ಕೋಲಾರ

ಶಾಲಾ ಸಮವಸ್ತ್ರದಲ್ಲೇ ಮಿಂಚಿದ ಸಮ್ಮೇಳನಾಧ್ಯಕ್ಷೆ ರಾಜಲಕ್ಷ್ಮಿ

Published On :

ಕೋಲಾರ: ಮಕ್ಕಳ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆಯುವ ಮೆರವಣಿಗೆಯಲ್ಲಿ ಶಾಲಾ ಸಮವಸ್ತ್ರದಲ್ಲೇ ಭಾಗವಹಿಸುವೆ ಎಂದಿದ್ದ ಸಮ್ಮೇಳನಾಧ್ಯಕ್ಷೆ ಪಿ. ರಾಜಲಕ್ಷ್ಮೀ ನುಡಿದಂತೆ ನಡೆಯುವ ಮೂಲಕ ಪ್ರಶಂಸೆಗೆ ಪಾತ್ರಳಾದಳು. ನಾನೊಬ್ಬ ಗಣ್ಯ ಅತಿಥಿ, ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಎಂಬ ಹಮ್ಮು ಬಿಮ್ಮು ಇಲ್ಲದೆ ಎಂದಿನಂತೆ ಧರಿಸುವ ಶಾಲಾ ಸಮವಸ್ತ್ರದಲ್ಲೇ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವೈಶಿಷ್ಟ್ಯತೆಯನ್ನು ಪ್ರದರ್ಶಿಸಿದಳು. ಕತೆ, ಕವಿಗೋಷ್ಠಿ ಹಾಗೂ ಚಾರ್ಚಾಗೋಷ್ಠಿಯಲ್ಲಿ ಉಪಸ್ಥಿತೆಯಾಗಿದ್ದ ರಾಜಲಕ್ಷ್ಮೀ ತನ್ನ ಸಹಪಾಠಿಗಳ ಪ್ರತಿಭೆಯ ಬಗ್ಗೆ ತೋರಿದ ಅಭಿಮಾನ ಎಲ್ಲರ ಗಮನ ಸೆಳೆಯಿತು. ಸಮ್ಮೇಳನದ ನಂತರ ಕನ್ನಡಪ್ರಭದೊಂದಿಗೆ ಮಾತನಾಡಿದ ರಾಜಲಕ್ಷ್ಮಿ, ತನ್ನ ಶಾಲೆಯಲ್ಲಿ ಕನ್ನಡ ವಾತಾವಣ ಮೂಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ, ಕನ್ನಡದಲ್ಲಿ ಹೆಚ್ಚು ಬರೆಯುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ನನ್ನ ಕೈಲಾದಷ್ಟು ಕೊಡುಗೆ ನೀಡುತ್ತೇನೆಂದಳು. ಸಮ್ಮೇಳನಾಧ್ಯಕ್ಷೆ ಮಾಡಿ ಜವಾಬ್ದಾರಿ ಹೆಚ್ಚಿಸಲಾಗಿದೆ, ವಿವಿಧ ಸ್ತರಗಳ ಜನರನ್ನು ನೋಡುವಂತಾಯಿತು, ಕಲಿಯುವುದು ಸಾಕಷ್ಟು ಇದೆ, ಎಸ್.ಎಸ್.ಎಲ್.ಸಿ ಪರೀಕ್ಷೆಯ ನಂತರ ಕನ್ನಡದಲ್ಲಿ ಏನಾದರೂ ವಿಶೇಷ ಸಾಧನೆ ಮಾಡಲು ಯತ್ನಿಸುತ್ತೇನೆಂದು ರಾಜಲಕ್ಷ್ಮಿ ತಿಳಿಸಿದಳು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.