ಪ್ರಧಾನ ಕಾರ್ಯದರ್ಶಿಯಾಗಿ ಕೆ.ಗೋಪಾಲರೆಡ್ಡಿ ಆಯ್ಕೆ
ಕೋಲಾರ: ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕೆಂಬೋಡಿ ಜನತಾ ಶಾಲೆಯ ಮುಖ್ಯ ಶಿಕ್ಷಕ ಕೆ.ಗೋಪಾಲರೆಡ್ಡಿ ಆಯ್ಕೆಯಾಗಿದ್ದಾರೆ.
ಡಿಡಿಪಿಐ ಪದ್ಮನಾಭ್ ಅವರು ಅಧ್ಯಕ್ಷರಾಗಿರುವ ಮುಖ್ಯ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಗೋಪಾಲರೆಡ್ಡಿ ಅವರಿಗೆ 133 ಹಾಗೂ ಅವರ ಪ್ರತಿಸ್ಪರ್ಧಿಯಾಗಿದ್ದ ರುದ್ರಪ್ಪ ಅವರಿಗೆ 83 ಮತಗಳು ಬಂದವು.
ಇದೇ ಸಂದರ್ಭದಲ್ಲಿ ಸಂಘದ ಇತರೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಂಘದ ಖಜಾಂಚಿ- ಕ್ಯಾಸಂಬಳ್ಳಿ ಸರ್ಕಾರಿ ಪ್ರೌಢಶಾಲೆಯ ಶಶಿಕಲಾ, ಉಪಾಧ್ಯಕ್ಷ- ಮಾಲೂರಿನ ಕೃಷ್ಣಪ್ಪ, ಸಂಘಟನಾ ಕಾರ್ಯದರ್ಶಿ- ಎಂ.ವಿ.ಕೆ ಪ್ರೌಢಶಾಲೆ ಉತ್ತನೂರಿನ ಎಂ.ವೆಂಕಟರೆಡ್ಡಿ ಮತ್ತು ತಾಲೂಕು ಪ್ರತಿನಿಧಿಗಳಾಗಿ ಶ್ರೀನಿವಾಸಪುರ ಬಾಲಕರ ಪಿಯು ಕಾಲೇಜಿನ ರೇಣುಕಮ್ಮ, ಕೋಲಾರಕ್ಕೆ ತೊರದೇವಂಡಹಳ್ಳಿ ಸರ್ಕಾರಿ ಶಾಲೆಯ ಎನ್.ನಾರಾಯಣಸ್ವಾಮಿ, ಕೆಜಿಎಫ್ಗೆ ಅಲ್ಲಿನ ಅಂಬೇಡ್ಕರ್ ಪ್ರೌಢಶಾಲೆಯ ಕದಿರಿರೆಡ್ಡಿ, ಮುಳಬಾಗಿಲು ತಾಲೂಕಿನ ಅಲ್ಲಿನ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಕೆ.ವಿ.ನರಸಿಂಹಯ್ಯ, ಬಂಗಾರಪೇಟೆಗೆ ಅಲ್ಲಿನ ಸರ್ಕಾರಿ ಪಿಯು ಕಾಲೇಜಿನ ಶಂಕರಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

