ಅಸರ್ಮಪಕ ವಿದ್ಯುತ್: ಬೆಸ್ಕಾಂಗೆ ಮುತ್ತಿಗೆ
ಮಾಲೂರು: ಅಸರ್ಮಪಕ ವಿದ್ಯುತ್ ಪೊರೈಕೆ ವಿರುದ್ಧ ಸ್ಥಳೀಯ ಜೈ ಕರ್ನಾಟಕ ವೇದಿಕೆ ಇಲ್ಲಿನ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿತು.
ಜೈ ಕರ್ನಾಟಕ ವೇದಿಕೆಯ ತಾಲೂಕು ಅಧ್ಯಕ್ಷ ಟಿ.ಆರ್. ನಾರಾಯಣಗೌಡ ಮಾತನಾಡಿ, ವಿದ್ಯುತ್ ನಿಲುಗಡೆಯಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಹಾಗೂ ಕೃಷಿಗಾರರು ತೊಂದರೆ ಅನುಭವಿಸುತ್ತಿದ್ದಾರೆ ನಿಲುಗಡೆಯನ್ನು ಬೆಸ್ಕಾಂ ತಪ್ಪಿಸದಿದ್ದರೆ ಸಂಘಟನೆ ಉಗ್ರ ಹೋರಾಟಕ್ಕೆ ಸಿದ್ಧವಾಗಲಿದೆ ಎಂದು ಎಚ್ಚರಿಸಿದರು. ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಎಇಇ ವಾಸುದೇವ್ ಅವರಿಗೆ ಮನವಿ ನೀಡಿದರು. ಕಾರ್ಯಧ್ಯಕ್ಷ ವಿ.ಶ್ರೀನಿವಾಸ್, ಉಪಾಧ್ಯಕ್ಷ ಬಿ.ಎ. ರಾಜಪ್ಪ, ಕಾರ್ಯದರ್ಶಿ ಸುರೇಶ್ ಕುಮಾರ್, ವಾಸು, ಪ್ರಕಾಶ್ ಬಾಬು, ಶ್ರೀನಿವಾಸ್, ಶಶಿಕುಮಾರ್, ಸುಬ್ರಮಣಿ, ವಿಜಯ ಕುಮಾರ್, ಮಂಜುನಾಥ್, ಕಲೀಮ್, ಹರೀಶ್ ಇದ್ದರು.
ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ
ಕೋಲಾರ: ನಗರದ ಆದರ್ಶ ಕಾಲೇಜು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಡಿ.30 ಸೋಮವಾರ ಬೆಳಿಗ್ಗೆ 9.30ಕ್ಕೆ ರಾಷ್ಟ್ರಕವಿ ಕುವೆಂಪು ಸ್ಮರಣಾರ್ಥ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳು ಭಾಷಣ ಮಾಡಬೇಕಾಗಿದೆ. ಪ್ರತಿ ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಬಹುದು, ಪ್ರಾಂಶುಪಾಲರ ಸಹಿಯೊಂದಿಗೆ ವಿವರಗಳನ್ನು ಭರ್ತಿಮಾಡಿ ಅರ್ಜಿ ಸಲ್ಲಿಸಬೇಕು, ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲ, ಸ್ಪರ್ಧಿಗಳು ಪ್ರಥಮ ಅಥವಾ ದ್ವಿತೀಯ ಪದವಿಪೂರ್ವ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ಮಾತ್ರ ಪ್ರವೇಶ. ಡಿ.25 ರೊಳಗೆ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕಾಲೇಜಿನ ವ್ಯವಸ್ಥಾಪಕ ಸಿ. ರವೀಂದ್ರ ಸಿಂಗ್ ತಿಳಿಸಿದ್ದಾರೆ. ವಿವರಗಳಿಗೆ ಜೆ.ಜಿ. ನಾಗರಾಜ್ ಅಧ್ಯಕ್ಷರು, ಜಿಲ್ಲಾ ಕ.ಸಾ.ಪ ಮೊ.9986096980 , ಎಸ್.ಕೆ. ಕಲಾಂ ಪ್ರಾಂಶುಪಾಲರು 9845262563, ಸಿ. ರವೀಂದ್ರ ಸಿಂಗ್ 9731573462 ಸಂಪರ್ಕಿಸಲು ಕೋರಿದ್ದಾರೆ.
