ಕೋಲಾರ

ಜೆಡಿಎಸ್ ವತಿಯಿಂದ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ

Published On :

ಕೋಲಾರ: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರ 55 ಹುಟ್ಟು ಹಬ್ಬವನ್ನು ನಗರದಲ್ಲಿ ಜೆಡಿಎಸ್ ವತಿಯಿಂದ ಆಚರಿಸಲಾಯಿತು. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ. ರಾಮರಾಜು ಮಾತನಾಡಿ, ರೈತರ ಹಿತ ಕಾಯುವ ಧ್ಯೇಯದೊಂದಿಗೆ ಕುಮಾರಸ್ವಾಮಿ ಅವರು 20 ತಿಂಗಳು ನೀಡಿದ ಆಡಳಿತ ಅಭಿವೃದ್ಧಿಇಂದಿಗೂ ಜನತೆಯ ಮನಸ್ಸಿನಲ್ಲಿ ಉಳಿದಿದೆ ಎಂದರು
ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಎಪಿಎಂಸಿ ಅಧ್ಯಕ್ಷೆ ರಾಜೇಶ್ವರಿ ಅವರು ವಿಕಲಚೇತನ ಮಕ್ಕಳಿಗೆ ಕೇಕಕ್ತಿನ್ನಿಸಿದರು.
ನಗರದ ಸಾಯಿಬಾಬಾ ಮಂದಿರದಲ್ಲಿ ಕುಮಾರಸ್ವಾಮಿ ನಡೆದ ಕಾರ್ಯಕ್ರಮದಲ್ಲಿ  ದೇವರಿಗೆ ವಿಶೇಷ ಪೂಜೆ ನಂತರ ಕೇಕ್ ಕತ್ತರಿಸಿ ಕಾರ್ಯಕರ್ತರಿಗೆ ಹಂಚಲಾಯಿತಲ್ಲದೆ, ಮಕ್ಕಳಿಗೆ ಸ್ವೆಟರ್, ಸಿಹಿ ವಿತರಿಸಲಾಯಿತು.
ಜಿಪಂ ಸದಸ್ಯ ಎಸ್.ಬಿ. ಮುನಿವೆಂಕಟಪ್ಪ, ಮುಖಂಡರಾದ ದಯಾನಂದ್, ಉರಿಗಿಲಿ ರುದ್ರಸ್ವಾಮಿ, ಬಣಕನಹಳ್ಳಿ ನಟರಾಜ್, ತಾಲೂಕು ಅಧ್ಯಕ್ಷ ಮೂರಾಂಡಹಳ್ಳಿ ಗೋಪಾಲ್, ವಕ್ಕಲೇರಿ ರಾಮು, ನಗರಸಭಾ ಸದಸ್ಯರಾದ ಮುರಳೀಗೌಡ, ರಾಧಾಕೃಷ್ಣ, ಚಲಪತಿ, ರಾಮಕೃಷ್ಣಾರೆಡ್ಡಿ, ಹರೀಶ್‌ಗೌಡ, ಸಹಕಾರಿ ಯೂನಿಯನ್ ನಿರ್ದೇಶಕ ದಯಾನಂದ್, ಹರಟಿಬಾಬು, ನಾಗನಾಳ ಸೋಮಣ್ಣ, ರಮೇಶ್, ಹೂವಳ್ಳಿ ಅರುಣ್  ಮತ್ತಿರರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.