ದೊಡ್ಡಗಂಜೂರು ಗ್ರಾಪಂ: ಸಾವಿತ್ರಮ್ಮ ಅಧ್ಯಕ್ಷೆ
ಕ.ಪ್ರ.ವಾರ್ತೆ , ಚಿಂತಾಮಣಿ , ಡಿ. 13
ಹಳ್ಳಿಗಳ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರಾಮಾಣಿಕ ಸೇವೆ ಮಾಡುತ್ತೇನೆ ಎಂದು ಗ್ರಾಪಂ ನೂತನ ಅಧ್ಯಕ್ಷೆ ಸಾವಿತ್ರಮ್ಮ ಸುರೇಶ್ ಬಾಬು ಭರವಸೆ ನೀಡಿದರು.
ತಾಲೂಕಿನ ದೊಡ್ಡಗಂಜೂರು ಗ್ರಾಪಂ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ತಾಲೂಕಿನಲ್ಲೇ ದೊಡ್ಡಗಂಜೂರು ಗ್ರಾಪಂ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಹೆಸರು ಪಡೆದಿರುವ ಪಂಚಾಯಿತಿಯನ್ನು ಮಾಜಿ ಶಾಸಕ ಡಾ.ಎಂ.ಸಿ ಸುಧಾಕರ್ ಸಹಕಾರದೊಂದಿಗೆ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲು ನೀಡಿರುವ ಅಧ್ಯಕ್ಷ ಸ್ಥಾನವನ್ನು ಪ್ರಾಮಾಣಿಕವಾಗಿ ಸೇವೆ ಮಾಡುವೆ ಎಂದರು.
ಶುಕ್ರವಾರ ಬೆಳಗ್ಗೆ ಗ್ರಾಪಂ ಕಾರ್ಯಾಲಯದಲ್ಲಿ ಚುನಾವಣೆ ಅಧಿಕಾರಿಯಾಗಿ ತಾಪಂ ಕಾರ್ಯನಿರ್ವಣಾಧಿಕಾರಿ ವಸಂತ್ ಕುಮಾರ್ ಚುನಾವಣೆ ಕರ್ತವ್ಯವನ್ನು ಸುಗಮವಾಗಿ ನೆರವೇರಿಸಿದರು. ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಪಿಡಿಒ ರಾಮಚಂದ್ರಪ್ಪ ಉಪಸ್ಥಿತರಿದ್ದರು.
ಪೊಲೀಸ್ ಬಂದೋಬಸ್ತ್: ತಾಲೂಕಿನ ಅತಿ ಸೂಕ್ಷ್ಮ ಗ್ರಾಮ ಪಂಚಾಯಿತಿಯಾದ ದೊಡ್ಡಗಂಜೂರು ಪಂಚಾಯಿತಿ ಆವರಣ ಸುತ್ತಮುತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಬ್ ಇನ್ಸ್‌ಪೆಕ್ಟರ್ ರಾಘವೇಂದ್ರ ಮಾರ್ಗದರ್ಶನದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್‌ಕಲ್ಪಿಸಲಾಯಿತು.
ಅಭಿನಂದನೆ: ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡ ಸಾವಿತ್ರಮ್ಮ ಹಾಗೂ ವೆಂಕಟಸ್ವಾಮಿ ಅವರನ್ನು ನಗರದ ಮಾಳಪ್ಪಲ್ಲಿಯ ಮಾಜಿ ಶಾಸಕ ಎಂ.ಸಿ ಸುಧಾಕರ್ ಅಂಜನಿ ನಿವಾಸದಲ್ಲಿ ಮಾಜಿ ಶಾಸಕ ಕೆ.ವಿ. ಸುಬ್ಬಾರೆಡ್ಡಿ, ತಾಪಂ ಅಧ್ಯಕ್ಷೆ ಗೌರಮ್ಮ ನಾಗೇಶ್, ಉಪಾದ್ಯಕ್ಷ ನಾಗರಾಜ್, ಎಪಿಎಂಸಿ ಸದಸ್ಯ ಗೋಪಾಲರೆಡ್ಡಿ, ಮುಖಂಡರಾದ ಮುನಿಶಾಮಿರೆಡ್ಡಿ, ಕೋನಪ್ಪಲ್ಲಿ ವೆಂಕಟಶಿವಾರೆಡ್ಡಿ, ಬುಕ್ಕನಹಳ್ಳಿ ಶಿವಣ್ಣ, ನಾಗೇಶ್, ಆದಿಗೆರೆ ಚೌಡರೆಡ್ಡಿ ಸೇರಿದಂತೆ ಇತರರು ಅಭಿನಂದನೆ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