ಜೂಜಾಟ ತಡೆಗೆ ಒತ್ತಾಯ
ಶ್ರೀನಿವಾಸಪುರ: ತಾಲೂಕಿನ ರಾಯಲ್ಪಾಡು ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಅಕ್ರಮವಾಗಿ ಅಂದರ್ ಬಾಹರ್ ನಡೆಯುತ್ತಿದ್ದರು ಪೊಲೀಸ್ರು ನಿರ್ಲಕ್ಷ್ಯವಹಿಸಿದ್ದಾರೆ ಎಂದು ನಾಗರಿಕರು ದೂರಿದ್ದಾರೆ. ರಾಯಲ್ಪಾಡು ಹೋಬಳಿ ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿದ್ದು ಗ್ರಾಮಗಳಲ್ಲಿ ಜೂಜಾಟ ನಡೆಯುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ ಇಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ದಲಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಚಿಂತಾಮಣಿ: ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗಗಳ ಕೆಎಸ್ಆರ್ಟಿಸಿ ನೌಕರರ ಸಂಘಟನೆಗಾಗಿ ಶ್ರಮಿಸಿದ ಶ್ರೀನಿವಾಸ್ರನ್ನು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನೀಡಿರುವ ಡಾ.ಬಿ.ಆರ್. ಅಂಬೇಡ್ಕರ್ ಫೆಲೋಶಿಪ್ ನ್ಯಾಶನಲ್ ಅಕಾಡೆಮಿ ಪ್ರಶಸ್ತಿಗೆ ಬಾಜನರಾಗಿದ್ದಾರೆ. ನಗರದ ಕೆಎಸ್ಆರ್ಟಿಸಿ ಉಪ ವಿಭಾಗದ ಅಧಿಕಾರಿ ಶ್ರೀನಿವಾಸ್ ಉತ್ತಮ ಸೇವೆ ಸಲ್ಲಿಸಿರುವುದನ್ನು ಗುರ್ತಿಸಿ ದೆಹಲಿಯಲ್ಲಿ ಕಳೆದ 12 ರಂದು ನಡೆದ 29 ನೇ ದಲಿತ ಬರಹಗಾರರ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪಡೆದ ವರನ್ನು ಚಿಂತಾಮಣಿ ಉಪ ವಿಭಾಗದ ಕೆಎಸ್ಆರ್ಟಿಸಿ ನೌಕರರು ಹಾಗೂ ಅಧಿಕಾರಿಗಳು ಅಭಿನಂದಿಸಿದ್ದಾರೆ.
ಕದಸಂಸ ರಾಜಕೀಯ ಸಮಾವೇಶ
ಕೋಲಾರ: ನಗರದ ನಚಿಕೇತ ನಿಲಯದಲ್ಲಿ ಡಿ.23 ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ದಲಿತರ ಸ್ವಸಂತ್ರ ರಾಜ್ಯಾಧಿಕಾರದೆಡೆಗೆ ಎಂಬ ವಿಚಾರದ ಆಧಾರದ ಮೇಲೆ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಮುಖಂಡ ನಾಗನಾಳ ಮುನಿಯಪ್ಪ ತಿಳಿಸಿದ್ದಾರೆ.
