10ರಿಂದ ಶ್ರೀಮಹೇಶ್ವರಮ್ಮ ದೇವಿ ಪ್ರತಿಷ್ಠಾಪನೆ ಕಾರ್ಯಕ್ರಮ
ಕೋಲಾರ: ತನ್ನ ಬದುಕಿಗೆ ದಾರಿ ಮಾಡಿಕೊಟ್ಟ ದೇವರಿಗೆ ಹರಕೆ ತೀರಿಸಲು ಭಕ್ತನೊಬ್ಬ ಸ್ವಗ್ರಾಮದಲ್ಲಿ ಭವ್ಯ ದೇವಾಲಯ ನಿರ್ಮಿಸಿದ್ದಾನೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಪಾಕರಹಳ್ಳಿಯ ಪಿ.ಎಂ.ಮುನಿಯಪ್ಪ ತಾನು ನಂಬಿದ ದೇವತೆ ಶ್ರೀ ಮಹೇಶ್ವರಿಯಿಂದ ಬದುಕು ಬೆಳಗಿತು ಎಂದು ಭಾವಿಸಿ ತನ್ನಿಷ್ಟ ದೇವಿಗೆ ಒಂದು ಕೋಟಿಗೂ ಹೆಚ್ಚು ವೆಚ್ಚ ಮಾಡಿ ಸುಂದರ ಹಾಗೂ ಭವ್ಯವಾದ ದೇವಾಲಯ ನಿರ್ಮಾಣ ಮಾಡಿದ್ದಾರೆ.
ಪಾಕರಹಳ್ಳಿ ಗ್ರಾಮದ ಬಡತನ ಕುಟುಂಬದಲ್ಲಿ ಜನಿಸಿದ ಪಿ.ಎಂ.ಮುನಿಯಪ್ಪ ಜೀವನಕ್ಕಾಗಿ ಬೆಂಗಳೂರು ಸೇರಿದ್ದರು. ಈಗ ಅವರ ಬದುಕು ಸ್ವಂತ ಉದ್ಯಮ ಸ್ಥಾಪನೆವರೆಗೂ ಸಾಗಿದೆ. ತನ್ನ ಬದುಕಿನ ಪ್ರತಿಯೊಂದು ಘಟ್ಟದಲ್ಲಿಯೂ ಶ್ರೀಮಹೇಶ್ವರಮ್ಮ ದೇವಿಯ ಕೃಪೆ ಮತ್ತು ಆಶೀರ್ವಾದ ಇದೆ ಎಂದು ಭಾವಿಸಿ ದೇವಿಗೆ ಹರಕೆ ತೀರಿಸಲು ಮುಂದಾದ ಮುನಿಯಪ್ಪ ಪುಟ್ಟ ಗುಡಿಯಲ್ಲಿ ನೆಲೆಸಿದ್ದ ದೇವಿಗೆ ದೊಡ್ಡ ಮಂದಿರ ನಿರ್ಮಿಸಿದ್ದಾರೆ.
ನೂತನ ದೇವಾಲಯದ ಗೋಪುರ, ಬಿಂಬಗಳ ಪ್ರತಿಷ್ಠಾಪನೆ ಮತ್ತು ಕುಂಬಾಭಿಷೇಕ ಮಹೋತ್ಸವ, ಜೊತೆಗೆ ಶ್ರೀಬಲಮರಿ ಗಣಪತಿ, ಶ್ರೀಮಹೇಶ್ವರಿ ಅಮ್ಮನವರು, ಶ್ರೀಸುಬ್ರಹ್ಮಣ್ಯಸ್ವಾಮಿ, ಶ್ರೀನಾಗದೇವತೆ, ಶ್ರೀಮುನೇಶ್ವರಸ್ವಾಮಿ ಹಾಗೂ ಶ್ರೀಸಪ್ತಮಾತೃಕೆಯವರ ವಿಗ್ರಹಗಳ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಡಿ.10 ರಂದು ಮಂಗಳವಾರದಿಂದ ಡಿ.12 ರವರೆಗೂ ಮೂರು ದಿನ ನಡೆಯಲಿದೆ.
ಶ್ರೀಆದಿಚುಂಚನಗಿರಿ ಮಹಾಸ್ವಾಮಿಗಳಾದ ಶ್ರೀನಿರ್ಮಲನಂದನಾಥ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಸಮಯಪುರ ಪಾದಸೇವಾ ಮಹಾಸಂಸ್ಥಾನ ಮಠದ ಶ್ರೀ ಸುರೇಶ್ವರಾಚಾರ್ಯ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಪ್ರತಿಷ್ಠಾಪನೆ ಮತ್ತು ಕುಂಬಾಭಿಷೇಕ ಕಾರ್ಯಕ್ರಮಗಳು ನೆರವೇರಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

