2 ಕೋಟಿ ವೆಚ್ಚದ ಏರಿಯಲ್ ಬೆಂಚ್ ಕೇಬಲ್ ಯೋಜನೆಗೆ ಶಾಸಕ ಚಾಲನೆ
ಬಂಗಾರಪೇಟೆ: ಸ್ಲಂ ಕಾಲೋನಿಗಳಲ್ಲಿ ವಿದ್ಯುತ್ ಅವಘಡಗಳನ್ನು ತಪ್ಪಿಸುವ ಸಲುವಾಗಿ 2 ಕೋಟಿ ವೆಚ್ಚದಲ್ಲಿ ಏರಿಯಲ್ ಬೆಂಚ್ ಕೇಬಲ್ ಎಂಬ ಹೊಸ ಯೋಜನೆಗೆ ಜಿಲ್ಲೆಯಲ್ಲೆ ಪ್ರಥಮ ಬಾರಿಗೆ ಪಟ್ಟಣದಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಚಾಲನೆ ನೀಡಿದರು.
ಸ್ಲಂ ಕಾಲೋನಿ ಮತ್ತು ಗುಡಿಸಲು ವಾಸಿಗರು ಹೆಚ್ಚಾಗಿರುವ ಬಡಾವಣೆಗಳಲ್ಲಿ ವಿದ್ಯುತ್ ಅಪಘಾತಗಳು ಹೆಚ್ಚು ಸಂಭವಿಸುತ್ತಿವೆ. ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ಈ ಹೊಸ ಯೋಜನೆ ಜಾರಿಗೆ ತಂದಿದ್ದು. ಇದರಿಂದ ಇನ್ನು ಮುಂದೆ ಯಾವುದೇ ವಿದ್ಯುತ್ಶಾಕ್, ವಿದ್ಯುತ್ಶಾರ್ಟ್ ಸರ್ಕ್ಯೂಟ್ ಆಗಲಿ ನಡೆಯುವುದಿಲ್ಲ. ಇದರ ಹೆಸರು ಏರಿಯಲ್ ಬೆಂಚ್ ಕೇಬಲ್ ಮೇಲ್ಭಾಗದಲ್ಲಿ ಪ್ಲಾಸ್ಟಿಕ್ ಅಳವಡಿಸಿದ್ದು ಮಳೆ ಅಥವಾ ಯಾರಾದರೂ ಇದನ್ನು ಮುಟ್ಟಿದರೂ ಯಾವುದೇ ಹಾನಿಯಾಗುವುದಿಲ್ಲ. ಈ ಯೋಜನೆ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಪಟ್ಟಣದಲ್ಲಿ ಅಳವಡಿಸಲಾಗುತ್ತಿದೆ.ಈ ಯೋಜನೆಗೆ 2ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. ಮೊದಲ ಆದ್ಯತೆ ಮೇರೆಗೆ ಸ್ಲಂ ಹಾಗೂ ಗುಡಿಸಲು ಕಾಲೇನಿಗಳಲ್ಲಿ ಅಳವಡಿಸಿ ನಂತರ ಪಟ್ಟಣದ ಇತರೆ ಬಡಾವಣೆಗಳಲ್ಲಿಯೂ 92 ಕಿ.ಮೀ ವ್ಯಾಪ್ತಿಗೆ ಯೋಜನೆಯನ್ನು ಅಳವಡಿಸಲಾಗುವುದು.
ತಿಂಗಳಲ್ಲಿ ಈ ಯೋಜನೆ ಅನುಷ್ಟಾನಕ್ಕೆ ಬರಲಿದ್ದು, ಇದರಿಂದ ಬಹುತೇಕ ವಿದ್ಯುತ್ ಅವಘಡಗಳಿಗೆ ಮುಕ್ತಿ ಕಾಣಲಿದೆ ಎಂದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಂತ ಹಂತವಾಗಿ ಜಿಲ್ಲೆಯಲ್ಲೆ ಮಾದರಿ ಪಟ್ಟಣವನ್ನಾಗಿಸಲು ಈಗಾಗಲೇ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದರು.
ಮೊದಲ ಹಂತವಾಗಿ ಕೋಲಾರ-ಕೆಜಿಎಫ್ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಮಾಡುವುದು, ನಂತರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದು ಹಾಗೂ ಎಲ್ಲಾ ಸ್ಲಂ ಕಾಲೋನಿಗಳಲ್ಲಿ ನಾಗರಿಕ ಅನುಕೂಲಗಳನ್ನು ಒದಗಿಸುವುದು ಗುರಿಯಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬಡವರ, ಹಿಂದುಳಿದವರ,ದಲಿತರ ಹಾಗೂ ರೈತರ ಪರವಾಗಿ ಉತ್ತಮ ಕೆಲಸವನ್ನು ಮಾಡುತ್ತಿದೆ ಎಂದು ಸರ್ಕಾರದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಮುಂಬರುವ ಲೋಕಸಭೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರ್ಥಸಾರಥಿ, ಮಂಜುನಾಥ್, ಮುಖಂಡರಾದ ಡಿ.ಕಿಶೋರ್ಕುಮಾರ್, ಬೆಸ್ಕಾಂ ಎಇಇ ಚಲಪತಿ, ಹುಸೇನಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