ಇಂದು ಜಿಲ್ಲೆಗೆ ಬರ ಅಧ್ಯಯನ ತಂಡ
ಕೋಲಾರ: ಕೇಂದ್ರ ಬರ ಅಧ್ಯಯನ ತಂಡ ಡಿ.23 ರಂದು ಕೋಲಾರ ಜಿಲ್ಲೆಗೆ ಆಗಮಿಸಿ ಬರ ಪರಿಸ್ಥಿತಿಯನ್ನು ಪರಿಶೀಲಿಸಲಿದೆ. ಕೇಂದ್ರ ತಂಡವು ಸೋಮವಾರ ಬೆಳಿಗ್ಗೆ 10 ಗಂಟೆಗೆ ಆಗಮಿಸಿ ಮೊದಲಿಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಲಿದ್ದು ನಂತರ 11 ಗಂಟೆಗೆ ಬಂಗಾರಪೇಟೆ, 11.15 ಕ್ಕೆ ಬಡಮಾಕನಹಳ್ಳಿ, ಗೊಲ್ಲಹಳ್ಳಿ, ಅಯ್ಯಪಲ್ಲಿ, ನಲ್ಲೂರು ಕೆರೆ, ನತ್ತ ಗ್ರಾಮಕ್ಕೆ ತಂಡದ ಸದಸ್ಯರು ಭೇಟಿ ನೀಡುವರು. ಮಧ್ಯಾಹ್ನ 12.40ಕ್ಕೆ ಮುಳಬಾಗಲು ತಾಲೂಕಿನ ಊರುಕುಂಟೆ ಮಿಟ್ಟೂರು, ಬಲ್ಲಾ ಗ್ರಾಮ, ಕೂತಾಂಡಹಳ್ಳಿ ಮತ್ತು ಮುಡಿಯನೂರು ಕೆರೆಗೆ ಭೇಟಿ. ನಂತರ 3 ಗಂಟೆಗೆ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಸಾಗರ ಕೆರೆ, ಹೆಬ್ಬಟ, ಗುಲ್ಲಕುಂಟೆ ಗ್ರಾಮ ಹಾಗೂ ತಾಡಿಗೋಳ್ ಕೆರೆ ವೀಕ್ಷಣೆ ಮಾಡಲಿದ್ದಾರೆ.
ವಿಷ ಸೇವಿಸಿ ಯುವಕ ಆತ್ಮಹತ್ಯೆ
ಚಿಂತಾಮಣಿ: ಚಹಾ ಅಂಗಡಿಯ ಯುವಕನೊಬ್ಬ ಅನುಮಾನಾಸ್ಪದವಾಗಿ ಮೃತ ಪಟ್ಟಿರುವ ಘಟನೆ ನಗರದ ಬಂಬೂ ಬಜಾರ್ನಲ್ಲಿ ಭಾನುವಾರ ಬೆಳಕಿಗೆ ಬಂದಿದೆ. ಬಾಗೇಪಲ್ಲಿ ರಸ್ತೆಯ ಶ್ರೀನಿವಾಸಪುರ ಗ್ರಾಮದ ದ್ಯಾವಪ್ಪ ಎಂಬವರ ಮಗ ಮುರಳಿ(25) ಶನಿವಾರ ನಗರದ ಎಂ.ಜಿ. ರಸ್ತೆಯ ಬಂಬೂ ಬಜಾರ್ ಕಾರ್ನರ್ ಬಳಿ ಇರುವ ಚಹಾ ಅಂಗಡಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಭಾನುವಾರ ಸುದ್ದಿ ತಿಳಿದ ವೃತ್ತ ನಿರೀಕ್ಷಕ ನಂಜಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸರು ಪ್ರಕರಣಕ್ಕೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸಾಲ ಮೇಳ
ಕೋಲಾರ: ಕೆನರಾ ಬ್ಯಾಂಕ್ನಿಂದ ಡಿ.23 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಎಂ.ಡಿ.ಕೆ. ಕಲ್ಯಾಣ ಮಂಟಪದಲ್ಲಿ ಸಾಲ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಸಚಿವ ಕೆ.ಎಚ್. ಮುನಿಯಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

