ಮನುಕುಲದ ಮಾರಕ ರೋಗ ಏಡ್ಸ್ ಕುರಿತು ಅರಿವು ಅಗತ್ಯ
ಕೋಲಾರ: ಏಡ್ಸ್ ಬಗ್ಗೆ ಯುವ ಜನತೆ ಜಾಗೃತರಾಗಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಜಿ.ದೊರೆಸ್ವಾಮಿ ಸಲಹೆ ನೀಡಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಎನ್‌ಎಸ್‌ಎಸ್ ಘಟಕ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಏಡ್ಸ್ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ಹಾಗೂ ಏಡ್ಸ್ ಕುರಿತ ಮಾರಕ ಪರಿಣಾಮಗಳ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡುತ್ತಿದ್ದರು. ಯುವ ಜನಾಂಗ ದುಶ್ಚಟಗಳಿಂದ ದೂರವಾಗಬೇಕು, ಎಚ್‌ಐವಿ ಹರಡದಂತೆ ವಹಿಸಬೇಕಾದ ಮುನ್ನಚ್ಚರಿಕಾ ಕ್ರಮಗಳ ಅರಿವು ಪಡೆಯಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಿಯು ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಹಾಗೂ ಪ್ರಾಂಶುಪಾಲ ಎಸ್.ವೆಂಕಟಸ್ವಾಮಿ, ರಕ್ತದಾನ ಮಾಡುವಾಗ ಮತ್ತು ಪಡೆಯುವಾಗ ಎಚ್ಚರವಹಿಸಬೇಕು, ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕು ಎಂದರು.
ಎಚ್‌ಐವಿ ಈಗ ಇಡೀ ದೇಶವನ್ನು ಕಾಡುತ್ತಿದ್ದು, ಯುವಕರು ಎಚ್ಚೆತ್ತುಕೊಂಡು ಇದರಿಂದ ದೂರವಾಗಬೇಕಲ್ಲದೆ, ಸಮಾಜದಲ್ಲಿ ಜಾಗೃತಿ ಮೂಡಿಸಲು ಸಂಘಟನಾತ್ಮಕವಾಗಿ ಪ್ರಯತ್ನಿಸಬೇಕೆಂದರು.
ಕಸಾಪ ಜಿಲ್ಲಾಧ್ಯಕ್ಷ ಜೆ.ಜಿ.ನಾಗರಾಜ್, ಪ್ರಪಂಚದಲ್ಲಿ ಭಯ, ಆತಂಕ ಮೂಡಿಸುವ ಒಂದೇ ಒಂದು ರೋಗ ಏಡ್ಸ್ ಆಗಿದ್ದು,ನಾವು ಬದುಕಬೇಕು, ಇತರರೂ ಬದುಕಬೇಕು ಎಂಬ ಪರಿಕಲ್ಪನೆ ಬದ್ದತೆ ಬೆಳೆಸಿಕೊಂಡರೆ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದರು.
ಏಡ್ಸ್ ಪೀಡಿತ ರೋಗಿಯನ್ನು ಗೌರವದಿಂದ ಕಾಣಿ, ಅವರೊಂದಿಗೆ ಮಾತನಾಡುವುದರಿಂದ ಊಟ ಮಾಡುವುದರಿಂದ ಈ ರೋಗ ಬರುವುದಿಲ್ಲ, ಕೇವಲ ರಕ್ತ ಪಡೆಯುವುದರಿಂದ, ಲೈಂಗಿಕ ಸಂಪರ್ಕದಿಂದ ಮಾತ್ರ ಹರುಡುವ ಕಾರಣ ರೋಗ ಪೀಡಿತರನ್ನು ಗೌರವದಿಂದ ಕಾಣುವಂತೆ ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಉಪನ್ಯಾಸಕ ಎನ್.ರಾಮಚಂದ್ರಪ್ಪ ಏಡ್ಸ್ ಬಗ್ಗೆ ಸವಿಸ್ತರವಾಗಿ ತಿಳಿಸಿದರು. ಮೈರಾಡ ಸಂಸ್ಥೆಯ ಸಿಇಒ ರುದ್ರೇಶ್, ಕಾಲೇಜು ಉಪನ್ಯಾಸಕರಾದ ಜಿ.ಎಂ.ಗೋಪಿಕೃಷ್ಣನ್,ವೆಂಕಟೇಶ್, ಆರೋಗ್ಯ ಇಲಾಖೆಯ ರಾಜನ್, ಸಂದೀಪ್ ಇತರರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

