ಕೋಲಾರ

ಅಧಿಕಾರಿಗಳ ವೈಪಲ್ಯಕ್ಕೆ ಲೋಕಾಯುಕ್ತರ ಕಿಡಿ

Published On :

ಗೌರಿಬಿದನೂರು: ಸಾರ್ವಜನಿಕರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡಬೇಕೆಂಬ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದರೂ ಅವುಗಳ ಸಫಲವಾಗದಿರಲು ಕೆಲವು ನೌಕರರಲ್ಲಿ ಮನೆ ಮಾಡಿರುವ ನಿರ್ಲಕ್ಷ್ಯ ಮನೋಭಾವವೇ ಕಾರಣವೆಂದು ಲೋಕಾಯುಕ್ತ ಡಿವೈಎಸ್ಪಿ ಭೂಪಯ್ಯ ಕಿಡಿಕಾರಿದರು.
ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಕರೆದಿದ್ದ ಸಾರ್ವಜನಿಕರ ಕುಂದು ಕೊರತೆಗಳ ವಿಚಾರಣ ಸಭೆಯಲ್ಲಿ ಅವರು ಮಾತನಾಡಿದರು. ಪಟ್ಟಣದ ಹೊರವಲಯದಲ್ಲಿರುವ ಕಲ್ಲೂಡಿ ಗ್ರಾಮದ ನಿವಾಸಿ ಕೆ.ಪಿ. ನರಸಿಂಹಮೂರ್ತಿ ಲೋಕಾಯುಕ್ತ ಅಧಿಕಾರಿಗಳಿಗೆ ಅರ್ಜಿ ನೀಡಿ, ನಾಗಪ್ಪಬ್ಲಾಕ್‌ಗೆ ಹೊಂದಿಕೊಂಡಿರುವ ತಮ್ಮ ಜಮೀನಿನ ಸರ್ವೇ ಸ್ಕೇಚ್ ಮತ್ತು ಇತರೆ ದಾಖಲೆಗಳನ್ನು ಸರ್ವೇ ಅಧಿಕಾರಿಗಳು ನೀಡದೆ ಅನಗತ್ಯ ವಿಳಂಬ ಮಾಡುತ್ತಿದ್ದಾರೆ, ಈ ಸಂಬಂಧ ಈ ಹಿಂದೆ ನಡೆದ ಸಾರ್ವಜನಿಕರ ಕುಂದು ಕೊರತೆಗಳ ಸಭೆಯಲ್ಲೂ ಅರ್ಜಿಯನ್ನು ನೀಡಿದ್ದೆ ಆದರೂ ಪರಿಹಾರವಾಗಿಲ್ಲ ಎಂದು ದೂರಿದ್ದರು.
ಇದರಿಂದ ಕೆಂಡಮಂಡಲವಾದ ಡಿವೈಎಸ್ಪಿ ಭೂಪಯ್ಯ ಒಂದೇ ಸಮಸ್ಯೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಕಚೇರಿಗಳಿಗೆ ಎಷ್ಟು ಅರ್ಜಿಗಳನ್ನು ನೀಡಬೇಕು. ಹೀಗೆ ಪದೇ ಪದೇ ಸಾರ್ವಜನಿಕರಿಂದ ಕೇಳಿಸಿಕೊಳ್ಳದೆ ತಕ್ಷಣ ಸರ್ವೆಸ್ಕೆಚ್ ನೀಡುವಂತೆ ಸರ್ವೆ ಅಧಿಕಾರಿಗಳಗೆ ಸೂಚಿಸಿದಾಗ ಸಾಯಂಕಾಲದ ಸಮಯಕ್ಕೆ ದಾಖಲೆಗಳನ್ನು ನೀಡುವುದಾಗಿ ಸರ್ವೇಯರ್ ಸಬೂಬು ಹೇಳಿದಾಗ ಸಿಟ್ಟಿಗೆದ್ದ ಭೂಪಯ್ಯ ಲೋಕಯುಕ್ತರು ಕೇಳಿದಾಗ ಎರಡು-ಮೂರು ಗಂಟೆಗಳಲ್ಲಿ ಕೊಡಲು ಸಾಧ್ಯವಾಗುತ್ತದೆ ಆದರೆ ಸಾರ್ವಜನಿಕರು ಕೇಳಿದಾಗ ತಿಂಗಳುಗಳು ಕಳೆದರೂ ಸಾಧ್ಯವಾಗುವುದಿಲ್ಲ. ನಾವೆಲ್ಲಾ ತಿನ್ನುತ್ತಿರುವ ಅನ್ನ ಸಾರ್ವಜನಿಕರು ಸಲ್ಲಿಸಿದ ತೆರಿಗೆ ಹಣದಿಂದ ನೀಡಿದ್ದು ಎಂಬುದು ನೆನಪಿರಲಿ ಎಂದು ತಿಳಿಹೇಳಿದರು.
ತಾಲೂಕಿನ ಚೀಗಟಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಸಮೀಪದ ಚರಂಡಿ ಕಸದಿಂದ ತುಂಬಿ ನಾರುತ್ತಿದೆ. ಇದನ್ನು ಸ್ವಚ್ಛಗೊಳಿಸುವಲ್ಲಿ ಗ್ರಾಪಂ ವಿಫಲವಾಗಿದೆ ಎಂದು ಸಾರ್ವಜನಿಕರು ಸಲ್ಲಿಸಿದ್ದ ಅರ್ಜಿಯ ವಿಷಯವನ್ನು ತಾಪಂ ಇಒ ರೆಡ್ಡಪ್ಪರಿಗೆ ತಿಳಿಸಿ ಶೀಘ್ರ ಕ್ರಮ ಜರುಗಿಸಲು ಸೂಚಿಸಿದರು.
ತಾಲೂಕಿನ ಕಲ್ಲೂಡಿ ಗ್ರಾಮದ ಶಾಲೆಯ ಸಮೀಪ ರಸ್ತೆಗೆ ಹಂಪ್ ಹಾಕಿಸಬೇಕೆಂದು ರೈತ ಸಂಘದ ಮುದ್ದುರಂಗಪ್ಪ ಕೋರಿದರು. ಈ ಸಂಬಂಧ ಪರಿಶೀಲಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿದರು. ಸಭೆಯಲ್ಲಿ ಕೇವಲ ಮೂರು ಅರ್ಜಿಗಳು ಮಾತ್ರ ಸಂದಾಯವಾದವು. ಲೋಕಾಯುಕ್ತ ಸರ್ಕಲ್ ಇನ್ಸ್‌ಪೆಕ್ಟರ್ ಅಶೋಕ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.