ಕೋಲಾರ

ಮಾಲೂರು: ಗದ್ದಲ, ಧಿಕ್ಕಾರದ ನಡುವೆ ನಡೆದ ಪ್ರಥಮ ಅಟ್ರಾಸಿಟಿ ವಿಚಾರಣಾ ಸಭೆ

Published On :

ಮಾಲೂರು: ತಹಸೀಲ್ದಾರ್ ಡಾ.ಸುಧಾ ಪಾಯ್ಸ್ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಅಟ್ರಾಸಿಟಿ ವಿಚಾರಣಾ ಸಭೆ ಗದ್ದಲ ಧಿಕ್ಕಾರಗಳ ನಡುವೆ ನಡೆಯಿತು.
ಶಾಸಕ ಕೆ.ಎಸ್.ಮಂಜುನಾಥ್ ಉದ್ಧಾಟನಾ ಭಾಷಣ ನಂತರ ಪ್ರಾರಂಭವಾದ ಗದ್ದಲ ಸುಮಾರು ಒಂದು ಗಂಟೆ ಕಾಲ ನಡೆಯಿತು. ಹಿಂದಿನ ಸಭೆಯ ನಡುವಳಿಕೆಗಳನ್ನು ದಾಖಲು ಮಾಡದ ಸಮಾಜ ಕಲ್ಯಾಣ ಅಧಿಕಾರಿ 2010 ರ ಸಭೆಯ ನಡುವಳಿಕೆಗಳನ್ನು ಓದಲು ಪ್ರಾರಂಭಿಸಿದಾಗ ದಲಿತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ,
ಕಳೆದ ಡಿಸೆಂಬರ್ ನಲ್ಲಿ ನಡೆದಿದ್ದ ಸಭೆಯ ನಿರ್ಣಯ ಫಲಿತಾಂಶಗಳ ಬಗ್ಗೆ ಮಾಹಿತಿ ನೀಡುವಂತೆ ಒತ್ತಾಯಿಸಿದರು.
ಈ ಬಗ್ಗೆ ಸಮಾಜ ಕಲ್ಯಾಣ ಅಧಿಕಾರಿ ರಾಮಸ್ವಾಮಿ ಬಹಿರಂಗವಾಗಿ ಕ್ಷಮೆಯಾಚಿಸಿದರೂ, ಒಪ್ಪದ ದಲಿತ ಸಂಘಟನೆಗಳ ಕಾರ್ಯಕರ್ತರು ದಲಿತರ ಸಭೆಗಳ ಬಗ್ಗೆ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷವೇ ನಿಜವಾದ ಅಟ್ರಾಸಿಟಿ ಪ್ರಕರಣವಾಗಿದ್ದು, ಮೊದಲು ಕರ್ತವ್ಯ ಲೋಪವೆಸಗಿರುವ ತಾಲೂಕು ಆಡಳಿತದ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಬೇಕು. ನಂತರ ಸಭೆ ನಡೆಯಲಿ ಎಂದ ದಲಿತ ಮುಖಂಡರು ಒಂದು ಹಂತದಲ್ಲಿ ಧಿಕ್ಕಾರ ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಲು ಮುಂದಾದ ಜಿಪಂ ಸದಸ್ಯೆ ಯಲ್ಲಮ್ಮನವರ ಬಾಯಿ ಮುಚ್ಚಿಸಿದ ಸಭಿಕರು ತಾಲೂಕು ಸಮಾಜ ಕಲ್ಯಾಣಾಧಿಕಾರಿ ರಾಮಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಲೇ ಬೇಕು ಎಂದು ಹಠ ಹಿಡಿದರು.
ಸಮಾಜ ಕಲ್ಯಾಣ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವರದಿ ಕಳುಹಿಸುವುದಾಗಿ ತಹಸೀಲ್ದಾರ್ ಹೇಳಿದ ನಂತರ ಸಭೆ ಮುಂದುವರೆಯಿತು.
ನಂತರ ನಡೆದ ಸಭೆಯಲ್ಲಿ ಎಸ್‌ಸಿಎಸ್‌ಟಿ ಕಾಲೋನಿಗಳಲ್ಲಿ ರಾಜರೋಷವಾಗಿ ಸಾರಾಯಿ ಮಾರಾಟ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಬಕಾರಿ ಇನ್ಸ್‌ಪೆಕ್ಟರ್ ಬಸವರಾಜ ಅದಾಯದ ಗುರಿ ಹೆಚ್ಚುಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವೇ ಕಾಲೋನಿಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದು, ಒಂದು ವೇಳೆ ಇದರಿಂದ ಸಮಸ್ಯೆ ಉದ್ಭವಿಸಿದಲ್ಲಿ ಮಾತ್ರ  ಆ ಸ್ಥಳದಲ್ಲಿ ಮಾರಾಟ ಸ್ಥಗಿತಗೊಳಿಸಲಾಗುವುದು ಎಂದರು. ತಾಲೂಕಿನ ಅನಮಿಟನಹಳ್ಳಿಯಲ್ಲಿ ಮೂಲಭೂತ ಸೌಕರ್ಯ ವಿಲ್ಲದೇ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು,ನಿವಾಸಿಗಳಿಗೆ ತೊಂದರೆ ಅಗುತ್ತಿರುವ ಹಿನ್ನೆಲೆಯಲ್ಲಿ ಈ ಅಕ್ರಮ ತಡೆಗಟ್ಟಬೇಕು ಎಂಬ ದಲಿತ ಮುಖಂಡ ರವಿ ದೂರಿಗೆ ಸ್ಪಂದಿಸಿದ ತಹಸೀಲ್ದಾರ್ ಡಾ.ಸುಧಾ ಹಾಗೂ ಶಾಸಕ ಮಂಜುನಾಥ್ ಈ ಸಂಬಂಧ ತಮ್ಮ ಬಳಿ ಇರುವ ದಾಖಲೆಗಳನ್ನು ತಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಬಂಡೂರು ಅಗ್ರಹಾರ ನಾರಾಯಣಸ್ವಾಮಿ,ಕೋಡೂರು ಗೋಪಾಲ್, ಪುರ ಶ್ರೀನಿವಾಸ್,ಗಿರಿ,ತಿಪ್ಪಸಂದ್ರ ಶ್ರೀನಿವಾಸ್,ಅಬ್ಬಯ್ಯಪ್ಪ,ವೆಂಕಟರಾಮ್,  ನಾರಾಯಣಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.