ಜಂಜಾಟದ ಜೀವನಕ್ಕೆ ವಸ್ತು ಪ್ರದರ್ಶನ ಸಹಕಾರಿ
ಕ.ಪ್ರ.ವಾರ್ತೆ , ಮಾಲೂರು , ಡಿ.18
ನಿತ್ಯ ಜೀವನ ಜಂಜಾಟದಲ್ಲಿ ಯಂತ್ರದಂತೆ ಕೆಲಸ ಮಾಡುವ ಇಂದಿನ ಯುಗದಲ್ಲಿ ಒಂದೇ ಸೂರಿನಡಿಯಲ್ಲಿ ಸಿಗುವ ವಸ್ತು ಪ್ರದರ್ಶನ ಮಳಿಗೆ ಸಹಕಾರಿಯಾಗಿದ್ದು, ಜನತೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷ ಪುಟ್ಟಸ್ವಾಮಿ ಹೇಳಿದರು. ಅವರು ಪಟ್ಟಣದ ತಿರುಮಲ ಕಲ್ಯಾಣ ಮಂಚಪದಲ್ಲಿ ಕೃಷಿ ಮತ್ತು ಗ್ರಾಹಕರ ಅಭಿವದ್ಧಿ ಪ್ರದರ್ಶಕರು ಸರ್ಕಾರಿ ಇಲಾಖೆಗಳ ಸಹಕಾರದಲ್ಲಿ ಆಯೋಜಿಸಿದ್ದ ಮೂರು ದಿನಗಳ ವಸ್ತು ಪ್ರದರ್ಶನ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ಯುಗದಲ್ಲಿ ದಂಪತಿಗಳ ಯಾಂತ್ರಿಕ ಜೀವನಕ್ಕೆ ಮೊರೆಹೋಗಿದ್ದು, ಮನೆ- ಕುಟುಂಬ ಸಲಹಲು ವೇಳೆಯೇ ಸಿಗುತ್ತಿಲ್ಲ. ಅಂತಹ ಕುಟುಂಬಗಳಿಗೆ ನಿತ್ಯ ಉಪಯೋಗಿ ವಸ್ತುಗಳು ಸಿಗುವ ಇಂತಹ ಪ್ರದರ್ಶನದ ಉತ್ಸವಗಳು ಆಗಾಗ ನಡೆಯುತ್ತಿರಬೇಕು ಎಂದ ಪುಟ್ಟಸ್ವಾಮಿ, ಇಂದಿನ ಪ್ರದರ್ಶನಕ್ಕೆ ಪ್ರಚಾರ ಕೊರತೆ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರದರ್ಶನ ಆಯೋಜಿಸಬೇಕಾದಾಗ ತಾಪಂನ ಸಹಕಾರ ತೆಗೆದುಕೊಳುವಂತೆ ಮನವಿ ಮಾಡಿದರು.
ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಭವ್ಯ ರಾಣಿ, ತೋಟಗಾರಿಕಾಧಿಕಾರಿ ಆನಂದ್, ರೇಷ್ಮೆ ಇಲಾಖಾಧಿಕಾರಿ ರುದ್ರಪ್ಪ, ಬಿಜೆಪಿ ಹಿರಿಯ ಮುಖಂಡ ಕೋಡಿಹಳ್ಳಿ ಸೂಣ್ಣಪ್ಪ, ಹೊಸಕೋಟೆ ರಾಜಣ್ಣ, ಸಂಘಟನೆಯ ಸಂಚಾಲಕ ಸುರೇಶ್, ನಾರಾಯಣಮ್ಮ ಇದ್ದರು.ನಂತರ ಕೃಷಿ, ರೇಷ್ಮೆ, ತೋಟಗಾರಿಕೆ ಸೇರಿದಂತೆ ಸುಜುಕಿ, ಹೊಂಡ, ಅಶೋಕ್ ಲೇಲ್ಯಾಂಡ್, ಟಾಟಾ ಕಂಪನಿಗಳ ಕೃಷಿ ವಾಹನಗಳ ಪ್ರದರ್ಶನಗಳು ನಡೆದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

