೇರಿ ಮುಂದೆ ಜಮಾಯಿಸಿ ತಾಲೂಕು ಆಡಳಿತ ಹಾಗೂ ರಾಜ್ಯಾಡಳಿತ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಸೆಕೆಂಡ್ ಗ್ರೇಡ್ ತಹಸಿಲ್ದಾರ್ ರಮೇಶ್ಗೆ ಮನವಿ ಪತ್ರ ಸಲ್ಲಿಸಿದರು. ಎಸ್ಎಫ್ಐ ಸಂಚಾಲಕ ಕುಂದಲಗುಕರ್ ಮುನೀಂದ್ರ, ಜಿಲ್ಲಾ ಮುಖಂಡರಾದ ಸುಮತಿ, ಬಾಬುರೆಡ್ಡಿ, ತಾಲೂಕು ಮುಖಂಡರಾದ ಪುಷ್ಪ, ಮಂಜುಳ, ವೀಣಾ, ರಾಗಿಣಿ, ವೆಂಕಟೇಶ್, ನಟರಾಜ್, ಮನೋಹರ್ ಮತ್ತಿತರರು ಇದ್ದರು.
ಮಹಿಳೆ ನೇಣಿಗೆ ಶರಣು
ಶಿಡ್ಲಘಟ್ಟ: ಪ್ರೇಮ ವಿವಾಹವಾಗಿದ್ದ ಮಹಿಳೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೇಲೂರಿನಲ್ಲಿ ನಡೆದಿದೆ. ಪವಿತ್ರ ನೇಣಿಗೆ ಶರಣಾದವಳು. ಈಕೆಯ ಪತಿ ಹರೀಶ್ ಹೊಸದುರ್ಗದ ನಿವಾಸಿಯಾಗಿದ್ದು, ಪವಿತ್ರ ಮಾಲೂರು ತಾಲೂಕಿನ ಆಲಂವಾಡಿ ಗ್ರಾಮಕ್ಕೆ ಸೇರಿದವರಾಗಿದ್ದಾರೆ. ಹರೀಶ್ ಮತ್ತು ಪವಿತ್ರ ಕಾಲೇಜಿನ ದಿನಗಳಿಂದ ಪ್ರೀತಿಸುತ್ತಿದ್ದು ಮನೆಯವರನ್ನು ವಿರೋಧಿಸಿ ಮೇಲೂರಲ್ಲಿ ಬಂದು ವಾಸವಾಗಿದ್ದರು.  ಹರೀಶ್ ದೇವನಹಳ್ಳಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪವಿತ್ರ ಹಾಗೂ ಹರೀಶ್ ಮಧ್ಯೆ ಅಗಾಗ ಜಗಳ ನಡೆಯುತ್ತಿದ್ದು, ಮನನೊಂದ ಪವಿತ್ರ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾಳೆ. ಪವಿತ್ರಳ ತಂದೆ ಸೊಣ್ಣಪ್ಪ ಪವಿತ್ರಳನ್ನು ಎತ್ತಿಕೊಂಡು ಬಂದಿರುವುದಾಗಿ, ಹಾಗೂ ಅತ್ಯಾಚಾರ ಮಾಡಿ ಕೊಲೆ ಮಾಡಿರುವುದಾಗಿ ದೂರು ಸಲ್ಲಿಸಿದ್ದಾರೆ. ಹರೀಶ್ನನ್ನು ಬಂಧಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.